ಜಿಎಸ್‌ಟಿ ಸರಳೀಕರಣ ಮೂಲಕ ಐತಿಹಾಸಿಕ ನಿರ್ಣಯ: ಮಾಜಿ ಸಂಸದ ಎಸ್.ಮುನಿಸ್ವಾಮಿ

KannadaprabhaNewsNetwork |  
Published : Sep 07, 2025, 01:00 AM IST
೬ಕೆಎಲ್‌ಆರ್-೫ಕೋಲಾರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮೂಲ ಮಂತ್ರದೊಂದಿಗೆ ಜಿಎಸ್‌ಟಿ ಸರಳೀಕರಣ ಮಾಡಿರುವುದಕ್ಕೆ ವಿರೋಧ ಪಕ್ಷಗಳವರೂ ಬೆಂಬಲಿಸಿರುವುದು ಹೆಮ್ಮೆಯ ವಿಚಾರ ಎಂದರು.

ಕನ್ನಡಪ್ರಭ ವಾರ್ತೆ ಕೋಲಾರದೇಶದ 140 ಕೋಟಿ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಿಎಸ್‌ಟಿ ಸರಳೀಕರಣಗೊಳಿಸುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದು, ಜನರು ಈಗಲೇ ದೀಪಾವಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮೂಲ ಮಂತ್ರದೊಂದಿಗೆ ಜಿಎಸ್‌ಟಿ ಸರಳೀಕರಣ ಮಾಡಿರುವುದಕ್ಕೆ ವಿರೋಧ ಪಕ್ಷಗಳವರೂ ಬೆಂಬಲಿಸಿರುವುದು ಹೆಮ್ಮೆಯ ವಿಚಾರ ಎಂದರು.ಹೋಟೆಲ್ ತಿಂಡಿ, ಊಟದ ಮೇಲೆ ಶೇ. 27 ರಿಂದ 5%, ಅಲ್ಲದೆ ಶೇ. 6ರಿಂದ 0%ಗೆ ಇಳಿಸಿದೆ. ಆರೋಗ್ಯ, ಶಿಕ್ಷಣ, ಕೃಷಿ, ಎಲೆಕ್ಟ್ರಾನಿಕ್ ಸೇರಿದಂತೆ ನಾನಾ ವಿಚಾರಗಳಲ್ಲಿ ಜಿಎಸ್ಟಿ ಪರಿಷ್ಕರಣೆಗೊಳಿಸಲಾಗಿದೆ. ಕಾರು, ದ್ವಿಚಕ್ರ ವಾಹನಗಳ ಮೇಲೆಯೂ ತೆರಿಗೆ ಕಡಿಮೆಯಾಗಿದೆ. ನವೆಂಬರ್ ಬಳಿಕ ಖರೀದಿಸಲು ಕಾಯುತ್ತಿದ್ದಾರೆ.ಔಷಧಿಗಳ ಮೇಲೂ ತೆರಿಗೆ ವಿನಾಯಿತಿ. ಸಣ್ಣ ವ್ಯಾಪಾರಿ, ಕುಶಲಕರ್ಮಿಗಳಿಗೂ ವಿನಾಯಿತಿ. ಯುವಕರಿಗೆ ಉದ್ಯೋಗವಕಾಶ ಸಿಗಲಿದೆ. ಪ್ರಧಾನಿ ಕೊಡುಗೆಯಿಂದಾಗಿ ಬಡ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅನುಕೂಲವಾಗಲಿದೆ ಎಂದರು. ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಆದರೆ, ರಾಜ್ಯದಲ್ಲಿ ಜನಪರ ಎಂದು ಹೇಳಿ ಅಧಿಕಾರಕ್ಕೆ ಬಂದು ಜನರಿಗೆ ಹೊರೆಯಾಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇನ್ನಾದರೂ ಒಂದು ಸಮುದಾಯ ಮೆಚ್ಚಿಸುವುದನ್ನು ಬಿಟ್ಟು, ಟ್ಯೂಷನ್‌ಗೆ ಹೋಗಿ ಕಲಿಯಲಿ. ಬೇರೆ ರಾಜ್ಯಗಳಲ್ಲಿರುವ ವಿರೋಧ ಪಕ್ಷದವರೂ ಕಲಿಯಲಿ ಎಂದು ಸಲಹೆ ನೀಡಿದರು.

ಜಿಎಸ್‌ಟಿ ಸರಳೀಕರಣದಿಂದಾಗಿ ಸಿಎಂ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅನುಕೂಲವಾಗಲಿದ್ದರೂ ಟ್ರೋಲ್‌ಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಎಲ್ಲದಕ್ಕೂ ಪ್ರತಿಕ್ರಿಯೆ ನಡುತ್ತಿದ್ದು, ಅವರನ್ನು ನೋಡಿದರೆ ಹೆಚ್ಚಾಗಿ ಓದಿಲ್ಲದವರಂತೆ ಕಾಣುತ್ತಿದ್ದಾರೆ. ಹೀಗಾಗಿ ಅವರ ಹೇಳಿಕೆಯಿಂದ ಏನೂ ತೊಂದರೆಯಿಲ್ಲ ಎಂದರು.ಕಾಂಗ್ರೆಸ್‌ನವರು ಗೆದ್ದ ರಾಜ್ಯಗಳಲ್ಲಿ ಇವಿಎಂ ಸರಿ ಇರುತ್ತದೆ, ಸೋತ ರಾಜ್ಯಗಳಲ್ಲಿ ಇವಿಎಂ ಸರಿ ಇರುವುದಿಲ್ಲ. ಕೋಲಾರದಲ್ಲಿಯೂ ಒಂದು ಸಮುದಾಯದವರು ಮತಗಳನ್ನು ದುರುಪಯೋಗ ಪಡಿಸಿಕೊಂಡಿದ್ದು, ಮೃತಪಟ್ಟಿರುವವರ ಹೆಸರಿನಲ್ಲೂ ಮತದಾನ ಮಾಡಿದ್ದಾರೆ. ಕೆಲವರು ಎರಡೂ ಕಡೆ ಮತ ಹೊಂದಿದ್ದು, ರಾಜ್ಯ ಸರ್ಕಾರವೂ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ಆಧುನಿಕ ಕಾಲದಲ್ಲಿ ಎಲ್ಲ ದೇಶಗಳಲ್ಲೂ ಇವಿಎಂಗಳಿವೆ. ಕಾಂಗ್ರೆಸ್ ಕಾಲದಲ್ಲಿ ಕಳ್ಳ ಮತದಾನ ನಡೆಯುತ್ತಿದ್ದು, ಪ್ರಧಾನಿ ತಾಯಿಯ ಬಗ್ಗೆ ಅವಹೇಳನಕಾರಿ ಮಾತು ಸರಿಯಲ್ಲ ಎಂದ ಅವರು, ಹೆಣ್ಣಿಗೆ ಬೆಲೆ ಕೊಡದವರು ಬಿಹಾರ್ ಚುನಾವಣೆಯ ಸೋಲಿನ ಹತಾಶೆಯಲ್ಲಿ ಮಾತುಗಳಾಡುತ್ತಿದ್ದಾರೆ ಎಂದರು.ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ವಿರೋಧ ಪಕ್ಷಗಳ ಟೀಕೆ ಮಾಡುತ್ತಲೇ ವರ್ಚಸ್ಸು ಕಡಿಮೆ ಮಾಡಿಕೊಳ್ಳುತ್ತಿವೆ. ಪ್ರಧಾನಿ ಮೋದಿ ಮೌನವಾಗಿಯೇ ತಕ್ಕ ಕೆಲಸ ಮಾಡುವ ಮೂಲಕ ವಿರೋಧ ಪಕ್ಷಗಳು ಇನ್ನೂ 10 ವರ್ಷ ಮೇಲೇಳದಂತೆ ಮಾಡುತ್ತಾರೆ. ಜಿಎಸ್ಟಿ ಪರಿಷ್ಕರಣೆ ಜಗತ್ತಿಗೆ ಮಾದರಿಯಾಗಿದ್ದು, ಪ್ರಧಾನಿ, ಮಂತ್ರಿಗಳನ್ನು ಟೀಕೆ ಮಾಡುವುದರಿಂದ ನಮಗೆ ಶೋಭೆ ತರಲ್ಲ ಎನ್ನುವುದು ವಿರೋಧ ಪಕ್ಷದವರಿಗೆ ಮನವರಿಕೆ ಆಗಲಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಜಿಎಸ್ಟಿ ಸರಳೀಕರಣ ನರೇಂದ್ರ ಮೋದಿಯವರ ಐತಿಹಾಸಿಕ ನಿರ್ಣಯವಾಗಿದ್ದು, ದೇಶ, ಜಗತ್ತು ಜತೆಗೆ ಸಿಎಂ ಸಿದ್ದರಾಮಯ್ಯ ಸಹ ಹೊಗಳಿದ್ದಾರೆ. ಅಲ್ಲದೆ ಭಾರತ ಬಿಟ್ಟು ಅಮೇರಿಕ ಇಲ್ಲ ಎನ್ನುವುದನ್ನು ಟ್ರಂಪ್ ಅವರೂ ಹೇಳಿದ್ದಾರೆ. ಕೇಂದ್ರ ಸರ್ಕಾರದಂತೆಯೇ ರಾಜ್ಯ ಸರ್ಕಾರವೂ ಇದೇ ರೀತಿ ರಾಜ್ಯ ಸರ್ಕಾರವೂ ಕಡಿಮೆ ಮಾಡಿದರೆ ಅನುಕೂಲವಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಿ.ಡಿ.ರಾಮಚಂದ್ರೇಗೌಡ, ಸಾ.ಮಾ. ಅನಿಲ್ ಬಾಬು, ಮಾಧ್ಯಮ್ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್ ಇದ್ದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ