ಸೊರಬ: ಹೋಳಿ ನಮ್ಮ ಸಂಸ್ಕೃತಿಯ ಪ್ರತೀಕ. ಹೋಳಿಯನ್ನು ಫಾಲ್ಗುಣ ಹುಣ್ಣಿಮೆ ದಿನ ಆಚರಿಸುತ್ತಾರೆ. ನಮ್ಮಲ್ಲಿರುವ ಕೆಟ್ಟ ಕಾಮನೆಗಳನ್ನು ತೊಡೆದು ಹಾಕಲು ಈ ಹಬ್ಬ ಮತ್ತು ಉತ್ಸವವನ್ನು ಆಚರಿಸುತ್ತೇವೆ ಎಂದು ಹೋಳಿ ಉತ್ಸವ ಸಮಿತಿಯ ಮುಖಂಡರಾದ ಮಂಜು ತಿಳಿಸಿದರು.
ಶುಕ್ರವಾರ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಹೋಳಿ ಉತ್ಸವ ಸಮಿತಿ ಆಯೋಜಿಸಿದ್ದ ಹೋಳಿ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪಾಲ್ಗುಣ ಹುಣ್ಣಿಮೆಯ ಈ ದಿನ ಮನ್ಮಥನನ್ನು ರುದ್ರ ದೇವರು ತಮ್ಮ ಮೂರನೇ ಕಣ್ಣಿಂದ ಸುಟ್ಟರು. ರುದ್ರದೇವರು ಮನ್ಮಥನನ್ನು ಸುಟ್ಟು ದಿನವೇ ಹೋಳಿ ಹುಣ್ಣಿಮೆ. ಇದು ನಮ್ಮ ಸನಾತನ ಪದ್ಧತಿಯ ವರ್ಷದ ಕಡೇ ಹಬ್ಬ ಎಂದರು.ನಮ್ಮ ಸಾಧನೆಯ ಪಥದಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ. ಅವುಗಳನ್ನು ನಿವಾರಿಸಲು ನಾವು ಕಾಮನ (ಮನ್ಮಥ) ದಹಿಸಿ ದೇವರ ಮೊರೆ ಹೋಗಬೇಕು. ನಮ್ಮಲ್ಲಿ ಬರುವ ಕಾಮನೆಗಳು ದೈವ ಕಾರ್ಯಕ್ಕೆ ಸಾಧನೆಯಾಗಲಿ ಎಂದು ಕೋರಬೇಕು. ಈ ದಿನ ಹೋಳಿಗೆ, ನೈವೇಧ್ಯ ಮಾಡುವ ಸಂಪ್ರದಾಯ ಇದೆ. ಕಾಮನ ರುದ್ರ ದೇವರು ದಹಿಸಿದ್ದರಿಂದ ಕಾಮದಹನವನ್ನು ಈ ದಿನ ಮಾಡುತ್ತಾರೆ. ಈಗಿನ ಯಾಂತ್ರಿಕ ಬದುಕಿನಲ್ಲಿ ಮನಸ್ಸಿನ ಚಾಂಚಲ್ಯತೆ ಅತಿ ವೇಗದಲ್ಲಿ ಹೋಗುತ್ತಿದೆ. ಹಿರಿಯರಿಂದ ಹಿಡಿದು ಕಿರಿಯರವರೆಗೆ ತಾಳ್ಮೆ, ಸಹನೆ ಎಲ್ಲವೂ ಕಳೆದುಕೊಂಡಿದ್ದೇವೆ. ನಮ್ಮಲ್ಲಿರುವ ಕೆಟ್ಟ ಕಾಮನೆಗಳ ದಹನ ಮಾಡೋಣ. ಮನಸ್ಸು ಭಗವಂತನ ಕಡೆಗೆ ಸಾಗವಂತಾಗಲಿ ಎಂದು ಹೇಳಿದರು.ಉತ್ಸವ ಸಮಿತಿಯ ಸದಸ್ಯರಾದ ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ, ರಾಹುಲ್.ಬಿ, ಸಂಕೇತ್ ಗೌಡ, ಮಧು, ಆಕಾಶ್, ಸುನೀಲ, ರಾಮು, ಪ್ರಸನ್ನ , ಅಭಿ, ಲೋಕೇಶ್, ವಿಜಿತ್ ಬಿ, ಕೃಷ್ಣ ಮೊಗವೀರ್, ಅರುಣ ಆಚಾರ್, ವಿನಯ್.ಐ.ಜಿ, ಮಹೇಂದ್ರ, ರಾಘು, ಸುಭಾಷ್, ಅನಿಲ್ ಆಚಾರ್, ಹನುಮೇಶ್, ಪ್ರದೀಪ, ಪ್ರವೀಣ, ರವಿ, ಗಗನ್, ಜಯಾ, ಪ್ರವೀಣ ಆಟೋ, ಅಮಿತ್, ವಿನಾಯಕ್, ಯೋಗೇಶ್ ಮತ್ತಿತರರಿದ್ದರು.