ಇತಿಹಾಸ ಎಂಬುದು ಬಹುಶಿಸ್ತಿಯ ಜ್ಞಾನಭಂಡಾರ: ಪ್ರೊ.ಎಚ್.ಜಿ.ಕೃಷ್ಣಪ್ಪ

KannadaprabhaNewsNetwork |  
Published : Nov 25, 2025, 02:00 AM IST
24 HRR. 01ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಹರಿಹರೇಶ್ವರ ದೇವಾಲಯ ಮತ್ತು ಹಳ್ಳೂರಿನ ಇತಿಹಾಸ’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ.ಹೆಚ್.ಜಿ. ಕೃಷ್ಣಪ್ಪ ಅವರು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಇತಿಹಾಸ ಬಹುಶಿಸ್ತಿಯ ಜ್ಞಾನ ಭಂಡಾರವನ್ನು ಹೊಂದಿದೆ. ಇತಿಹಾಸದ ಅಧ್ಯಯನದ ಮೂಲಕ ಮಾನವನ ನಡವಳಿಕೆ, ಸಾಮಾಜಿಕ, ರಾಜಕೀಯ, ಆರ್ಥಿಕ ಮಾದರಿಗಳು ಹಾಗೂ ವಿಭಿನ್ನ ಸಂಸ್ಕೃತಿಗಳು, ಸಮೂಹ ವ್ಯವಸ್ಥೆಗಳ ಬೆಳವಣಿಗಳ ಬಗ್ಗೆ ಒಳನೋಟಗಳನ್ನು ಪಡೆಯಬಹುದಾಗಿದೆ ಎಂದು ಮೈಸೂರಿನ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್.ಜಿ. ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

- ‘ಹರಿಹರೇಶ್ವರ ದೇವಾಲಯ-ಹಳ್ಳೂರಿನ ಇತಿಹಾಸ’ ವಿಶೇಷ ಉಪನ್ಯಾಸ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹರಿಹರ

ಇತಿಹಾಸ ಬಹುಶಿಸ್ತಿಯ ಜ್ಞಾನ ಭಂಡಾರವನ್ನು ಹೊಂದಿದೆ. ಇತಿಹಾಸದ ಅಧ್ಯಯನದ ಮೂಲಕ ಮಾನವನ ನಡವಳಿಕೆ, ಸಾಮಾಜಿಕ, ರಾಜಕೀಯ, ಆರ್ಥಿಕ ಮಾದರಿಗಳು ಹಾಗೂ ವಿಭಿನ್ನ ಸಂಸ್ಕೃತಿಗಳು, ಸಮೂಹ ವ್ಯವಸ್ಥೆಗಳ ಬೆಳವಣಿಗಳ ಬಗ್ಗೆ ಒಳನೋಟಗಳನ್ನು ಪಡೆಯಬಹುದಾಗಿದೆ ಎಂದು ಮೈಸೂರಿನ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್.ಜಿ. ಕೃಷ್ಣಪ್ಪ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಹರಿಹರೇಶ್ವರ ದೇವಾಲಯ ಮತ್ತು ಹಳ್ಳೂರಿನ ಇತಿಹಾಸ’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸ ಭವಿಷ್ಯವನ್ನು ರೂಪಿಸಲು ನಮಗೆ ಸಹಾಯ ಮಾಡುತ್ತದೆ. ಇದು ವಿಮರ್ಶಾತ್ಮಕ ಚಿಂತನೆಯನ್ನು ಬಳಸುತ್ತದೆ. ಗುರುತಿನ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅರಿವು ಒದಗಿಸುತ್ತದೆ. ಅದರೊಂದಿಗೆ ನಾಗರಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಿಸಿದರು.

ಇತಿಹಾಸದಿಂದ ಹೊಯ್ಸಳರ ಕಾಲದಲ್ಲಿ ಸೇನಾಮುಖ್ಯಸ್ಥ ಆಗಿದ್ದ ಪೊಲಾಳ್ವ ದಂಡನಾಥನ ಸಹಾಯದಿಂದ ಎರಡನೇ ವೀರನರಸಿಂಹ ಅವರು ಕ್ರಿ.ಶ. 1223ರಲ್ಲಿ ಹರಿಹರದ ತುಂಗಭದ್ರಾ ನದಿ ದಡದಲ್ಲಿ ವಿಶಿಷ್ಟವಾದ ಹರಿಹರೇಶ್ವರ ದೇವಾಲಯ ನಿರ್ಮಾಣ ಮಾಡಿದ್ದರು ಎಂಬುದು ದೇವಾಲಯದಲ್ಲಿನ ಶಾಸನಗಳಿಂದ ಅರಿಯಬಹುದು ಎಂದು ವಿವರಿಸಿದರು.

ಐ.ಕ್ಯೂ.ಎಸ್.ಸಿ. ಸಂಯೋಜಕ ಡಾ. ಅನಂತನಾಗ್ ಎಚ್.ಪಿ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಹನುಮಂತಪ್ಪ ಕೆ.ವೈ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜಕ ಅಬ್ದುಲ್ ಬಷೀರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗೌರಮ್ಮ ಎಂ.ಎಸ್., ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಜಿ.ಪಿ., ಎನ್.ಎಸ್.ಎಸ್. ಸಂಯೋಜನಾಧಿಕಾರಿ ಯೋಗೇಶ್ ಕೆ.ಜೆ., ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನೋಹರ್ ಕೆ.ಎಸ್., ಹೊನ್ನಾಳಿ ಜಿ.ಎಫ್.ಜಿ.ಸಿ.ಯ ಸಹಾಯಕ ಪ್ರಾಧ್ಯಾಪಕ ತಿಪ್ಪೇಶ್ ಬಬಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅರ್ಪಿತಾ ಎನ್.ಎಚ್. ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಅಧ್ಯಾಪಕರಾದ ಮಲ್ಲಿಕಾರ್ಜುನ ಜವಳಿ ಅವರು ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀಮತಿ ರೇಣುಕಾ ಕೆ.ಡಿ. ಕಾರ್ಯಕ್ರಮ ನಿರ್ವಹಿಸಿದರು. ಅಂತಿಮ ಬಿ.ಎ. ವಿದ್ಯಾರ್ಥಿನಿ ವರ್ಷಿಣಿ ವಂದಿಸಿದರು.

- - -

(ಕೋಟ್‌) ಎಲ್ಲ ಜ್ಞಾನ ಶಾಖೆಯು ತನ್ನದೇ ಆದ ಇತಿಹಾಸವನ್ನು ಹೊಂದಿವೆ. ಅವುಗಳ ಶಿಸ್ತುಬದ್ಧ ಅಧ್ಯಯನ ಆಗಬೇಕಾಗಿದೆ. ಇತಿಹಾಸವು ಮುಖ್ಯವಾದುದು. ಏಕೆಂದರೆ, ಅದು ಹಿಂದೆ‌ ನಡೆದ ತಪ್ಪುಗಳು ಮತ್ತು ಯಶಸ್ಸುಗಳನ್ನು ಕಲಿಯುವ ಮೂಲಕ ವರ್ತಮಾನವನ್ನು ಅರ್ಥ ಮಾಡಿಕೊಂಡು ಭವಿಷ್ಯವನ್ನು ರೂಪಿಸಲು ನಮಗೆ ಸಹಾಯ ಮಾಡುತ್ತದೆ.

- ಡಾ. ಎಂ.ಎನ್. ರಮೇಶ್, ಪ್ರಾಂಶುಪಾಲ.

- - -

-24HRR.01.ಜೆಪಿಜಿ:

ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಹರಿಹರೇಶ್ವರ ದೇವಾಲಯ ಮತ್ತು ಹಳ್ಳೂರಿನ ಇತಿಹಾಸ’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ. ಎಚ್.ಜಿ. ಕೃಷ್ಣಪ್ಪ ಉದ್ಘಾಟಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌