ಶಿಗ್ಗಾಂವಿ: ಹೊಲಗಳಿಗೆ ಹಾಗೂ ಮನೆ ಹಾಗೂ ಜಾನುವಾರುಗಳಿಗೆ ದಾಸ್ತಾನು ಮಾಡಿದ ಮೇವಿನ ಬಣವೆಗಳು ಹಂದಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡುತ್ತಿವೆ. ತಕ್ಷಣವಾಗಿ ಅವುಗಳನ್ನು ಬೇರೆಡೆ ವರ್ಗಾಯಿಸಬೇಕು ಎಂದು ತಾಲೂಕಿನ ಕುನ್ನೂರ ಗ್ರಾಮ ಪಂಚಾಯತ ವ್ಯಾಪ್ತಿಯ ೫ ಗ್ರಾಮಗಳ ಗ್ರಾಮಸ್ಥರು ತಡಸ ಪೊಲೀಸ್ ಠಾಣೆಗೆ ಆಗ್ರಹಿಸಿದ್ದಾರೆ.ತಾಲೂಕಿನ ಕುನ್ನೂರ ಗ್ರಾಮದ ಗ್ರಾ.ಪಂ. ವ್ಯಾಪ್ತಿಯ ಕನ್ನೂರ, ಮಮದಾಪೂರ, ಅಡವಿಸೋಮಾಪೂರ, ಹೆಳವತರ್ಲಘಟ್ಟ, ಹೊನ್ನಾಪೂರ ಗ್ರಾಮಗಳಿಗೆ ಮನೆಯ ಹಂದಿಗಳನ್ನು ಬಿಡಲಾಗುತ್ತಿದೆ. ಇದರಿಂದ ಹೊಲಗಳ ಬೆಳೆಗಳನ್ನು ಹಾನಿ ಮಾಡುತ್ತಿವೆ. ಅಲ್ಲದೆ ಮನೆಗಳ ಜಾನುವಾರುಗಳಿಗೆ ಶೇಖರಣೆಯನ್ನು ಮಾಡಿಟ್ಟ ಹೊಟ್ಟಿನ ಬಣವೆಗಳನ್ನು ಹಾನಿ ಮಾಡುತ್ತಿವೆ. ಅಲ್ಲದೆ ಅವು ಬಣವಿಗಳಲ್ಲಿ ಮರಿಗಳನ್ನು ಹಾಕಿ ಮನುಷ್ಯರ ಮೇಲೆ ಹಲ್ಲೆ ಮಾಡುವ ಪರಿಸ್ಥಿತಿ ಬಂದೊದಗಿದೆ ಆದ್ದರಿಂದ ಕುನ್ನೂರ ಗ್ರಾ.ಪಂ. ವ್ಯಾಪ್ತಿಯ ೫ ಗ್ರಾಮಗಳಲ್ಲಿದ್ದ ಹಂದಿಗಳನ್ನು ಬೇರೆಡೆ ಸಾಗಿಸಬೇಕು.ಅಲ್ಲದೆ ಈ ೫ ಗ್ರಾಮಗಳಲ್ಲಿ ಹಲವಾರು ರೋಗ ರುಜಿನುಗಳು ಬರುತ್ತಿದ್ದು, ಚರಂಡಿಗಳನ್ನು ಹಾನಿ ಮಾಡುವುದರ ಜೊತೆಗೆ ರೋಗಗಳ ಉತ್ಪಾದನಾ ಕೇಂದ್ರದಂತಾಗಿದೆ. ತಕ್ಷಣವಾಗಿ ಗ್ರಾಮಗಳಲ್ಲಿ ಬಿಟ್ಟಿರುವ ಹಂದಿಗಳನ್ನು ತಕ್ಷಣವಾಗಿ ಹಂದಿಗಳ ಮಾಲೀಕರು ಅವುಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ಪಾವೀನ ಹಾಗೂ ಸಾರ್ವಜನಿಕರು ತಡಸ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.ರೈತರು ಮೊದಲೆ ಮಳೆಯು ಸಾಕಷ್ಟು ಪ್ರಮಾಣದಲ್ಲಿ ಆಗಿದ್ದರಿಂದ ಬೆಳೆಗಳು ಹಾನಿಯಾಗಿವೆ ಅಲ್ಲದೆ ಹಂದಿಗಳು ಕೂಡಾ ಹಾನಿಯನ್ನು ಮಾಡುತ್ತಿವೆ. ಅಲ್ಲದೆ ಜಾನುವಾರುಗಳಿಗೆ ಶೇಖರಣೆಯನ್ನು ಮಾಡಿದ ಹೊಟ್ಟು, ಹುಲ್ಲುಗಳನ್ನು ಹಾನಿಮಾಡುತ್ತಿವೆ. ಅಲ್ಲಲ್ಲಿ ಮರಿ ಹಾಕಿದ್ದರಿಂದ ಜಾನುವಾರುಗಳಿಗೆ ಮೇವು ತರಲು ಜೀವದ ಭಯವು ಕಾಡುತ್ತಿವೆ ಆದ್ದರಿಂದ ತಕ್ಷಣವಾಗಿ ಹಂದಿಗಳನ್ನು ಬೇರೆಡೆಗೆ ಸಾಗಿಸಲು ಹಂದಿಗಳ ಮಾಲೀಕರಿಗೆ ಸೂಚನೆಯನ್ನು ನೀಡಬೇಕು ಎಂದು ಮನವಿ ಮೂಲಕ ತಡಸ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುರೇಶಗೌಡ ಪಾಟೀಲ,ಬಸವರಾಜ ಬುದಿಹಾಳ, .ವಿ.ವಾಯ್ ಶೆಟ್ಟೆಪ್ಪನವರ, ಶಶಿಧರಗೌಡ ಪಾಟೀಲ, ಬಸಪ್ಪ ಕೋಟಿ, ಭರತೇಶ ಸೊಗಲಿ, ಮಹಾವೀರ ಕೋಳೂರ, ಮಲ್ಲೇಶಪ್ಪ ದೊಡ್ಡಮನಿ, ಆರ್.ಎಸ್. ಪಾಟೀಲ, ಎಂ.ಕೆ.ಮುಲ್ಲಾ, ಈರಪ್ಪ ಗೋನಿ, ಎಂ.ಬಿ. ದೊಡ್ಡಮನಿ, ಪಾಶ್ವನಾಥ ಸೋಗಲಿ, ಎಲ್ಲಪ್ಪ, ಎಂ.ಸಿ. ಮತ್ತೇಖಾನ, ಯಲ್ಲಪ್ಪ ಶ್ಯಾಡಂಬಿ, ಪರಮೇಶ ಬಾರಕೇರ, ಭುಪಾಲಪ್ಪ ದೇ. ಅಂಗಡಿ ಸೇರಿದಂತೆ ಹಲವರು ಮನವಿಯಲ್ಲಿ ತಿಳಿಸಿದ್ದಾರೆ.