ಹೈಟೆಕ್ ಮಾರುಕಟ್ಟೆಗೆ ಮೂಲಭೂತ ಸೌಕರ್ಯದ ಕೊರತೆ

KannadaprabhaNewsNetwork |  
Published : Sep 29, 2026, 02:15 AM IST
(28ಎನ್.ಆರ್.ಡಿ4 ಹೈಟೆಕ ತರಕಾರಿ ಮಾರುಕಟ್ಟಿಯಲ್ಲಿ ಮೂಲಭೂತ ಸೌಲಭ್ಯಗಳಲ್ಲಿದೆ ಪರದಾಡುವ ಸ್ಥಿತಿ.)     | Kannada Prabha

ಸಾರಾಂಶ

ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳ ಜನರ ಬಹುದಿನದ ಆಸೆಯೆಂತೆ ಪಟ್ಟಣದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆ ನಿಮಾರ್ಣವಾಗಿದೆ. ಆದರೆ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶುದ್ಧ ಕುಡಿಯುವ ನೀರು, ಜನರು ಒಳಗೆ ಹೋಗಲು ಸರಿಯಾದ ಮೆಟ್ಟಿಲುಗಳ ವ್ಯವಸ್ಥೆ ಇಲ್ಲ

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳ ಜನರ ಬಹುದಿನದ ಆಸೆಯೆಂತೆ ಪಟ್ಟಣದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆ ನಿಮಾರ್ಣವಾಗಿದೆ. ಆದರೆ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ಬುಧವಾರ ಪಟ್ಟಣದಲ್ಲಿ ನಡೆಯುವ ಸಂತೆಗೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಾವಿರಾರು ಜನರು ಕಾಯಿಪಲ್ಲೆ ಮತ್ತು ಅಗತ್ಯ ಕಿರಾಣಿ ಖರೀದಿಸಲು ಬರುತ್ತಾರೆ. ಮಾರುಕಟ್ಟೆಯಲ್ಲಿ ಶುದ್ಧ ಕುಡಿಯುವ ನೀರು, ಒಳಗೆ ಜನರು ಹೋಗಲು ಸರಿಯಾದ ಮೆಟ್ಟಿಲುಗಳು ಇಲ್ಲದೆ ಬೀಳುವ ಭಯದಲ್ಲಿ ಮಾರುಕಟ್ಟೆ ಪ್ರವೇಶಿಸುವ ಪರಿಸ್ಥಿತಿ ಜನರಿಗೆ ಎದುರಾಗಿದೆ.

ಪುರಸಭೆಯವರು ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಬೋರ್ ಹಾಕಿದ್ದಾರೆ. ಆದರೆ ನೀರು ಶುದ್ಧೀಕರಣ ಮಾಡುವ ಘಟಕ ಸ್ಥಾಪಿಸಿಲ್ಲ. ಜನರು ಅನಿವಾರ್ಯವಾಗಿ ಇದೇ ಬೋರ್ ನೀರು ಕುಡಿಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ರಾತ್ರಿ ಸಮಯದಲ್ಲಿ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಸಮಸ್ಯೆಗಳನ್ನು ಎದರಸುತ್ತಿದ್ದಾರೆ.

ಶಾಸಕರ ಭೇಟಿ: ಈ ಹಿಂದೆ ತರಕಾರಿ ಮಾರುಕಟ್ಟೆ ಕಾಮಗಾರಿ ನಡೆದ ಸಂದರ್ಭ ಶಾಸಕ ಸಿ.ಸಿ. ಪಾಟೀಲರು ಭೇಟಿ ನೀಡಿದಾಗ ಸೋಲಾರ್‌ ದೀಪ ಅಳವಡಿಸಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದರೂ ಸಹ ಈವರಿಗೆ ಅಧಿಕಾರಿಗಳು ಯಾವುದೇ ಕ್ರಮ ತಗಿದುಕೊಂಡಿಲ್ಲ.

ದನಕರುಗಳು ಹಾವಳಿ:

ಈ ಮಾರುಕಟ್ಟೆಯಲ್ಲಿ ಅಂಗವಿಕಲರು ಮತ್ತು ವಯಸ್ಸಾದವರಿಗೆ ಮಾರುಕಟ್ಟೆಗೆ ಒಳಗೆ ಹೋಗಲು ಸರಿಯಾದ ಮೆಟ್ಟಲುಗಳ ವ್ಯವಸ್ಥೆ ಇಲ್ಲ. ದನ ಕರಗಳ ಹಾವಳಿಯಿಂದ ಸಾರ್ವಜನಿಕರು, ವ್ಯಾಪಾರಸ್ಥರು ಹೈರಾಣಾಗಿದ್ದಾರೆ.

ಮಳೆಯಾದರೆ ಪೂರ್ತಿ ಮಾರ್ಕೆಟ್ ಚಾವಣಿ ಸೋರುತ್ತದೆ. ಅಲ್ಲದೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ನುಗ್ಗಿ ಮಾರುಕಟ್ಟೆ ಹೊಂಡದಂತಾಗುತ್ತದೆ.

ವಿವಿಧ ಸಂಘಟನೆಗಳಿಂದ ಈ ಎಲ್ಲಾ ವಿಷಯಗಳನ್ನು ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತರಕಾರಿ ವ್ಯಾಪಾರಸ್ಥ ಜಹಾಂಗೀರಖಾನ ಎಂ.ಪಠಾಣ ಆರೋಪಿಸಿದ್ದಾರೆ.ತರಕಾರಿ ಮಾರುಕಟ್ಟೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಒಂದು ವಾರದಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಪುರಸಭೆ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಜಿಲ್ಲಾ ಜಯ ಕರ್ನಾಟಕ ಸಂಘಟನೆ ಮುಖಂಡ ಬಸವರಾಜ ತಾವರೆ ತಿಳಿಸಿದ್ದಾರೆ.ಈಗಾಗಲೇ ಶುದ್ಧ ನೀರಿನ ಘಟಕ ಸ್ಥಾಪಿಸಿಲು ಹುಬ್ಬಳ್ಳಿಯ ಖಾಸಗಿ ಏಜೆನ್ಸಿಯವರ ಜೊತೆ ಮಾತನಾಡಲಾಗಿದೆ. ಆದಷ್ಟು ಬೇಗ ಮಾರುಕಟ್ಟೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು ಎನ್ನುತ್ತಾರೆ ಪುರಸಭೆ ಅಧಿಕಾರಿ ಸುಭಾಸ ಖುದಾನಪೂರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾದ ಜೀವನಶೈಲಿ ಅನಾರೋಗ್ಯಕ್ಕೆ ಕಾರಣ: ಡಾ. ಹಿರೇಮಠ
ರಾಷ್ಟ್ರೀಯ ಏಕತೆ ಬೆಸೆಯುವ ಭಾಷೆ ಹಿಂದಿ: ಡಾ. ಹುಸೇನಸಾಬ