ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ 2 ತಿಂಗಳಲ್ಲಿ ನಡೆದ ಇಂತಹ ಪ್ರಕರಣಗಳು ಪರಿಶಿಷ್ಟ ಜಾತಿಯವರ ಸುರಕ್ಷತೆ, ಕಾನೂನು ರಕ್ಷಣೆಯ ಕುರಿತಂತೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿವೆ. ಮಾದಿಗ, ಸಮಗಾರ, ಡೋಹರ, ದಕ್ಕಲಿಗ, ಮೋಚಿಗಾರ ಸಂಘಟನೆಗಳ ಒಕ್ಕೂಟವೂ ಇಂತಹ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತಿವೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯವರ ಭದ್ರತೆ ಮತ್ತು ಕಾನೂನು ರಕ್ಷಣೆ ಬಗ್ಗೆ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ತುಮಕೂರು ಜಿಲ್ಲೆ ಮಧುಗಿರಿ ತಾ. ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ 17 ವರ್ಷದ ಯುವಕ ಸಿಂಹಾದ್ರಿ ಕೊಲೆ ಘಟನೆ, ಯಾದಗಿರಿ ಜಿಲ್ಲೆ ವಡಗೇರ ತಾ. ಗುರುಸಣಗಿಯಲ್ಲಿ ದೇವಸ್ಥಾನಕ್ಕೆ ತೆರಳಿದ ದಲಿತ ಕುಟುಂಬದ ಮೇಲಾದ ಹಲ್ಲೆ, ದೌರ್ಜನ್ಯ ಪ್ರಕರಣಗಳು ರಾಜ್ಯದ ಗೃಹ ಇಲಾಖೆಯ ಪೊಳ್ಳು ಭರವಸೆಗಳನ್ನು ಬಟಾಬಯಲು ಮಾಡಿವೆ ಎಂದು ಅವರು ತೀವ್ರ ಆಕ್ರೋಶ ಹೊರ ಹಾಕಿದರು.ಪ್ರತಿ ತಿಂಗಳು ಪೊಲೀಸ್ ಠಾಣೆಗಳಲ್ಲಿ ಎಸ್‌ಸಿ-ಎಸ್‌ಟಿ ದಿನಾಚರಣೆ ಸಭೆ ನಡೆಸಲಾಗುತ್ತಿದೆಯೆಂದು ಸರ್ಕಾರ ಹೇಳುತ್ತದೆ. ಆದರೆ, ನೆಲ ಮಟ್ಟದಲ್ಲಿ ದೌರ್ಜನ್ಯ ಪ್ರಕರಣಗಳು ನಿರಂತರ ಹೆಚ್ಚುತ್ತಿರುವುದು ಗೃಹ ಇಲಾಖೆ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೇವಲ ಅನಾಹುತ, ಕಹಿ ಘಟನೆಗಳು ಆದ ನಂತರ ಎಫ್‌ಐಆರ್ ದಾಖಲಿಸಿ ಪ್ರತಿಕ್ರಿಯಿಸುವುದು ಇಲಾಖೆಯ ಕೆಲಸವಲ್ಲ. ಹಲ್ಲೆ, ಕೊಲೆ, ದೌರ್ಜನ್ಯದಂತಹ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು, ತ್ವರಿತ ತನಿಖೆ ನಡೆಸಿ, ಸಂತ್ರಸ್ಥರಿಗೆ ನ್ಯಾಯ, ರಕ್ಷಣೆ ಹಾಗೂ ಸೂಕ್ತ ಪರಿಹಾರ ಕಲ್ಪಿಸುವುದು ಸರ್ಕಾರದ ಕರ್ತವ್ಯ ಎಂದು ಅವರು ತಿಳಿಸಿದರು.
ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಎಚ್.ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ರಾಜು ಶಾಮನೂರು, ವೀರೇಶ್ ಆದಾಪುರ, ಜಿಲ್ಲಾ ಕಾರ್ಯದರ್ಶಿ ಬಿ.ಟಿ.ವಿಶ್ವನಾಥ್, ಕೆಟಿಜೆ ನಗರ ಬಿ.ಆನಂದ, ಹಾಲೇಶ, ಎಚ್.ಹನುಮಂತಪ್ಪ, ಬಿ.ಹಾಲೇಶ, ಬಿ.ಕರಿಯಪ್ಪ ಇತರರು ಇದ್ದರು.