ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ಪಟ್ಟಣದ ಪಪಂ ವ್ಯಾಪ್ತಿಯಲ್ಲಿ ೩ಕೋಟಿ ವೆಚ್ಚದ ೧೦ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಪಪಂ, ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾಗಿದೆ. ಪಪಂ ವ್ಯಾಪ್ತಿಯ ೩೮ಲಕ್ಷದ ಬ್ಯಾಕ್ ಹೋ ಲೋಡರ್ ಚಾಲನೆ, ೧೮ಲಕ್ಷದ ೨ಆಟೋ ಟಿಪ್ಪರ್, ೧೫ಲಕ್ಷದ ಎರಡು ಬಗೆಯ ಡಸ್ಟ್‌ಬೀನ್, ೧ಲಕ್ಷದ ವೆಚ್ಚದಲ್ಲಿ ವಿಶೇಷ ಚೇತನರಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಲಿದೆ.
ನಂತರ ಕೊರಟಗೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹತ್ತಿರ ೬೦ಲಕ್ಷದ ದಿನನಿತ್ಯ ಮಾರುಕಟ್ಟೆ, ೫ಲಕ್ಷದ ಹಳೇ ವಸತಿ ಗೃಹ ತೆರವು, ೫ಲಕ್ಷದ ಕಲಾಮಂದಿರದ ವಿಸ್ತ್ರತ ಯೋಜನಾ ಕಾಮಗಾರಿ, ೧೦ಲಕ್ಷದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ೨೦ಲಕ್ಷದ ಸಂತೆ ಮೈದಾನಕ್ಕೆ ಫೆನ್ಸಿಂಗ್ ಮತ್ತು ದುರಸ್ತಿ ಕಾಮಗಾರಿಗೆ ಗೃಹಸಚಿವರು ಚಾಲನೆ ನೀಡಲಿದ್ದಾರೆ.ಕೊರಟಗೆರೆ ಪಟ್ಟಣದ ಸಜ್ಜನರ ಬೀದಿ ಕನ್ನಿಕಾ ಮಹಲ್ ಹತ್ತಿರ ಆರೋಗ್ಯ ಇಲಾಖೆಯ ನಮ್ಮ ಕ್ಲಿನಿಕ್ ಉದ್ಘಾಟನೆ, ತೋಟಗಾರಿಕೆ ಇಲಾಖೆಯ ೫೩ಲಕ್ಷ ವೆಚ್ಚದ ನೂತನ ಕಟ್ಟಡದ ಉದ್ಘಾಟನೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ನೆರವೇರಿಸಲಿದ್ದಾರೆ.