ಜನವರಿ 30ರಂದು ಹಿಂದೂ ಸಮ್ಮೇಳನ, ಕರಪತ್ರ ಬಿಡುಗಡೆ

KannadaprabhaNewsNetwork |  
Published : Jan 23, 2026, 02:15 AM IST
ಜ. 30ರಂದು ಗಣೇಶ ಪೇಟೆಯ ಶೆಟ್ಟರ್ ಓಣಿಯಲ್ಲಿ ನಡೆಯುವ ಹಿಂದೂ ಸಮ್ಮೇಳನದ ಕರಪತ್ರ ಹಾಗೂ ಬ್ಯಾನರ್‌ನ್ನು ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಆಗಿರುವ ನಿಮಿತ್ತ ದೇಶದಾದ್ಯಂತ ನಡೆಯುತ್ತಿರುವ ಹಿಂದೂ ಸಮ್ಮೇಳನಕ್ಕೆ ತಮ್ಮ ಆಶೀರ್ವಾದವಿದೆ. ಈ ಸಮ್ಮೇಳನದಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು.

ಹುಬ್ಬಳ್ಳಿ:

ಇಲ್ಲಿನ ಗಣೇಶ ಪೇಟೆಯ ಶೆಟ್ಟರ್ ಓಣಿಯಲ್ಲಿ ಜ. 30ರಂದು ನಡೆಯುವ ಹಿಂದೂ ಸಮ್ಮೇಳನದ ಕರಪತ್ರ ಹಾಗೂ ಬ್ಯಾನರ್‌ನ್ನು ಮಂಗಳವಾರ ಪೇಟೆಯಲ್ಲಿರುವ ರುದ್ರಾಕ್ಷಿ ಮಠದಲ್ಲಿ ಬಸವಲಿಂಗ ಶ್ರೀಗಳು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಆಗಿರುವ ನಿಮಿತ್ತ ದೇಶದಾದ್ಯಂತ ನಡೆಯುತ್ತಿರುವ ಹಿಂದೂ ಸಮ್ಮೇಳನಕ್ಕೆ ತಮ್ಮ ಆಶೀರ್ವಾದವಿದೆ. ಈ ಸಮ್ಮೇಳನದಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.

ಈ ವೇಳೆ ಅಧ್ಯಕ್ಷ ಭಾಸ್ಕರ ಜಿತೂರಿ, ಉಪಾಧ್ಯಕ್ಷ ರಮೇಶ ದಿವಟೆ, ಬಸವರಾಜ ಕುಂದಗೋಳ, ಶ್ರೀಕಾಂತ ಕರಿ, ಕಾರ್ಯದರ್ಶಿ ನಾಗರಾಜ ಕಲಾಲ, ಸಹ ಕಾರ್ಯದರ್ಶಿ ವಿನಾಯಕ ಲದವಾ, ಈರೇಶ ಮುದಕವಿ, ಡಿ.ಕೆ. ಚವ್ಹಾಣ, ರಾಜು ಜರತಾರಘರ, ರಾಜಶ್ರೀ ಜಡಿ, ವಾಸು ಸುಳ್ಳದ, ನಾಗರತ್ನ ಬಳ್ಳಾರಿ, ರಂಗಸ್ವಾಮಿ ಬಳ್ಳಾರಿ, ಗುರು ಕ್ಯಾಂತಣ್ಣವರ, ಗುರು ಶೆಟ್ಟರ್, ಆಕಾಶ ಶೆಟ್ಟರ್, ನೀಲಕಂಠ ತಡಸದಮಠ, ಮಂಜು ಸುಗಂಧಿ, ವೀರೇಶ, ವಿನಾಯಕ ಅಥಣಿ, ನಾರಾಯಣ ಹಬಿಬ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ