ಕನ್ನಡಪ್ರಭ ವಾರ್ತೆ ಹಳಿಯಾಳ
ಗುರುವಾರ ಹಳಿಯಾಳ ತಾಪಂ ಸಭಾಂಗಣದಲ್ಲಿ ಜಿಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮತ್ತು ಜಿಲ್ಲಾ ಪ್ರಯೋಗಾಲಯ ಸಹಯೋಗದಲ್ಲಿ ನಡೆದ ನೀರಿನ ಫೀಲ್ಡ್ ಟೆಸ್ಟ್ ಕಿಟ್(ಎಫ್.ಟಿ.ಕೆ) ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿಬ್ಬಂದಿ ತಮಗೆ ಒದಗಿಸಿದ ಕಿಟ್‌ಗಳ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಮಾಡಬೇಕು. ಈ ಪರಿಶೀಲನೆಯ ಸಮಯದಲ್ಲಿ ಯಾವುದೇ ಅಸಮಾನ್ಯತೆ ಅಥವಾ ಬದಲಾವಣೆಗಳು ಕಂಡು ಬಂದಲ್ಲಿ ತಕ್ಷಣ ಆ ನೀರಿನ ಮಾದರಿಯನ್ನು ಗ್ರಾಪಂ ಮುಖಾಂತರ ತಾಲೂಕು ಪ್ರಯೋಗಾಲಯಕ್ಕೆ ಕಳಿಸಿ ಹೆಚ್ಚಿನ ಪರಿಶೀಲನೆ ನಡೆಸಬೇಕೆಂದರು. ನೀರಿನಲ್ಲಿ ಖನಿಜಾಂಶಗಳ ಕೊರತೆಯಾಗಲಿ ಅಥವಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೂ ಅಂತಹ ನೀರಿನ ಸೇವನೆಯಿಂದ ಸಾರ್ವಜನಿಕರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್ ಸಂಜೀವಕುಮಾರ ಬಿರಾದಾರ್ ಮಾತನಾಡಿ, ಕೊಳಚೆ ಹೊಂಡಗಳ ನೀರು ಬಾವಿಯನ್ನು ಸೇರಿ ಕುಲುಷಿತಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿಯ ಸಂದರ್ಭದಲ್ಲೂ ಖಾಸಗಿ ಬಾವಿ, ಕೆರೆಗಳ ನೀರನ್ನು ಪರಿಶೀಲನೆ ನಡೆಸಲು ಹೇಳಬೇಕೆಂದರು.