ಹಿರೇಮರಳಿ ಡೇರಿಗೆ 9 ಲಕ್ಷ ರು. ನಿವ್ವಳ ಲಾಭ: ಆರ್.ಮಲ್ಲಿಕಾರ್ಜುನ್

KannadaprabhaNewsNetwork |  
Published : Sep 17, 2025, 01:05 AM IST
16ಕೆಎಂಎನ್ ಡಿ17 | Kannada Prabha

ಸಾರಾಂಶ

ಸಂಘಕ್ಕೆ ಪ್ರತಿ ದಿನ 1350 ಲೀಟರ್ ಹಾಲು ಸರಬರಾಜು ಆಗುತ್ತಿದೆ. ಪ್ಯಾಟ್ ಆಧಾರದ ಮೇಲೆ ದರ ನೀಡಲಾಗುತ್ತಿದೆ. ಗ್ರಾಮದ ಆಟೋ ನಿಲ್ದಾಣದ ಸಮೀಪ ಹೊಸ ಡೇರಿ ನಿರ್ಮಾಣಕ್ಕೆ ಮುಂದಿನ‌15 ದಿನದೊಳಗೆ ನಿವೇಶನ ಖರೀದಿಸಿ 3 ವರ್ಷದೊಳಗೆ ಮಾದರಿ ಡೇರಿ ಕಟ್ಟಡ ನಿರ್ಮಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಹಿರೇಮರಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ಆಡಿಟ್ ವರದಿ ಜಮಾ-ಖರ್ಚು, ಲಾಭ-ನಷ್ಟ, ಆಸ್ತಿ-ಜವಾಬ್ದಾರಿ ಪರಿಶೀಲಿಸಿ ಅಂಗೀಕರಿಸಲಾಯಿತು.

ಈಸಾಲಿನ ನಿವ್ವಳ ಲಾಭ 9,50,513,69 ರು.ಗಳನ್ನು ವಿಲೇವಾರಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಇದೇ ವೇಳೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜತೆಗೆ ಸಂಘದ ಹೊಸ ಕಟ್ಟಡ ನಿರ್ಮಾಣ ಸಂಬಂಧ ಸೂಕ್ತ ಜಾಗದಲ್ಲಿ ನಿವೇಶನ ಖರೀದಿಸಿ ಶೀಘ್ರ ಭೂಮಿ ಪೂಜೆ ನೆರವೇರಿಸುವಂತೆ ಒತ್ತಾಯಿಸಲಾಯಿತು.

ಡೇರಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಮಾತನಾಡಿ, ಸಂಘಕ್ಕೆ ಪ್ರತಿ ದಿನ 1350 ಲೀಟರ್ ಹಾಲು ಸರಬರಾಜು ಆಗುತ್ತಿದೆ. ಪ್ಯಾಟ್ ಆಧಾರದ ಮೇಲೆ ದರ ನೀಡಲಾಗುತ್ತಿದೆ. ಗ್ರಾಮದ ಆಟೋ ನಿಲ್ದಾಣದ ಸಮೀಪ ಹೊಸ ಡೇರಿ ನಿರ್ಮಾಣಕ್ಕೆ ಮುಂದಿನ‌15 ದಿನದೊಳಗೆ ನಿವೇಶನ ಖರೀದಿಸಿ 3 ವರ್ಷದೊಳಗೆ ಮಾದರಿ ಡೇರಿ ಕಟ್ಟಡ ನಿರ್ಮಿಸಲಾಗುವುದು ಎಂದು‌ ಭರವಸೆ ನೀಡಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಡೇರಿ ಉಪಾಧ್ಯಕ್ಷೆ ಎಚ್.ಕೆ.ಪುಷ್ಪಾ, ಯಜಮಾನರಾದ ಈರೇಗೌಡ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ರಾಮೇಗೌಡ, ನಿರ್ದೇಶಕರಾದ ಎಚ್.ಪಿ.ಚಂದ್ರಶೇಖರ, ಎಚ್.ಆರ್.ಸವಿತಾ, ಎಚ್.ಬಿ.ಸುನೀಲ್ ಕುಮಾರ, ಎಚ್.ಜಿ.ರಘು, ಎಚ್.ಎಸ್.ಪುರುಷೋತ್ತಮ್, ಕೃಷ್ಣೇಗೌಡ, ಎಚ್.ಸಿ.ರವಿ, ಎಂ.ಎನ್.ಪವನಾ, ಲೀಲಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಜೆ.ಜಗದೀಶ್, ಹಾಲು ಪರೀಕ್ಷಕ ವಿ.ರಾಜೇಶ್, ಸಹಾಯಕರಾದ ಎಚ್.ಆರ್.ಮಧು, ಎಚ್.ಎ.ಪವನ್, ಸಚ್ಚಿನ್ ಗೌಡ, ಅನಂತು ಇತರರಿದ್ದರು.

ಇದೇ ವೇಳೆ ಡೇರಿಗೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮೂವರು ಷೇರುದಾರ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರೋತ್ಸಾಹ ಧನ ನೀಡಲಾಯಿತು. ಜತೆಗೆ ಡೇರಿ ಸಂಸ್ಥಾಪಕ ಅಧ್ಯಕ್ಷ ಕೆ.ಬಸವೇಗೌಡರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ