ಕನ್ನಡಪ್ರಭ ವಾರ್ತೆ ಮಂಡ್ಯ
ದೇಶೀಯ ಕ್ರೀಡೆ ಖೋ-ಖೋದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಗೌತಮ್ ಅವರನ್ನು ಡಿ.ಮಲ್ಲಿಗೆರೆ ಗ್ರಾಮಸ್ಥರು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಅಭಿನಂದಿಸಿದರು.ಗ್ರಾಮದ ಮುಖಂಡರಾದ ಟಿ. ಹುಚ್ಚಪ್ಪ ಮಾತನಾಡಿ, ಭವಿಷ್ಯದಲ್ಲಿ ಇಂತಹ ಅನೇಕ ಉನ್ನತ ಸಾಧನೆಗಳನ್ನು ಗೌತಮ್ ಮಾಡಲಿ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಇವರ ಸಾಧನೆ ಸದಾ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಎಂ.ಕೆ.ಗೌತಮ್, ಒಬ್ಬ ಆಟೋ ಚಾಲಕನ ಮಗನಾಗಿದ್ದು ಈ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೆಮಿ ಫೈನಲ್‌ನಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಇವರು ತಮ್ಮ ಕಠಿಣ ಪರಿಶ್ರಮದಿಂದ ಈ ಸ್ಥಾನಕ್ಕೇರಿದ್ದಾರೆ ಎಂದರು.ಡಿ.ಮಲ್ಲಿಗೆರೆ ಗ್ರಾಮದ ಎಂ.ಬಿ. ರಮೇಶ್, ಎಂ.ಟಿ.ಶ್ರೀನಿವಾಸ್, ಎಂ ಆರ್ ಸುನೀಲ್, ಎಂ.ಎನ್. ಕಪನೀಗೌಡ , ಎಂಎಚ್ ಪುಟ್ಟಸ್ವಾಮಿ, ಎಂ.ಶ್ರೀಕಂಠೇಗೌಡ, ಎಂ.ಎನ್.ಸ್ವಾಮಿಗೌಡ, ಎಂ.ಬಿ. ಶ್ರೀನಿವಾಸ್, ಎಂ.ಎಚ್. ಮಹೇಶ್,ಎಂ.ಟಿ.ರಾಮಚಂದ್ರ, ಎಂ.ನಂಜಪ್ಪ, ಸಂತೋಷ, ಅಭಿ, ಗ್ರಾಮದ ಯಜಮಾನರು, ಮುಖಂಡರು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಆಸಕ್ತರು ೨೫ ಸಾಲಿನ ಎರಡು ಕವನಗಳು, ಕಿರು ಪರಿಚಯ, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸವನ್ನು ಮತ್ತು ಸಾಧಕರು ಸಾಧನೆಯ ವಿವರಗಳನ್ನು ಮೇ ೫ರೊಳಗೆ ಕಳುಹಿಸಬೇಕು. ವ್ಯಾಟ್ಸಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡು, ನಂತರ ಅಂಚೆ ಮೂಲಕ ಕಳುಹಿಸಬೇಕು ಎಂದು ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ ತಿಳಿಸಿದ್ದಾರೆ.
ಕವಿಗಳು, ಕವನಗಳು, ಸಾಧಕರು ಪರಿಚಯವನ್ನು ವಿಳಾಸ: ಎಸ್. ಕೃಷ್ಣಸ್ವರ್ಣಸಂದ್ರ, ಕವಿಮಿತ್ರ, ನಂ-೭೬೭, ಸ್ವರ್ಣಸಂದ್ರ, ಮಂಡ್ಯ-೨ ಕಳುಹಿಸಬೇಕು.ಸಂಪರ್ಕ ಮತ್ತು ವ್ಯಾಟ್ಸಾಪ್ ನಂ-೯೪೪೮೪೨೪೩೮೦ಗೆ ಕಳುಹಿಸಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.