ಹಿರೇಕೆರೂರು ತಾಲೂಕಿನ ಕೊಡ ಗ್ರಾಮದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಹಿಂದೂ ಸಮ್ಮೇಳನ ನೆರವೇರಿತು.
ಹಿರೇಕೆರೂರು: ತಾಲೂಕಿನ ಕೊಡ ಗ್ರಾಮದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಹಿಂದೂ ಸಮ್ಮೇಳನ ನೆರವೇರಿತು.
ಕೊಡದ ಕೆರೆ ಏರಿಯಿಂದ ಕಾರ್ಯಕ್ರಮದ ಶೋಭಾಯಾತ್ರೆ ಗೋ ಪೂಜೆಯೊಂದಿಗೆ ಜಂಗಮಕ್ಷೇತ್ರ ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಗಳ ಮಠದ ಮಹಾಂತಸ್ವಾಮಿಗಳು ಚಾಲನೆ ನೀಡಿದರು. ಕೊಡದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಹೊರಟು ಆಂಜನೇಯಸ್ವಾಮಿ ದೇವಸ್ಥಾನ ಅವರಣದಲ್ಲಿ ಶೋಭಾಯಾತ್ರೆ ಮುಕ್ತಾಯಗೊಂಡಿತು. ತದನಂತರ ಸಾರ್ವಜನಿಕ ಕಾರ್ಯಕ್ರಮ ನೆರವೇರಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿಗಳು ಶ್ರೀ ಜನಮೇಜಯ ಉಮರ್ಜಿ ಅವರು ಮಾತನಾಡಿದರು. ಭಾರತದಲ್ಲಿ ಹಿಂದೂಗಳು ಜಾಗೃತರಾಗಬೇಕು, ತಮ್ಮ ಧರ್ಮ ರಕ್ಷಣೆ ಕಾರ್ಯ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕೊಟ್ಟು ಒಳ್ಳೆ ಸಮಾಜ ನಿರ್ಮಾಣವಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ಧಾರೂಢಸ್ವಾಮಿ ಮಠದ ಸತ್ಯಪ್ರಮೋದಂದ್ರ ಸರಸ್ವತೀ ಸ್ವಾಮಿಗಳು ವಹಿಸಿದರು. ಅಧ್ಯಕ್ಷತೆ ಪರಮೇಶಪ್ಪ ಉ ಅರ್ಕಚಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್, ಹಿಂದೂ ಸಮ್ಮೇಳನ ಸಮಿತಿ ಕೊಡ ಹೋಬಳಿಯ ಎಲ್ಲಾ ಸದಸ್ಯರು, ಶಿವಕುಮಾರ್ ಹಂಚಿನೇರ, ವಿನಾಯ ಕರೇಗೌಡರ್, ಸಿದ್ದನಗೌಡ ಕರೇಗೌಡ್ರ, ವಿಶ್ವನಾಥ ಕೊಟ್ಟೂರ, ಪ್ರದೀಪ ಪಾಟೀಲ, ಕೋಟ್ರೇಶ ಕರೇಗೌಡ್ರ, ನಂದೇಶ ಅಬಲೂರು, ಶಿವುಕುಮಾರ ವಡೇನಪುರ, ಪ್ರಶಾಂತ ಕರೇಗೌಡ್ರ, ತೇಜಸ್ ಪಾಟೀಲ್, ಶಿವನಗೌಡ ಕರೇಗೌಡ್ರ, ರವಿ ದಾಸರ ಹೇಮಂತ ಇತ್ತರರು ಇದ್ದರು,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.