ಭಟ್ಕಳ: ಜಾರ್ಖಂಡ್ ಮೂಲದ ಅನ್ಯ ಕೋಮಿನ ಯುವಕನೋರ್ವ ಮಹಾರಾಷ್ಟ್ರದಿಂದ ಹಿಂದೂ ಅಪ್ರಾಪ್ತೆಯನ್ನು ಅಪಹರಿಸಿಕೊಂಡು ಭಟ್ಕಳಕ್ಕೆ ಬಂದಿದ್ದು, ಪಟ್ಟಣದ ಹುರುಳಿಸಾಲ್‌ನಲ್ಲಿ ಬಾಡಿಗೆ ಮನೆಯನ್ನು ಹುಡುಕುತ್ತಿರುವ ಸಂದರ್ಭದಲ್ಲಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಸುದ್ದಿ ತಿಳಿದ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಮುಖಂಡರು ಗ್ರಾಮೀಣ ಠಾಣೆಗೆ ತೆರಳಿ ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಅಪ್ರಾಪ್ತೆ ಹಿಂದೂ ಬಾಲಕಿಯನ್ನು ಅಪಹರಣ ಮಾಡಿಕೊಂಡು ಬಂದಿದ್ದಾನೆಂದು ಗೊತ್ತಿದ್ದರೂ ಅವರಿಗೆ ಹುರುಳಿಸಾಲ್‌ನಲ್ಲಿ ಬಾಡಿಗೆ ಮನೆಯನ್ನು ಗೊತ್ತು ಮಾಡಿ ವಾಸ್ತವ್ಯ ಮಾಡಲು ಅವಕಾಶ ಮಾಡಿದ ಸ್ಥಳೀಯ ಹೋಟೆಲ್ ನೌಕರನೋರ್ವನ ಮೇಲೆ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಪೊಲೀಸ್ ಇನ್ಸಪೆಕ್ಟರಗೆ ಮನವಿ ಸಲ್ಲಿಸಿದರು.ಪ್ರಕರಣದಲ್ಲಿ ಅನ್ಯ ಕೋಮಿನ ಬಾಲಕ ಹಾಗೂ ಹಿಂದೂ ಬಾಲಕಿ ಇಬ್ಬರೂ ಅಪ್ರಾಪ್ತರಾಗಿದ್ದು, ಅವರು ಬಂದಿರುವ ಕುರಿತು ಠಾಣೆಗೆ ಮಾಹಿತಿ ನೀಡದೇ ಅವರಿಬ್ಬರನ್ನು ಒಂದೇ ಮನೆಯಲ್ಲಿ ಇರಿಸುವ ಉದ್ದೇಶ ಹೊಂದಿದ್ದ ಹೋಟೆಲ್ ನೌಕರ ಲವ್ ಜಿಹಾದ್ ಮಾಡುತ್ತಿರುವ ಕುರಿತು ಅನುಮಾನವಿದೆ. ಹೀಗಾಗಿ ಅಪ್ರಾಪ್ತ ಯುವಕ ಹಾಗೂ ಆತನಿಗೆ ಮನೆಯನ್ನು ಬಾಡಿಗೆಗೆ ಕೊಡಿಲು ಸಹಾಯ ಮಾಡಿದ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಬೇಕು.
ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ವೇಳೆ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಾಗರಾಜ ದೇವಡಿಗ, ಹಿಂದೂ ಸಂಘಟನೆಯ ಪ್ರಮುಖರಾದ ಶ್ರೀಕಾಂತ ನಾಯ್ಕ, ರಾಘು ನಾಯ್ಕ, ಕುಮಾರ ನಾಯ್ಕ, ಶಿವರಾಮ ದೇವಡಿಗ, ವೆಂಕಟೇಶ ನಾಯ್ಕ ಮುಂತಾದವರಿದ್ದರು.