-ಟಿಬಿ ವೃತ್ತದಲ್ಲಿ ಗಣೇಶ ಮೂರ್ತಿ ಮೆರವಣಿಗೆಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಚಾಲನೆ
ಹಳೆ ಪ್ರವಾಸಿ ಮಂದಿರದ ಆವರಣದಲ್ಲಿ ವಿರಾಟ್ ಹಿಂದೂ ಮಹಾಸಾಗರ ಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಸರ್ಜನಾ ಮಹೋತ್ಸವ ಶನಿವಾರ ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರ ನಡುವೆ ಸಂಭ್ರಮ ಸಡಗರದಿಂದ ನಡಯಿತು.
ಟಿಬಿ ವೃತ್ತದಲ್ಲಿನ ಪೆಂಟಾಲ್ ನಿಂದ ಅಲಂಕೃತ ತೆರೆದ ವಾಹನದಲ್ಲಿ ಹೊರಟ ಗಣೇಶ ಮೂರ್ತಿಯ ಮೆರವಣಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಹಿರಿಯೂರು ವೃತ್ತ ಮದಕರಿ ವೃತ್ತದ ಮೂಲಕ ಸಾಗಿ ನಂತರ ಮಠದ ಹೊಂಡದಲ್ಲಿ ವಿಸರ್ಜನೆ ಗೊಳಿಸಲಾಯಿತು.ಟಿಬಿ ವೃತ್ತದಲ್ಲಿ ಗಣೇಶ ಮೂರ್ತಿಯ ಮೆರವಣಿಗೆಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಚಾಲನೆ ನೀಡಿದರು.
ಇದರ ಜೊತೆಯಲ್ಲಿ ಕರಡಿ ವೇಷದಾರಿಗಳ ಕುಣಿತ, ಹುಲಿ ವೇಷದಾರಿಗಳ ಕುಣಿತ ನೆರೆದಿದ್ದ ಜನರನ್ನು ರಂಜಿಸಿದವು.
ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಂದೂಬಸ್ತ್ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ನೃತ್ಯ ಮಾಡಿದ ಚನ್ನೈ ಹುಡುಗಿಯರು: ಮೆರವಣಿಗೆಗೆ ರಂಗು ತರಲು 20ಕ್ಕೂ ಹೆಚ್ಚು ಹುಡುಗಿಯರನ್ನು ಚನ್ನೈನಿಂದ ಕರೆತರಲಾಗಿತ್ತು. ಮೆರವಣಿಗೆಯಲ್ಲಿ ತಮಿಳು ಹಾಡಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು. ಗಣಪತಿ ವಿಸರ್ಜನೆ ವೇಳೆ ತಮಿಳು ಹಾಡು ಹಾಕಿದ್ದಕ್ಕೆ ಕೆಲವರು ಪ್ರಶ್ನಿಸಿದರೂ ಕ್ಯಾರೆ ಎನ್ನದೆ ನೃತ್ಯ ಮುಂದುವರೆದಿತ್ತು.
ಹೊಸದುರ್ಗದಲ್ಲಿ ವಿರಾಟ್ ಹಿಂದೂ ಮಹಾಸಾಗರ ಗಣಪತಿ ವಿಸರ್ಜನಾ ಮಹೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು.
ಪೋಟೋ: 26ಎಚ್‌ಎಸ್‌ಡಿ4