ಭಜನಾ ಪರಿಷತ್ತಿನ ಹಿರಿಯಡ್ಕ, ಪೆರ್ಡೂರು ವಲಯ ಸಭೆ

KannadaprabhaNewsNetwork |  
Published : Jul 25, 2026, 02:45 AM IST
24ಭಜನೆ | Kannada Prabha

ಸಾರಾಂಶ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಹಿರಿಯಡ್ಕ ಹಾಗೂ ಪೆರ್ಡೂರು ವಲಯ ವ್ಯಾಪ್ತಿಯ ಎಲ್ಲಾ ಭಜನಾ ಮಂಡಳಿಗಳ ಸಮಾಲೋಚನಾ ಸಭೆಯನ್ನು ಇಲ್ಲಿನ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಯಿತು.

ಹಿರಿಯಡ್ಕ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಹಿರಿಯಡ್ಕ ಹಾಗೂ ಪೆರ್ಡೂರು ವಲಯ ವ್ಯಾಪ್ತಿಯ ಎಲ್ಲಾ ಭಜನಾ ಮಂಡಳಿಗಳ ಸಮಾಲೋಚನಾ ಸಭೆಯನ್ನು ಇಲ್ಲಿನ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಯಿತು.

ಈ ಸಭೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರು ಮಾತನಾಡಿ, ಆಗಸ್ಟ್ ತಿಂಗಳಲ್ಲಿ ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ನಡೆಯುವ ತಾಲೂಕು ಭಜನೋತ್ಸವ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ 28ನೇ ಭಜನಾ ಕಮ್ಮಟ, ತಾಲೂಕಿನ ಸಾಧಕ ಪ್ರಶಸ್ತಿ ಹಾಗೂ ಸಮಾರೋಪದಂದು ನಡೆಯುವ ವಿಶೇಷ ಭಜನೋತ್ಸವದ ಮಾಹಿತಿ ನೀಡಿದರು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ವಲಯದ ಹೆಚ್ಚಿನ ಭಜನಾ ಮಂಡಳಿ ಅವರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಭಜನಾ ಮಂಡಳಿಯವರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ಭಾಗವಹಿಸಿದ್ದ ಚೇತನ್ ಅನಿಸಿಕೆ ಹಂಚಿಕೊಂಡರು. ಹಿರಿಯಡ್ಕ ವಲಯದ ಮೇಲ್ವಿಚಾರಕ ಶ್ರೀ ರಾಜ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು, ಮುಖಂಡರ ಮೇಲೆ ದೌರ್ಜನ್ಯ ಖಂಡನೀಯ: ರೈ
ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಯೋಜನೆ ತ್ವರಿತ ಅನುಷ್ಠಾನಗೊಳಿಸಿ: ಫೌಜಿಯಾ ತರನ್ನುಮ್