ವಕ್ಫ್‌ ಬೋರ್ಡ್‌ ವಿಚಾರದಲ್ಲಿ ಹಿಂದುಗಳು ಒಂದಾಗಿ

KannadaprabhaNewsNetwork |  
Published : Sep 13, 2024, 01:35 AM IST
ಫೋಟೋ 12ಪಿವಿಡಿ1ಹಿಂದೂ ಧರ್ಮ ಉಳಿವಿಗಾಗಿ ಸಹಿ ಸಂಗ್ರಹದ ಅಭಿಯಾನಕ್ಕೆ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅನಿಲ್ ಯಾದವ್ ಕರೆ ನೀಡಿದರು. | Kannada Prabha

ಸಾರಾಂಶ

ವಕ್ಫ್‌ ಬೋರ್ಡ್‌ ವಿಚಾರದಲ್ಲಿ ಹಿಂದುಗಳು ಒಂದಾಗಿ

ಕನ್ನಡಪ್ರಭವಾರ್ತೆ ಪಾವಗಡ

ನಮ್ಮ ಧರ್ಮ ಉಳಿವಿಗಾಗಿ ಸಹಿ ಸಂಗ್ರಹದ ಅಭಿಯಾನಕ್ಕೆ ಸಮಸ್ತ ಹಿಂದೂಗಳು ಕೈಜೋಡಿಸಬೇಕು ಎಂದು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅನಿಲ್ ಯಾದವ್ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಹಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅನಿಲ್‌, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್‌ ಬೋರ್ಡ್ ಕಾಯ್ದೆಗಳನ್ನು ತಿದ್ದುಪಡಿ ಮಾಡಬೇಕೆಂದು ಸಂಸತ್ತಿನಲ್ಲಿ ಮಂಡನೆ ಮಾಡಿ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಹಿಂದೂ ವಿರೋಧವಾದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿನ ಬೆಂಬಲಿತ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈ ವಿಚಾರವಾಗಿ ಪರ ಮತ್ತು ವಿರೋಧಗಳು ನಡೆಯುತ್ತಿದ್ದು ಹೀಗಾಗಿ ಕೇಂದ್ರ ಸರ್ಕಾರದಿಂದ ಜಂಟಿ ಸಂಸದೀಯ ಸಮಿತಿ ರಚನೆ ಮಾಡುವ ಮೂಲಕ ಈ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮುಸ್ಲಿಮರು ಪ್ರತಿ ಮನೆಮನೆ ಹಾಗೂ ಮಸೀದಿಗಳಿಗೆ ತೆರಳಿ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಯ್ದೆಯ ಪರವಾಗಿ ಹಿಂದೂಗಳು ಸಜ್ಜಾಗಿ ವಕ್ಫ್‌ ಬೋರ್ಡ್ ಸಂಬಂಧಪಟ್ಟ 40 ಕಾಯ್ದೆಗಳ ತಿದ್ದುಪಡಿಗೊಳಿಸಬೇಕೆಂದು ಬೆಂಬಲ ವ್ಯಕ್ತಪಡಿಸಬೇಕಾಗಿದೆ.ಈಗಾಗಲೇ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ವತಿಯಿಂದ ಬಾರ್‌ಕೋಡ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದ್ದು, ಈ ಬಾರ್ ಕೋಡ್ ಸ್ಕ್ಯಾನ್ ಮಾಡಿದ್ದಲ್ಲಿ ಕೇಂದ್ರ ಸರ್ಕಾರದ ಜಂಟಿ ಸಂಸದೀಯ ಸಮಿತಿಯ ಕಚೇರಿಗೆ ನೇರವಾಗಿ ಮೇಲ್ ಮಾಡುವ ಮುಖಾಂತರ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸುವಂತೆ ಮನವಿ ಮಾಡಿದರು.

ಎಲ್ಲ ಹಿಂದುಗಳು ಸಹಿಯ ಮೂಲಕ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಇಲ್ಲದಿದ್ದಲ್ಲಿ ಅಖಂಡ ಭಾರತವು ವಕ್ಫ್‌ ಬೋರ್ಡಿನ ಪಾಲಾಗಲಿದೆ. ಇದಕ್ಕೆ ಉದಾಹರಣೆ ಎಂಬಂತೆ ತಮಿಳುನಾಡಿನ ತಿರುಚೆಂದೂರೈನಲ್ಲಿ 1500 ವರ್ಷಗಳ ಹಳೆಯ ಹಿಂದು ದೇವಾಲಯವನ್ನು ಒಳಗೊಂಡಿರುವ ಸಂಪೂರ್ಣ ಹಿಂದು ಗ್ರಾಮವನ್ನು ವಕ್ಫ್‌ ಬೋರ್ಡಿನ ಆಸ್ತಿ ಎಂದು ಘೋಷಿಸಲಾಗಿದೆ.ಈ ರೀತಿಯ ಹಲವಾರು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ .ಹೀಗಿದ್ದರೂ ಸಹ ರಾಜ್ಯ ಬಿಜೆಪಿ ನಾಯಕರು ಈ ವಿಚಾರವನ್ನು ಅರಿವು ಮೂಡಿಸದೆ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸ. ಇನ್ನಾದರೂ ಎಚ್ಚೆತ್ತುಕೊಂಡು ಬಿಜೆಪಿಯ ನಾಯಕರು ಹಿಂದೂಗಳಿಗೆ ಈ ವಿಷಯ ಮುಟ್ಟಿಸುವ ಕೆಲಸವನ್ನು ಮಾಡುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.

ಇದೇ ವೇಳೆ ಶ್ರೀರಾಮಸೇನೆಯ ಜಿಲ್ಲಾ ಉಪಾಧ್ಯಕ್ಷ ರಾಮು,ಜಿಲ್ಲಾ ಖಜಾಂಜಿ ಜಿತೇಂದ್ರ ಬಾಬು, ಕಾರ್ತಿಕ್, ವಾಸು, ಸ್ವರೂಪ್, ರಾಜು, ನವೀನ್,ಮೂರ್ತಿ, ಮನೋಹರ್, ಪ್ರಭು, ನಿತಿನ್, ಬಾಬು, ಕುಮಾರ್, ದರ್ಶನ್ ಹಾಗೂ ಇನ್ನೂ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ