ಗೃಹರಕ್ಷಕರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿ: ಡಿಎಆರ್‌ ಡಿವೈಎಸ್ಪಿ ವೀರಣ್ಣ

KannadaprabhaNewsNetwork |  
Published : May 30, 2025, 12:07 AM IST
8 | Kannada Prabha

ಸಾರಾಂಶ

ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಯೊಂದಿಗೆ ಸರ್ಕಾರದ 57 ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗಲಿದ್ದು, ಈ ಮೂಲಕ ಸರ್ಕಾರದೊಂದಿಗೆ ಸಮಾಜ ಸೇವೆ ಕೂಡ ಮಾಡಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ಗೃಹರಕ್ಷಕರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ಡಿಎಆರ್‌ಡಿವೈಎಸ್ಪಿ ವೀರಣ್ಣ ಸಲಹೆ ನೀಡಿದರು.

ಜ್ಯೋತಿನಗರದಲ್ಲಿನ ಡಿಎಆರ್‌ಸಮುದಾಯದ ಭವನದಲ್ಲಿ ಜಿಲ್ಲಾ ಗೃಹ ರಕ್ಷಕ ದಳವು ಗುರುವಾರ ಆಯೋಜಿಸಿದ್ದ ಗೃಹರಕ್ಷಕರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 3 ತಿಂಗಳ ಹಿಂದೆ ಸಾಮಾನ್ಯ ಪ್ರಜೆಗಳಾಗಿದ್ದ ನೀವು ಗೃಹರಕ್ಷಕದ ದಳಕ್ಕೆ ಸೇರುವ ಮೂಲಕ ಪೊಲೀಸರಂತೆ ಸಮವಸ್ತ್ರ ಧರಿಸುವ ಅವಕಾಶ ಲಭಿಸಿದೆ. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಎಂ. ಕಾಂತರಾಜು ಮಾತನಾಡಿ, ಗೃಹರಕ್ಷಕ ದಳಕ್ಕೆ 204 ಮಂದಿ ಆಯ್ಕೆಯಾಗಿದ್ದು, ತರಬೇತಿಗೆ 177 ಮಂದಿ ಹಾಜರಾದ ಹಿನ್ನಲೆಯಲ್ಲಿ ಅವರಿಗೆ 10 ದಿನಗಳ ಕಾಲ ಮೂಲ ತರಬೇತಿ ನೀಡಲಾಗಿದೆ. ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಯೊಂದಿಗೆ ಸರ್ಕಾರದ 57 ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗಲಿದ್ದು, ಈ ಮೂಲಕ ಸರ್ಕಾರದೊಂದಿಗೆ ಸಮಾಜ ಸೇವೆ ಕೂಡ ಮಾಡಬಹುದು ಎಂದು ತಿಳಿಸಿದರು.

ಗೃಹರಕ್ಷಕ ದಳದ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಎಂ. ನಾಲತ್‌ ವಾಡ್, ಉಪ ಕಮಾಂಡೆಂಟ್ ಎಸ್.ಆರ್. ಗಾಯಕ್ವಾಡ್, ಬೋಧಕರಾದ ಎಂ.ಆರ್. ಚಂದನ್, ಎಸ್. ಮಂಜುನಾಥ್, ಸಿಬ್ಬಂದಿ ಎಂ. ಶಿಲ್ಪಾ, ಎಸ್. ವಿದ್ಯಾಶ್ರೀ, ಎ.ಎಸ್. ಶ್ರುತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''