ಕುಕನೂರು: 13 ವರ್ಷದ ಪ್ರಧಾನಿ ನರೇಂದ್ರ ಮೋದಿ ಆಡಳಿತ ಹಾಗೂ ಸಿಎಂ ಸಿದ್ದರಾಮಯ್ಯ ಆಡಳಿತ ಹೊಂದಾಣಿಕೆ ಮಾಡಿದರೆ 2.5 ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಹೆಚ್ಚು ಅಭಿವೃದ್ಧಿ ಕಾರ್ಯ ಆಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ರಾಷ್ಟ್ರದಲ್ಲಿ ಅತ್ಯುತ್ತಮ ರಾಜ್ಯ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಬಡತನದಲ್ಲಿ ಬೆಳೆದ ಸಿದ್ದರಾಮಯ್ಯ ಬಡಜನರ ಬಗ್ಗೆ ಕಳಕಳಿ ವ್ಯಕ್ತಿ ಹೊಂದಿರುವ. 1985 ರ ಕಾಲಘಟ್ಟದಲ್ಲಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿರುವುದರಿಂದ ಜನಪರ ಕಾರ್ಯ ಆಗುತ್ತಿವೆ.ಇತ್ತೀಚೆಗೆ ಬಾಯಿಗೆ ಬಂದಂಗೆ ಮಾತನಾಡುತ್ತಿರುವ ರಾಜಕಾರಣಿಗಳು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಬೇಕು. ರಾಜ್ಯದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಹೆಚ್ಚಳವಾಗಿದೆ. ಕುಂಠಿತವಾಗಿಲ್ಲ ಎಂದರು.
ಪ್ರಧಾನಿ ಮನಮೋಹನ ಸಿಂಗ್ ಆಹಾರ ಭದ್ರತೆ ಯೋಜನೆ ಜಾರಿಗೆ ಮಾಡಿದ್ದರಿಂದ ಎಲ್ಲರಿಗೂ ಉಚಿತ ಆಹಾರ ಧಾನ್ಯ ಸಿಕ್ಕು ಹಸಿವಿನಿಂದ ಬಳಲುವುದು ಕಡಿಮೆಯಾಗಿದೆ. ರಾಜ್ಯದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಯೋಜನೆ ಬೇರೆ ಯಾವ ರಾಜ್ಯದಲ್ಲೂ ಜಾರಿ ಇಲ್ಲ.ಕರ್ನಾಟಕದಲ್ಲಿ ಮಾತ್ರ ಇದೆ. 1.24 ಕೋಟಿ ಮಹಿಳೆಯರಿಗೆ ₹30 ಸಾವಿರ ಕೋಟಿ ಹಣ ಗೃಹಲಕ್ಷ್ಮೀ ಯೋಜನೆಯಿಂದ ತಲುಪುತ್ತಿದೆ.4.36 ಕೋಟಿ ಜನರಿಗೆ ಆಹಾರ ಧಾನ್ಯ ಸಿಗುತ್ತಿದೆ. ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ 5 ಕೆಜಿ ಜತೆಗೆ 1ಕೆಜಿ ಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, 1 ಕೆಜಿ ಎಣ್ಣೆ ವಿತರಿಸಲಾಗುತ್ತಿದೆ. 3.5 ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಇಡೀ ವಿಶ್ವದಲ್ಲಿಯೇ ದಾಖಲೆ ಆಗುವಂತೆ ರಾಜ್ಯದಲ್ಲಿ ಇದುವರೆಗೆ 700 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ನಾಳೆ ಜ.12ಕ್ಕೆ ಶಕ್ತಿ ಯೋಜನೆ ಆರಂಭವಾಗಿ ಎರಡು ವರ್ಷ ಆಗಲಿದೆ. ಗೃಹಜ್ಯೋತಿ ಯೋಜನೆಯಲ್ಲಿ 1 ಕೋಟಿ 69 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಉತ್ತರ ಕರ್ನಾಟಕ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಅಸಹಕಾರ ಇದೆ. ಇದರ ಬಗ್ಗೆ ಬೆಳಗಾವಿ ಕಲಾಪದಲ್ಲಿ ಮಾತನಾಡಿದ್ದೇನೆ,ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ಸಹ ನೀಡಿಲ್ಲ. ಯುಕೆಪಿ ಯೋಜನೆ ಹಾಗೇ ನಿಂತಿದೆ,ನೀರಾವರಿ ಭಾಷಣ ಯಾರಾದರೂ ಮಾತನಾಡಿದರೆ ಅವರ ಸ್ವಂತ ಊರಿಗೆ ನೀರಾವರಿ ಮಾಡಿಕೊಂಡಿದ್ದೀರಾ ಎಂದು ಮೊದಲು ಕೇಳಿ ಎಂದು ಟೀಕಿಸಿದರು.
ವಿದ್ಯುತ್ ನೀಡುವಂತೆ ರೈತರ ಒತ್ತಾಯ