ಇಂದಿನಿಂದ ಹಿಂದೂ ಧರ್ಮ ಜಾಗರಣೆ ಧ್ವಜ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Sep 29, 2025, 01:05 AM IST
ಫೋಟೋ : 28ಎಚ್‌ಎನ್‌ಎಲ್2ಹಾನಗಲ್ಲ ವಿರಕ್ತಮಠದಲ್ಲಿ ಪೂರ್ವಭಾವಿ ಸಭೆಯಲ್ಲಿ ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿದರು. ಶ್ರೀ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ಇದ್ದರು.  | Kannada Prabha

ಸಾರಾಂಶ

ಇಡೀ ದೇಶಾದ್ಯಂತ ಈಗ ಹಿಂದೂ ಧರ್ಮ ಜಾಗರಣೆ ಧ್ವಜ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಸೆ. 29ರ ಹಾನಗಲ್ಲ ತಾಲೂಕಿನ 2500 ಅಧಿಕ ಮಠ ಮಂದಿರಗಳ ಮೇಲೆ ಭಗವಾಧ್ವಜ ಹಾರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ತಿಳಿಸಿದರು.

ಹಾನಗಲ್ಲ: ಇಡೀ ದೇಶಾದ್ಯಂತ ಈಗ ಹಿಂದೂ ಧರ್ಮ ಜಾಗರಣೆ ಧ್ವಜ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಸೆ. 29ರ ಹಾನಗಲ್ಲ ತಾಲೂಕಿನ 2500 ಅಧಿಕ ಮಠ ಮಂದಿರಗಳ ಮೇಲೆ ಭಗವಾಧ್ವಜ ಹಾರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ತಿಳಿಸಿದರು.ಭಾನುವಾರ ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್, ಬೆಳಗಾಲಪೇಟೆ ಇವರಿಂದ ನಡೆಯುತ್ತಿರುವ ಧರ್ಮ ಧ್ವಜ ಆಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಗಳ ಒಗ್ಗಟ್ಟು ಈಗ ಅತ್ಯವಶ್ಯವಾಗಿದ್ದು ಧರ್ಮ ಜಾಗೃತಿಗಾಗಿ ಎಲ್ಲರೂ ಕೂಡ ಶ್ರಮವಹಿಸೋಣ. ಇದರ ಅಂಗವಾಗಿ ನಡೆಯುತ್ತಿರುವ ಧರ್ಮಧ್ವಜ ಆಭಿಯಾನಕ್ಕೆ ಇಡೀ ತಾಲೂಕಿನ ಹಿಂದುಗಳು ಬೆಂಬಲಿಸಿ ಸಹಕರಿಸಿ. ಹಿಂದೂ ಪರ ಸಂಘಟನೆಗಳು ಆಸಕ್ತಿಯಿಂದ ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ಅಕ್ಕಿಆಲೂರಿನ ಶ್ರೀ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡಿ, ಹಬ್ಬಗಳಂದು ಇಡೀ ಹಿಂದೂಗಳ ಮನೆ ಮಠ ಮಂದಿರಗಳ ಮೇಲೆ ಧರ್ಮಧ್ವಜ ಹಾರಿಸುವ ಮೂಲಕ ಧಾರ್ಮಿಕ ಅಲೋಚನೆಗಳನ್ನು ಜಾಗೃತಗೊಳಿಸಬೇಕಾಗಿದೆ. ಹಿಂದು ಸಂಘಟಿತನಾದರೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇರುವುದಿಲ್ಲ. ಧರ್ಮಾಚರಣೆ ಅತ್ಯಂತ ಅಭಿಮಾನ ಸ್ವಾಭಿಮಾನದಿಂದ ನಡೆಯಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತ್ಯಜಿಸಿ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆ ನಮ್ಮೆಲ್ಲರಿಗೆ ಒಲವು ಮೂಡಲಿ. ನಾವೆಲ್ಲ ಒಗ್ಗಟ್ಟಾಗಿದ್ದರೆ ಮಾತ್ರ ಮುಂದಿನ ದಿನಗಳು ಒಳ್ಳೆಯ ದಿನಗಳಾಗಲು ಸಾಧ್ಯ ಎಂದರು.ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ಮಾತನಾಡಿ, ಕಳೆದ ವರ್ಷದಿಂದ ನಮ್ಮ ಟ್ರಸ್ಟನಿಂದ ಹಿಂದೂ ಧ್ವಜವನ್ನು ತಾಲೂಕಿನ ಎಲ್ಲ ಮಠ ಮಂದಿರಗಳ ಮೇಲೆ ಹಾರಿಸಲು ಆರಂಭಿಸಲಾಗಿದೆ. ಇದು ಪ್ರತಿ ವರ್ಷ ವಿಜಯದಶಮಿ ಹಾಗೂ ಯುಗಾದಿಯಂದು ನಿರಂತರವಾಗಿ ನಡೆಯಲಿದೆ ಎಂದರು.ಬೆಳಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಪಾದಯಾತ್ರೆ ಮೂಲಕ ಮಹಾತ್ಮಾಗಾಂಧಿ ವೃತ್ತದವರೆಗೆ ಭಗವಾಧ್ವಜ ಸಹಿತ ಪಾದಯಾತ್ರೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಾನಗಲ್ಲ ತಾಲೂಕಿನ ಎಲ್ಲ ಮಠಾಧೀಶರು ಗಣ್ಯರು ಪಾಲ್ಗೊಳ್ಳುವರು. ಎಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.ಸಭೆಯಲ್ಲಿ ನ್ಯಾಯವಾದಿ ಸೋಮಶೇಖರ ಕೋತಂಬರಿ, ರಾಮು ಯಳ್ಳೂರ, ಶಾಂತವೀರ ನೆಲೊಗಲ್ಲ, ಸಿದ್ದಲಿಂಗಪ್ಪ ತುಪ್ಪದ, ನಾಗಪ್ಪ ಶಿವಣ್ಣನವರ, ಅಮಿತ ಕಮಡೊಳ್ಳಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ