ಸಂಪಾದಿಸಿದ ಹಣದಲ್ಲಿ ಶೇ.1ರಷ್ಟು ದಾನ ಮಾಡಿ: ಡಿಸಿಎಂ ಸಲಹೆ
---
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲದೇವರಿಗೆ ಜಾತಿ, ಧರ್ಮವಿಲ್ಲ, ಧರ್ಮ ಯಾವುದಾದರೇನು ತತ್ವ ಒಂದೆ. ನಾಮನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ದೇವರು- ದೇವಸ್ಥಾನ ಎಲ್ಲರ ಆಸ್ತಿ. ದೇವಸ್ಥಾನಗಳು ಯಾರೊಬ್ಬರ ಆಸ್ತಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಇಂದು ಇತಿಹಾಸ ಪ್ರಸಿದ್ಧ ಮಧ್ಯರಂಗ ದೇವಾಲಯದಲ್ಲಿ ಅರ್ಚಕರ ನೇತೃತ್ವದಲ್ಲಿ ವಿಶೇಷ ರೀತಿ ಪೂಜಾ ಕೈಂಕರ್ಯಗಳು ಸಾಗಿರುವುದು ಸಂತಸದ ವಿಚಾರ ಎಂದರು.
ದೇವರು ಅವಕಾಶ ನೀಡುತ್ತಾನೆ, ವರವನ್ನಾಗಲಿ, ಶಾಪವನ್ನಾಗಲಿ ನೀಡಲ್ಲ. ನೀವು ಸಂಪಾದಿಸುವ ಹಣದಲ್ಲಿ ಶೇ. 1ರಷ್ಟನ್ನು ಭಗವಂತನಿಗೆ ಸಮರ್ಪಿಸಿ ಅವರ ಕೖಪೆಗೆ ಎಲ್ಲರೂ ಪಾತ್ರರಾಗಿ, ದಾರಿ ತೋರಿಸುವುದು ದೇವರ ಕೆಲಸ, ಗುರಿ ಮುಟ್ಟುವುದು ನಮ್ಮೆಲ್ಲರ ಕೆಲಸವೂ ಆಗಿದೆ ಎಂದರು.
ಚಾಮರಾಜನಗರ ಜಿಲ್ಲೆ ದೇವರ ನಾಡು, ಮಲೆ ಮಹದೇಶ್ವರ, ಚಾಮರಾಜೇಶ್ವರ, ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ, ಮಧ್ಯರಂಗ ಬೆಟ್ಟಗಳಿಂದ ಕೂಡಿರುವ ಸೊಬಗಿನ ಹಾಗೂ ಕಾವೇರಿ ಸೊಬಗಿನ ಹೆಮ್ಮೆಯ ಸಂಪದ್ಭರಿತ ಜಿಲ್ಲೆ ಇದಾಗಿದೆ.
ಇದೆ ವೇಳೆ ಕಾರ್ಯಕ್ರಮದಲ್ಲಿ ದಾನಿಗಳು ಹಾಗೂ ಜಿಲ್ಲೆಯ ಶಾಸಕರಾದ ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್ ಹಾಗೂ ಸಿ. ಪುಟ್ಟರಂಗಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಉಪಮುಖ್ಯಮಂತ್ರಿಗಳಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಗಳು ಸಲ್ಲಿಸಿದರು.
ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ. ಇದು
- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ