ಕನ್ನಡಪ್ರಭ ವಾರ್ತೆ ಮದ್ದೂರು
ಶೋಭಾಯಾತ್ರೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಅಳವಡಿಸಿದ್ದ ಭಗವಾ ಧ್ವಜ ಯಾತ್ರೆಗೆ ಮೆರುಗು ನೀಡಿತು. ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಮನ್ಮುಲ್ ನಿರ್ದೇಶಕ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ವಿಶ್ವ ಹಿಂದೂ ಪರಿಷತ್ತಿನ ಶಾಮಿಯಾನ ಗುರುಸ್ವಾಮಿ ಸೇರಿದಂತೆ ಸಮಿತಿ ಮುಖಂಡರು ಗೋಪೂಜೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಎಸ್.ಪಿ.ಸ್ವಾಮಿ, ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಯಾವುದೇ ಜಾತಿ, ಭೇದವಿಲ್ಲದೆ ಇಂದು ಸಮಾಜೋತ್ಸವ ಮತ್ತು ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ನಂತರ ಭಾರತ ಮಾತೆ ಭಾವಚಿತ್ರದೊಂದಿಗೆ ವೀರಗಾಸೆ ಮತ್ತು ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದದೊಂದಿಗೆ ಹಳೇ ಎಂ.ಸಿ.ರಸ್ತೆ ಮೂಲಕ ಪೇಟೆ ಬೀದಿ, ಕೋಟೆ ಬೀದಿ ಸೇರಿದಂತೆ ಹಳೇ ಬಸ್ ನಿಲ್ದಾಣದವರೆಗೆ ಶೋಭಾಯಾತ್ರೆ ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಸಮಾಜೋತ್ಸವ ಆಯೋಜನ ಸಮಿತಿಯ ಅವಿನಾಶ್, ತಾಲೂಕು ಪ್ರಚಾರಕ ಅರವಿಂದ್, ತಾಲೂಕು ಬಿಜೆಪಿ ಅಧ್ಯಕ್ಷ ಶಿವದಾಸ ಸತೀಶ್, ಮುಖಂಡರಾದ ಕೆ.ಎಸ್.ಮಲ್ಲಿಕಾರ್ಜುನ್, ಸುನಿಲ್ ಕುಮಾರ್, ಎಂ.ಜೆ.ಮಧುಕುಮಾರ್, ಎಂ.ಎಸ್.ಜಗನ್ನಾಥ್, ಎಂ.ಎಸ್.ವೀರಭದ್ರಸ್ವಾಮಿ, ಜಿ.ಸಿ.ಮಹೇಂದ್ರ, ಗೆಜ್ಜಲಗೆರೆ ಶೇಖರ, ಕೆ.ಕೃಷ್ಣ, ಮನು ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಯಾತ್ರೆ ಸಾಗಿ ಬಂದ ಮಾರ್ಗದ ಉದ್ದಕ್ಕೂ ಜಾಮಿಯಾ ಮಸೀದಿ, ದರ್ಗಾ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶ್ವಂತ್ ಕುಮಾರ್, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಶಿವಳ್ಳಿಯಲ್ಲಿ ಹಿಂದೂ ಸಮಾಜೋತ್ಸವಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದೂ ಸಮಾಜೋತ್ಸವ ಸಮಿತಿ ಶಿವಳ್ಳಿ ಇವರ ವತಿಯಿಂದ ಫೆ.೧ರಂದು ತಾಲೂಕಿನ ಶಿವಳ್ಳಿ ಗ್ರಾಮದ ಹಳೇ ಚನ್ನಯ್ಯಗೌಡ ಚಿತ್ರಮಂದಿರದ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಸದಸ್ಯ ಜಿ.ಎಂ.ರಾಘವೇಂದ್ರ ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೪.೩೦ರಂದು ನಡೆಯುವ ಕಾರ್ಯಕ್ರಮದಲ್ಲಿ ಶ್ರೀರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಚಾಮರಾಜನಗರ ಜಿಲ್ಲೆ, ಮಾರ್ಟಳ್ಳಿ ಹನೂರಿನ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಯೋಧ ಆರ್.ಲೂಯಿಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಮೈಸೂರು ವಿಭಾಗ ಸಹ ಬೌದ್ಧಿಕ್ ಪ್ರಮುಖ್ ಮಹೇಂದ್ರ ಅವರು ದಿಕ್ಸೂಚಿ ಭಾಷಣ ಮಾಡುವರು. ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ ೩ ಗಂಟೆಗೆ ಗ್ರಾಮದ ತಿರುಮಲನಾರಾಯಸ್ವಾಮಿ ದೇವಾಲಯದ ಆವರಣದಿಂದ ಶೋಭಾಯಾತ್ರೆ ನಡೆಯಲಿದ್ದು, ಶೋಭಾಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ೪.೩೦ರ ಹೊತ್ತಿಗೆ ವೇದಿಕೆಗೆ ತಲುಪಲಿದೆ ಎಂದು ವಿವರಿಸಿದರು.ಶಿವಳ್ಳಿ ಸುತ್ತಮುತ್ತಲ ಎಲ್ಲ ಗ್ರಾಮಗಳಿಂದಲೂ ಹಿಂದೂ ಕಾರ್ಯಕರ್ತರು ಭಾಗವಹಿಸುವರು. ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ೫ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಹಿಂದೂ ಸಮಾಜದ ಏಕತೆ, ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯನ್ನು ಬಲಪಡಿಸುವ ಮಹತ್ವದ ವೇದಿಕೆಯಾಗಿದೆ. ಸಮಸ್ತ ಹಿಂದೂ ಜನತೆಯಲ್ಲಿ ಈ ಅವಿನಾಶಿ ಸಂಸ್ಕೃತಿಯ ಅಂತಃಸತ್ವವನ್ನು ಅನಾವರಣ ಮಾಡುವ ಮೂಲಕ ಸನಾತನ ಸಂಸ್ಕೃತಿಯ ಮೌಲ್ಯಗಳು, ಧಾರ್ಮಿಕ ನಂಬಿಕೆಗಳು ಹಾಗೂ ಸಾಮಾಜಿಕ ಸಾಮರಸ್ಯವನ್ನು ಜಾಗೃತಗೊಳಿಸಿ ಹಿಂದೂ ಸಮಾಜವು ಸಂಘಟಿತವಾಗಬೇಕಿದೆ ಎಂದರು.ಮುಖಂಡರಾದ ಎಸ್.ಕೆ. ನಾಗರಾಜು, ವೇಣುಗೋಪಾಲ್, ಕುಮಾರ್, ವೆಂಕಟೇಶ್ ಅವರು ಗೋಷ್ಠಿಯಲ್ಲಿದ್ದರು.