ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಜಿಲ್ಲಾ ಶಸಸ್ತ್ರ ಪೊಲೀಸ್ ಪಡೆಯ ಕವಾಯಿತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರಂಭವನ್ನು ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ಉದ್ಘಾಟಿಸಿ, ಕ್ರೀಡಾಪಟುಗಳಿಂದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕೌಟುಂಬಿಕ ನೆಮ್ಮದಿಯನ್ನು ಕಡೆಗಣಿಸಿ ಕರ್ತವ್ಯದಲ್ಲಿ ತೊಡಗಬೇಕಾಗಿರುವ ಪೊಲೀಸರು ಮಾನಸಿಕ, ದೈಹಿಕ ಸದೃಢತೆ ಕಾಪಾಡಿಕೊಂಡು ಸ್ಪರ್ಧಾತ್ಮಕ ಮನೋಭಾವ ಮೈಗೂಡಿಸಿಕೊಳ್ಳಲು ಕ್ರೀಡಾಕೂಟ ಸ್ಪೂರ್ತಿ ನೀಡಲಿದೆ ಎಂದರು.ಪೊಲೀಸ್ ಇಲಾಖೆಯಲ್ಲಿ ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಲಿದೆ. ಸದಾ ಒತ್ತಡಲ್ಲಿರುವ ನೀವು ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಿ, ಕ್ರೀಡೆಗಳು ಮನಸ್ಸನ್ನು ಉಲ್ಲಾಸಗೊಳ್ಳಿಸುವುದರ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ಸದೃಡಗೊಳಿಸುತ್ತದೆ ಎಂದರು.
ಈ ಬಾರಿ ಆಪ್ತ ಗೆಳತಿ ಮೂಲಕ ಜಿಲ್ಲೆಯ ಹೆಣ್ಣು ಮಕ್ಕಳ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಕೆಲಸ ಈ ಕ್ರೀಡಾ ಕೂಟದಲ್ಲಿ ಹೊಸ ತಂಡ ಹೊಸದಾಗಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮ ಸೇರಿದಂತೆ ಹಲವಾರು ಪ್ರಮುಖ ಕಾರ್ಯಕ್ರಮಗಳಲ್ಲಿ ಜಿಲ್ಲಾ ಪೊಲೀಸ್ ಕರ್ತವ್ಯ ನಿಷ್ಠೆ ಶ್ಲಾಘನೀಯವಾದದು ಎಂದರು.ಪೊಲೀಸರಿಗೆ ಒತ್ತಡವಿದೆ, ಆದ್ದರಿಂದ ಇಂತಹ ಕ್ರೀಡಾಕೂಟದಲ್ಲಿ ತಮ್ಮ ಕುಟುಂಬದವರು, ಮಕ್ಕಳೊಂದಿಗೆ ಭಾಗವಹಿಸಿ ಮಾನಸಿಕವಾಗಿ ಸ್ಥೈರ್ಯವಾಗಿರಿವ ಇದು ಹಿಂದುಳಿದ ಜಿಲ್ಲೆಯಲ್ಲ ಮುಂದುವರಿದ ಜಿಲ್ಲೆ ಎಂಬುದನ್ನು ನಿರೂಪಿಸಿ, ವಿಭಾಗೀಯ ಮತ್ತು ರಾಜ್ಯಮಟ್ಟದಲ್ಲಿ ಗೆಲ್ಲಿರಿ ಎಂದು ಶುಭ ಹಾರೈಸಿದರು.
ಪಾರಿವಾಳ ಹಾಗೂ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಉದ್ಘಾಟಿಸಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು.ಈಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಪ್ರಾಸ್ತಾವಿಸಿ ಸ್ವಾಗತಿಸಿದರು,ಜಿಲ್ಲಾ ಪಂಚಾಯತ್, ಉಪಕಾರ್ಯದರ್ಶಿ ಶೃತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್‌ಪಿ ಸ್ನೇಹರಾಜ್, ಧರ್ಮೆಂದರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಾಮರಾಜ, ಹಿಮಗಿರಿ, ಮಹದೇಶ್ವರ, ಬಿಳಿಗಿರಿ, ಕನಕಗಿರಿ, ಕರಿವರದರಾಜ ಆಪ್ತಗೆಳತಿ ತಂಡಗಳು, ಪ್ರತಿಜ್ಞಾವಿಧಿ ಸ್ವೀಕರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದವು.
೨೪ಸಿಎಚ್‌ಎನ್೧ಚಾಮರಾಜನಗರದ ಜಿಲ್ಲಾ ಶಸಸ್ತ್ರ ಪೊಲೀಸ್ ಪಡೆಯ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಗಣ್ಯರು ಪಾರಿವಾಳ ಹಾರಿ ಬಿಡುವುದರ ಮೂಲಕ ಶುಭಕೋರಿದರು.