ಗಜೇಂದ್ರಗಡದಲ್ಲಿ ಹಿಂದೂ ಸಮ್ಮೇಳನ ಬೃಹತ್ ಬೈಕ್ ರ‍್ಯಾಲಿ

KannadaprabhaNewsNetwork |  
Published : Feb 14, 2026, 02:45 AM IST
ಗಜೇಂದ್ರಗಡದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು. | Kannada Prabha

ಸಾರಾಂಶ

ಹಿಂದೂ ಸಮ್ಮೇಳನ ಪ್ರಚಾರ ರಥವು ಮುಂದೆ ಸಾಗಿದರೆ, ಯುವಕರು ಕೇಸರಿ ಶಲ್ಯ ಧರಿಸಿ ಬೈಕ್‌ಗೆ ಕೇಸರಿ ಭಗವಾಧ್ವಜ ಕಟ್ಟಿ ಹಿಂದೂ ಸಮ್ಮೇಳನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಗಜೇಂದ್ರಗಡ: ಪಟ್ಟಣದ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಫೆ. ೧೪ರಂದು ನಡೆಯುವ ಹಿಂದೂ ಸಮ್ಮೇಳನ, ಶೋಭಾಯಾತ್ರೆ ಹಿನ್ನೆಲೆ ಶುಕ್ರವಾರ ಸ್ಥಳೀಯ ಪ್ರಮುಖ ರಸ್ತೆಗಳಲ್ಲಿ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.

ಇಲ್ಲಿನ ಜಗದಂಬಾ ದೇಗುಲದಿಂದ ಆರಂಭವಾದ ಮೆರವಣಿಗೆಯು ಪಟ್ಟಣದ ಹಿರೇಬಜಾರ ಕಟ್ಟಿಬಸವೇಶ್ವರ ರಂಗ ಮಂದಿರ, ಕೊಳ್ಳಿಯವರ ಕತ್ರಿ ಮಾರ್ಗವಾಗಿ ಬಜರಂಗ ವೃತ್ತ, ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡುರಸ್ತೆ, ಕೆ.ಕೆ. ವೃತ್ತದ ಮೂಲಕ ಬೈಕ್ ರ‍್ಯಾಲಿಯು ಜಗದಂಬಾ ದೇವಸ್ಥಾನಕ್ಕೆ ಬಂದು ತಲುಪಿತು.ಹಿಂದೂ ಸಮ್ಮೇಳನ ಪ್ರಚಾರ ರಥವು ಮುಂದೆ ಸಾಗಿದರೆ, ಯುವಕರು ಕೇಸರಿ ಶಲ್ಯ ಧರಿಸಿ ಬೈಕ್‌ಗೆ ಕೇಸರಿ ಭಗವಾಧ್ವಜ ಕಟ್ಟಿ ಹಿಂದೂ ಸಮ್ಮೇಳನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಈ ಮಾರ್ಗವು ಸಂಪೂರ್ಣವಾಗಿ ಕೇಸರಿ ಬಣ್ಣ ಎರಚಿದಂತೆ ಕಾಣಿಸುತ್ತಿತ್ತು. ಬೈಕ್ ರ‍್ಯಾಲಿಯಲ್ಲಿ ಆಂಜನೇಯ ಸ್ವಾಮಿಯ ನಾಮಸ್ಮರಣೆಯು ಮಾರ್ದನಿಸಿತು. ಹಿಂದೂ ಸಮ್ಮೇಳನ ಅಧ್ಯಕ್ಷ ರವೀಂದ್ರ ಶೀಂಗ್ರಿ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸಲು, ಹಿಂದೂ ಸಮಾಜವನ್ನು ಜಾಗೃತಿಗೊಳಿಸುವುದಕ್ಕಾಗಿ ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.ಆರ್‌ಎಸ್ಎಸ್ ಹಿರಿಯ ಮುಖಂಡ ತಿಮ್ಮಣ್ಣ ವನ್ನಾಲ ಅವರು ಬೃಹತ್ ಬೈಕ್ ರ‍್ಯಾಲಿಗೆ ಕೇಸರಿ ಧ್ವಜ ಹಿಡಿದು ಚಾಲನೆ ನೀಡಿದರು. ಸಮಿತಿ ಉಪಾಧ್ಯಕ್ಷ ಆನಂದ ಮಂತ್ರಿ, ಚಂದ್ರಕಾಂತ ಮಹೇಂದ್ರಕರ, ಸಂಜೀವ ಜೋಶಿ, ರವಿ ಕಲಾಲ, ಮಹಾದೇವ ವರ್ಣಿಕರ, ರವಿ ಬಡಿಗೇರ, ಸಂತೋಷ ವಸ್ತ್ರದ, ಅಂದಪ್ಪ ಸಂಕನೂರ, ಈರಪ್ಪ ಮಳಗಿ, ಈರಣ್ಣ ಶಿನ್ನೂರ, ಪ್ರಕಾಶ ಫಲಮಾರಿ, ಗಣೇಶ ನಾವಡೆ, ಲಕ್ಷ್ಮಣಸಾ ರಂಗ್ರೇಜಿ, ಗೋಪಿ ಬಾಂಡಗೆ, ಗುರು ಶೀಂಗ್ರಿ, ಗಣೇಶ ರಾಯಬಾಗಿ, ರಾಜು ಮಿಸ್ಕಿನ್, ರಾಜೇಂದ್ರ ಘೋರ್ಪಡೆ, ಅಶೋಕ ವನ್ನಾಲ, ಉಮೇಶ ರಾಯಬಾಗಿ, ಬಾಲಚಂದ್ರ ರಾಯಬಾಗಿ, ಭದರಿನಾಥ ಜೋಶಿ ಇತರರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮುಂಡರಗಿ: ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ಖಾಲಿ ಇರುವ ಗುಮಾಸ್ತ ಅಥವಾ ಬೆರಳಚ್ಚುಗಾರ ಒಂದು ಹುದ್ದೆ ಹಾಗೂ ದಾಲಾಯತ್ ಒಂದು ಹುದ್ದೆಯನ್ನು ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ಕನಿಷ್ಠ ವೇತನ ಕಾಯ್ದೆಯಡಿ ಮಾಸಿಕ ಸಂಭಾವನೆ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ತಾತ್ಕಾಲಿಕವಾಗಿದ್ದರಿಂದ ಇತರ ಯಾವುದೇ ಭತ್ಯೆಗಳು ಕೆ.ಸಿ.ಎಸ್.ಆರ್. ನಿಯಮಾವಳಿಗಳು ಅನ್ವಯಿಸುವದಿಲ್ಲ.ತಾಲೂಕಿನ ನ್ಯಾಯಾಲಯದ ಆವರಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿ ಮುಂಡರಗಿ ಕಚೇರಿಗೆ ಸೂಕ್ತ ಅರ್ಜಿ ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಸ್ವತಃ ದೃಡೀಕರಿಸಿ ಲಗತ್ತಿಸಿ ನೋಂದಾಯಿತ ಅಂಚೆ ಮೂಲಕ ಅಥವಾ ಮುಚ್ಚಿದ ಲಕೊಟಿಯಲ್ಲಿ ಅಥವಾ ಖುದ್ದಾಗಿ 2026ರ ಫೆ. 21ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಲಯದ ಸಂಕೀರ್ಣ ಮುಂಡರಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಂಗಾಪುರದಲ್ಲಿ ನೀರಿನ ಸಮಸ್ಯೆ: ಖಾಲಿ ಕೊಡ ಹಿಡಿದು ಪ್ರತಿಭಟನೆ
ಶುಖಮುನಿ ತಾತನ ಮಠಕ್ಕೆ ಸೇವೆಯ ಮಹಾಪೂರ