ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಿಂದೆ ಸಾಹಿತ್ಯ ಸಂಸ್ಕೃತಿಯನ್ನು ಒಮ್ಮೊಟ್ಟಿಗೆ ತೆಗೆದುಕೊಂಡು ಹೋಗುವ ಪ್ರಭುತ್ವ ಇತ್ತು. ಪ್ರಸ್ತುತ ದಿನಮಾನಗಳಲ್ಲಿ ತೋರಿಕೆಯ ರಾಜಕಾರಣದಲ್ಲಿ ಸಾಹಿತ್ಯ ಸಂಸ್ಕೃತಿ ಮರೆಯಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಮನ್ನಣೆ ದೊರೆಯುತ್ತಿಲ್ಲ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್‌ರಾಜು ಮೇಹು ಮಾತನಾಡಿ, ಬೆಂಗಳೂರಿಗೆ ಕೇಂದ್ರಿತವಾಗಿದ್ದ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯನ್ನು ಪ್ರತಿಯೊಂದು ಜಿಲ್ಲೆಗೂ ವಿಸ್ತರಿಸುವ ನಿಟ್ಟಿನಲ್ಲಿ ಚಕೋರ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು. ಸ್ಥಳೀಯ ಬರಹಗಾರರು, ಸಾಹಿತಿಗಳಿಗೆ ಇಂತಹ ವೇದಿಕೆ ಮೂಲಕಿ ಅವಕಾಶ ಕಲ್ಪಿಸಲಾಗುತ್ತಿದೆವ ಎಂದರು.ಗುಂಡ್ಲುಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ಮಂಜುನಾಥ್ ಮಾತನಾಡಿ, ೭೫ ದೇಶದಾದ್ಯಂತ ತಮಿಳುನಾಡು ಹೊರತುಪಡಿಸಿದರೆ ಅತಿ ಹೆಚ್ಚು ಶಾಸನಗಳು ದೊರೆತಿರುವುದು ಕರ್ನಾಟಕದಲ್ಲಿ. ರಾಜ್ಯದಲ್ಲಿ ಸಿಕ್ಕಿರುವ ೨೦,೦೦೦ ಶಾಸನಗಳಲ್ಲಿ ೧,೦೦೦ಕ್ಕೂ ಹೆಚ್ಚು ಶಾಸನಗಳು ಚಾಮರಾಜನಗರ ಜಿಲ್ಲೆಯಲ್ಲಿ ಲಭ್ಯವಾಗಿರುವುದು ಹೆಮ್ಮೆಯ ವಿಚಾರ ಎಂದರು.ಯಳಂದೂರು ತಾಲೂಕಿನಲ್ಲಿ ೨೨೦ ಶಾಸನಗಳು, ಚಾಮರಾಜನಗರ ತಾಲೂಕಿನಲ್ಲಿ ೩೫೬, ಕೊಳ್ಳೇಗಾಲದಲ್ಲಿ ೧೪೦, ಗುಂಡ್ಲುಪೇಟೆ ತಾಲೂಕಿನಲ್ಲಿ ೨೦೦ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಇವೆಲ್ಲವನ್ನೂ ಆಧಾರವಾಗಿಟ್ಟುಕೊಂಡು ಜಿಲ್ಲೆಯ ಸಂಸ್ಕೃತಿಯನ್ನು ಬಣ್ಣಿಸಬಹುದಾಗಿದೆ ಎಂದರು. ಮಾಂಬಳ್ಳಿಯಲ್ಲಿ ದೊರೆತಿರುವ ತಾಮ್ರದ ಶಾಸನ ಜಿಲ್ಲೆಯ ಅತ್ಯಂತ ಪ್ರಾಚೀನ ಶಾಸನ ಎನ್ನಲಾಗುತ್ತದೆ. ನಾಲ್ಕು ಹಲಗೆಗಳು, ೨೦ ಸಾಲುಗಳನ್ನು ಹೊಂದಿರುವ ಮಾಂಬಳ್ಳಿ ತಾಮ್ರದ ಶಾಸನ ಗಮನ ಸೆಳೆಯುವಂತಿದೆ ಎಂದರು. ಚಾಮರಾಜನಗರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಜಯಣ್ಣ ಉಪಸ್ಥಿತರಿದ್ದರು. ಜನಪದ ಗಾಯಕ ಸಿಎಂ ನರಸಿಂಹ ಮೂರ್ತಿ ಗೀತೆ ಹಾಡಿದರು. ಅನಿಲ್ ಕುಮಾರ್ ಹೊಸೂರು ಸ್ವಾಗತಿಸಿದರು. ಸುರೇಶ್ ವಂದಿಸಿದರು.