ರಾಮಸಮುದ್ರದಲ್ಲಿ ಶ್ರೀನಿವಾಸಸ್‌ಗೆ ನುಡಿನಮನ

KannadaprabhaNewsNetwork |  
Published : May 10, 2024, 01:38 AM IST
9ಸಿಎಚ್ಎನ್‌54ಚಾಮರಾಜನಗರದ ರಾಮಸಮುದ್ರ ಆಟೋ ನಿಲ್ದಾಣದಲ್ಲಿ ಮಾಜಿ ಸಚಿವ, ಹಾಲಿ ಸಂಸದ ದಿವಂಗತ ವಿ.ಶ್ರೀನಿವಾಸಪ್ರಸಾದ್ ಅವರ 12 ನೇ ದಿನದ ಉತ್ತರ ಕ್ರಿಯಾಧಿ  ಮತ್ತು ಭೂಶಾಂತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ವಿ.ಶ್ರೀನಿವಾಸಪ್ರಸಾದ್ 12 ನೇ ದಿನದ ಉತ್ತರ ಕ್ರಿಯಾಧಿ ಮತ್ತು ಭೂಶಾಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಾಜಿ ಸಚಿವ, ಹಾಲಿ ಸಂಸದ ದಿವಂಗತ ವಿ.ಶ್ರೀನಿವಾಸಪ್ರಸಾದ್ ದಲಿತ ನಾಯಕರಲ್ಲದೇ ಎಲ್ಲಾ ಸಮುದಾಯಗಳ ನಾಯಕರಾಗಿದ್ದರೆಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ರಾಮಸಮುದ್ರ ಆಟೋ ನಿಲ್ದಾಣದಲ್ಲಿ ಮಾಜಿ ಸಚಿವ, ಹಾಲಿ ಸಂಸದ ದಿವಂಗತ ವಿ.ಶ್ರೀನಿವಾಸಪ್ರಸಾದ್ 12 ನೇ ದಿನದ ಉತ್ತರ ಕ್ರಿಯಾಧಿ ಮತ್ತು ಭೂಶಾಂತಿ ಕಾರ್ಯಕ್ರಮದ ಅಂಗವಾಗಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಪುಪ್ಷಾರ್ಚನೆ ಮಾಡಿ ಮಾತನಾಡಿದರು.

ವಿ.ಶ್ರೀನಿವಾಸಪ್ರಸಾದ್ ರಾಜಕಾರಣದಲ್ಲಿ ಸುದೀರ್ಘ ಸೇವೆ ಸಲ್ಲಿಸಿದರು. ಎಲ್ಲ ಸಮುದಾಯಗಳ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ ಹೊಂದಿದ್ದರು. ಉಪ್ಪಾರ ಸಮುದಾಯ ವಾಸ ಮಾಡುವ ಮೋಳೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ನಾನು ಕೂಡ ರಾಜಕಾರಣದಲ್ಲಿ ಇಷ್ಟುಮಟ್ಟಕ್ಕೆ ಬರಲು ಪ್ರಸಾದ್ ಕಾರಣಕರ್ತರು. ಅವರನ್ನು ಎಂದೆಂದಿಗೂ ಮರೆಯೋದಿಲ್ಲ. ಅವರ ಕುಟುಂಬಕ್ಕೆ ದುಃಖ ಭರಿಸುವ ದೇವರು ಶಕ್ತಿ ಕರುಣಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ರಾಮಸಮುದ್ರದ ದೊಡ್ಡ ಯಾಜಮಾನ ಬಿ, ನಾಗರಾಜು, ಯಾಜಮಾನ ಪಾಪಣ್ಣ, ನಂಜುಂಡ, ಬಸವರಾಜು, ಶಿವರಾಜು, ಅಂಜುನೇಯ, ಡಿ.ನಂಜಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಮುಖಂಡ ಎ.ಎಚ್.ಖಾನ್, ನಗರಸಭಾ ಸದಸ್ಯ ಆರ್‌.ಎಂ. ರಾಜಪ್ಪ, ಮಾಜಿ ಸದಸ್ಯ ಬಸವರಾಜು, ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ಎಲ್, ಪ್ರಸನ್ನ, ಚಿಗುರು ಬಂಗಾರು, ಕೆ, ನಾಗರಾಜು, ವೇಣು ಗೋಪಾಲ್, ಕೇಬಲ್ ಚಿನ್ನಣ್ಣ, ಆಟೋ ರಾಜು, ಜಿ ರಾಜಪ್ಪ, ರಾಮು, ಮನು, ಕಿಟ್ಟ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚೇತನ, ಪದಾಧಿಕಾರಿಗಳು ಕೆ. ಮಹೇಶ್ ಶಾಮಿಯಾನ, ಮಂಜು ಶ್ರೀ ಧರ್, ಕಾರ್ಯಯ್ಯ, ಆರ್, ಹೆಚ್, ನಂಜುಂಡ ಸ್ವಾಮಿ (ಪಾಪು), ಆರ್ ಡಿ ಮಹೇಶ್, ಮಹದೇವಸ್ವಾಮಿ ಕಲರ್, ಇತರರು ಹಾಜರಿದ್ದರು. ಈ ವೇಳೆ ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯಿತು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ