ಕನ್ನಡಪ್ರಭ ವಾರ್ತೆ ಟೇಕಲ್
ಅವರು ಟೇಕಲ್‌ನಲ್ಲಿ ಇದೇ ಮೊದಲ ಬಾರಿಗೆ ನಡೆದ ಹಿಂದೂ ಸಮಾಜೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಿಂದೂ ಎಂಬ ವಾಕ್ಯ ಹೇಳಿದರೆ ದೇಹದಲ್ಲಿ ರೋಮಾಂಚನವಾಗಬೇಕು. ಅವನೇ ನಿಜವಾದ ಹಿಂದೂ ಎಂದು ಸ್ವಾಮಿ ವಿವೇಕಾನಂದರು ಈ ಹಿಂದೆ ತಿಳಿಸಿದ್ದರು. ಭಾರತದ ಭೂಪ್ರದೇಶದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು. ಆದರೆ ಮತ ಬೇರೆ ಮತಕ್ಕೂ ಧರ್ಮಕ್ಕೂ ಹೊಂದಾಣಿಕೆಯೇ ಇಲ್ಲ, ನಮ್ಮ ನಮ್ಮ ಜಾತಿಗಳನ್ನು ಮನೆ ಒಳಗೆ ಸಿಮಿತವಾಗಿರಬೇಕು. ಹೊರಬಂದರೆ ನಾವೆಲ್ಲ ಹಿಂದೂ ಎಂಬ ಮನೋಭಾವ ಇರಬೇಕು. ಅದನ್ನು ಪ್ರತಿಯೊಬ್ಬರು ಧೈರ್ಯವಾಗಿ ಹೇಳಬೇಕು ಎಂದರು. ಧರ್ಮಕ್ಕೆ ಸಮಾನವಾದ ವಾಕ್ಯ ಬೇರೊಂದು ಇಲ್ಲ. ಹಿಂದೂ ಧರ್ಮಕ್ಕೆ ಸ್ಥಾಪಕರಿಲ್ಲ ಹಾಗೂ ಹಿಂದಿನ ಹಿರಿಯರಿಗೆ ವಿದ್ಯೆ ಇರಲಿಲ್ಲ. ಅವರ ಅನುಭವದ ಆಧಾರದ ಮೇಲೆ ಹಿಂದೂ ಧರ್ಮವನ್ನು ಉಳಿಸಿಕೊಂಡು ಬಂದಿದ್ದರು. ಮನುಷ್ಯನು ಜಾತಿಯಿಂದ ಶ್ರೇಷ್ಟನಾಗುವುದಿಲ್ಲ, ಸಾಧನೆಯಿಂದ ಶ್ರೇಷ್ಟನಾಗಬೇಕು, ಸಂವಿಧಾನದ ರಚನೆಯ ಸಂದರ್ಭದಲ್ಲಿ ಸೆಕ್ಯುಲರ್ (ಜಾತ್ಯಾತೀತ) ಎಂಬ ಪದ ಇರಲಿಲ್ಲ. ಮಧ್ಯೆಯಲ್ಲಿ ಆಡಳಿತದಲ್ಲಿ ಪ್ರಧಾನಿಯೊಬ್ಬರು ಅದನ್ನು ಸೇರ್ಪಡೆಗೊಳಿಸಿದ್ದರಿಂದ ನಾವಿಂದು ಪಶ್ಚಾತಾಪ ಪಡೆಯುತ್ತಿದ್ದೇವೆ. ಜಾತಿಗೆ ಆದ್ಯತೆ ಕೊಡಬೇಡಿ ಧರ್ಮಕ್ಕೆ ಆದ್ಯತೆ ನೀಡಿ ಹಿಂದೂ ಧರ್ಮವನ್ನು ಸಂಘಟಿಸಿ ಎಂದರು.ಬೆಳ್ಳಾವಿ ಸಂಸ್ಥಾನದ ಶ್ರೀಶ್ರೀ ಶಿವಾಚಾರ್ಯಸ್ವಾಮಿಗಳು ಆಶೀರ್ವಚನ ನೀಡಿ, ಆರ್‌ಎಸ್‌ಎಸ್ ಪ್ರಾರಂಭವಾಗಿ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತಾದ್ಯಂತ ಹಿಂದೂ ಸಮಾವೇಶವು ನಡೆಯುತ್ತಿದೆ. ಮಾಲೂರು ತಾಲೂಕಿನ ಎರಡನೇ ಸಮಾಜೋತ್ಸವ ಕಾರ್ಯಕ್ರಮ ಹಳ್ಳಿ ಮಟ್ಟದಲ್ಲಿ ಇಂತಹ ಅದ್ಧೂರಿ ಕಾರ್ಯಕ್ರಮ ನಡೆದಿರುವುದು ಸಂತಸದ ವಿಷಯವಾಗಿದೆ. ಬಸವಣ್ಣನವರ ಸಪ್ತ ಸೂತ್ರಗಳನ್ನು ಹಿಂದೂಗಳು ಪಾಲಿಸಿದರೆ ಹಿಂದೂ ರಾಷ್ಟ್ರ ಬಲಿಷ್ಟವಾಗುತ್ತದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ನಡೆದ ಶೋಭಾಯಾತ್ರೆಯಲ್ಲಿ ಜನ ಸಾಗರವೇ ಹರಿದುಬಂದು ನಿರೀಕ್ಷೆಗೂ ಮೀರಿ ಜನರು ಪಾಲ್ಗೊಂಡು ಯಶಸ್ವಿಗೊಳಿಸಿದರು. ಪೂರ್ಣ ಕುಂಭ ಸ್ವಾಗತದಲ್ಲಿ ಕಲಶ ಹೊತ್ತ ಸುಮಂಗಲಿಯರು, ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ, ಭಾರತಾಂಭೆ ಭಾವಚಿತ್ರವಿಟ್ಟ ರಥಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಸಮಿತಿ ಉಪಾಧ್ಯಕ್ಷರಾದ ಡಾ.ಪಿ.ನಾರಾಯಣಸ್ವಾಮಿ ಮಾಡಿದರು. ಅಧ್ಯಕ್ಷತೆಯನ್ನು ಮುಖಂಡ ಕೆ.ಬಿ.ನಾರಾಯಣಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಬಿ.ಜಿ.ಮುನಿಸ್ವಾಮಿಗೌಡ, ಟಿ.ಬಿ.ಕೃಷ್ಣಪ್ಪ, ಎಸ್.ಎನ್.ರಘುನಾಥ, ಬಿ.ಕೆ.ನಾರಾಯಣಸ್ವಾಮಿ, ಕೆ.ವಿ.ಮಂಜುನಾಥ, ಟಿ.ಎನ್.ಮಂಜುನಾಥ, ಮಾಂಗಿಲಾಲ್, ಟಿ.ಪಿ.ವೆಂಕಟೇಶ, ಚಂದ್ರಶೇಖರ್ (ಮರಿ), ವೈ.ಎಸ್.ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಕೃಷ್ಣಪ್ಪ (ಕಿಟ್ಟಿ), ಮಾಜಿ ತಾ.ಪಂ.ಅಧ್ಯಕ್ಷ ಆನಂದ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.