- ಹೊನ್ನಾಳಿ ಕುರಿ ಸಂತೆ ಮೈದಾನದಲ್ಲಿ ಬಯಲು ಜಂಗೀಕುಸ್ತಿ ಪಂದ್ಯಾವಳಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿ ಬೀರಲಿಂಗೇಶ್ವ ಟ್ರಸ್ಟ್ ಕಮಿಟಿಯಿಂದ ಡಿ.11ರಿಂದ ಡಿ.13ರರೆಗೆ ಪಟ್ಟಣದ ಕುರಿ ಸಂತೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಬಯಲು ಖಾಟಾ ಜಂಗೀಕುಸ್ತಿ ಪಂದ್ಯಾವಳಿಯ ಮೂರನೇ ಹಾಗೂ ಕೊನೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಸ್ತಿಯು ರಾಜ ಮಹಾರಾಜರ ಕಾಲದಿಂದಲೂ ಅತ್ಯಂತ ರೋಚಕ ಹಾಗೂ ಶಕ್ತಿಶಾಲಿ ಗ್ರಾಮೀಣ ಕ್ರೀಡೆಯಾಗಿ ಗಮನ ಸೆಳೆದಿದೆ. ಇಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸಮರ್ಥವಾಗಿ ಇರುವವರು ಜಯಶಾಲಿಗಳಾಗುತ್ತಾರೆ. ಸೋಲು -ಗೆಲವು ಮುಖ್ಯವಲ್ಲ, ಕ್ರೀಡಾ ಮನೋಭಾವನೆಯಿಂದ ಭಾಗವಹಿಸುವುದು ಮುಖ್ಯವಾಗುತ್ತದೆ ಎಂದರು.ಸಿಪಿಐ ಸುನೀಲ್ ಕುಮಾರ್ ಮಾತನಾಡಿ, ಇಂದಿನ ಯುವಪೀಳಿಗೆ ಟಿ.ವಿ. ಮೊಬೈಲ್‌ಗಳಲ್ಲಿಯೇ ಮುಳುಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಶ್ರೀ ಬೀರಲಿಂಗೇಶ್ವ ಟ್ರಸ್ಟ್ ಕಮಿಟಿ ಬೀರಲಿಂಗೇಶ್ವರ ಕಾರ್ತಿಕೋತ್ಸವ ಗುಗ್ಗಳ ಮಹೋತ್ಸವ ನಡೆಸುತ್ತಿರುವುದು ಮಾದರಿ ಸೇವೆಯಾಗಿದೆ ಎಂದರು.
ನಾಡಿನ ನಾನಾ ಭಾಗಗಳಿಂದ 70ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಕುಸ್ತಿ ಪಂದ್ಯಾವಳಿಯ ಶುಕ್ರವಾರದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಶ್ಯಾಮ್ ವರ್ಗೀಸ್ ಪಾಲ್ಗೊಂಡು ಪೈಲ್ವಾನರಿಗೆ ಶುಭ ಕೋರಿದರು.