ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂ
ಈ ಕಾಯ್ದೆ ಬಗ್ಗೆ ನನಗೆ ಈವರೆಗೂ ಯಾರೂ ಮಾಹಿತಿ ನೀಡಿರಲಿಲ್ಲ. ಈಗ ತಿಳಿದಿದ್ದು, ಈ ಬಗ್ಗೆ ನಿಯೋಗ ಬಂದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಕಾಫಿ ಬೆಳೆಗಾರರಿಗೆ ಶೇ.3 ಬಡ್ಡಿದರದಲ್ಲಿ ಬೆಳೆ ಸಾಲ ನೀಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷರು ಗಮನ ಸೆಳೆದಿದ್ದು, ನನ್ನ ಬಳಿಯಲ್ಲಿ ರಾಜ್ಯ ಸರ್ಕಾರದ ಅಧಿಕಾರವಿದ್ದಿದ್ದರೆ ಈ ಬಗ್ಗೆ ನಾನು ಕೇಂದ್ರದ ಬಳಿ ಯ ವರೆಗೂ ಹೋಗಲು ಬಿಡುತ್ತಿರಲಿಲ್ಲ. ಕೂಡಲೇ ಈ ಬಗ್ಗೆ ಆದೇಶ ಮಾಡುತ್ತಿದ್ದೆ. ಇದನ್ನು ಕಾರ್ಯರೂಪಕ್ಕೆ ತರಲು ಕಾಫಿ ಮಂಡಳಿ ಜೊತೆಗೆ ನಾನು ಸದಾ ಇದ್ದು, ನಿಯೋಗ ಬಂದರೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ನಾನು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ರೇಲ್ವೇ ಬ್ಯಾರಿಕೇಡ್ ನಿರ್ಮಿಸಲು ಆದೇಶ ನೀಡಿದ್ದೆ. ಬಳಿಕ ನನ್ನ ಅಧಿಕಾರವಧಿ ಮುಕ್ತಾಯದ ನಂತರ ಆ ಯೋಜನೆ ಸ್ಥಗಿತ ಗೊಳಿಸಿದ್ದಾರೆ. ಈ ಯೋಜನೆಗೆ ಕೇಂದ್ರದಲ್ಲೂ ಸಾಕಷ್ಟು ದುಡ್ಡಿದ್ದು, ಕೇಂದ್ರದ ಪರಿಸರ ಸಚಿವರಿಗೂ ಯೋಜನೆ ಜಾರಿಗೆ ತಿಳಿಸಿದ್ದೇನೆ. ವೈಜ್ಞಾನಿಕವಾಗಿ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಬೆಳೆಗಾರರಿಗೆ ಅನುಕೂಲವಾಗಲು ಹಾಸನದಲ್ಲಿ ರಸಗೊಬ್ಬರ ಉತ್ಪಾದನಾ ಘಟಕ ಆರಂಭಿಸಲು ಕೋರಿಕೆಯಿಟ್ಟಿದ್ದು, ಈ ಬಗ್ಗೆ ಜೆ.ಪಿ.ನಡ್ಡಾ ಬಳಿ ಚರ್ಚಿಸುವ ಭರವಸೆ ನೀಡಿದರು.ಒತ್ತುವರಿ ಸಮಸ್ಯೆ ಎರಡು ವರ್ಷ ಸುಮ್ಮನಿರಿ: ಅರಣ್ಯ ಒತ್ತುವರಿ ಸಮಸ್ಯೆ ನಿವಾರಿಸಲು ಕೋರ್ಟ್ ಆದೇಶಗಳು ಸಹ ಈ ಬಗ್ಗೆ ಹಲವು ಇದ್ದು, ಇದನ್ನು ಕಡೆಗಣಿಸಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕ್ಯಾಬಿನೆಟ್‌ನಲ್ಲೂ ಚರ್ಚೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ 2 ವರ್ಷ ಸುಮ್ಮನಿರಿ ಎಂದು ಸಚಿವ ಕುಮಾರಸ್ವಾಮಿ ಹೇಳಿದರು. ಭಗವಂತ ನನ್ನಿಂದ ಸಮಾಜಕ್ಕೆ ಏನಾದರೂ ಕೆಲಸ ಆಗಬೇಕು ಎಂದು ನನ್ನನ್ನು 5 ಬಾರಿ ಉಳಿಸಿದ್ದಾನೆ. ಸಮಸ್ಯೆ ನಿವಾರಣೆಗೆ 5 ವರ್ಷದ ಸುಭದ್ರ ಸರ್ಕಾರ ಅಗತ್ಯವಿದ್ದು, ಇದಕ್ಕೆ ನಾನು ಪುನಃ ಮುಖ್ಯಮಂತ್ರಿ ಯಾಗಬೇಕಿದೆ.ರೈತರಿಗೆ ಆರ್ಥಿಕ ಶಕ್ತಿ ತುಂಬಬೇಕು. ಗ್ರಾಪಂಗಳಿಗೆ ಶಕ್ತಿ ತುಂಬಿ ರೈತರು ಸಾಲಗಾರರಾಗದೇ ಮಾರುಕಟ್ಟೆ ಹೇಗೆ ಸೃಷ್ಟಿ ಮಾಡಿಕೊಳ್ಳಬೇಕು. ಸ್ಟೋರೇಜ್ ಹೇಗೆ ನಿರ್ಮಿಸಬೇಕು, ಆರೋಗ್ಯ, ಶಿಕ್ಷಣ ಮುಂತಾದ ವಿಚಾರಗಳ ಬಗ್ಗೆ ಯೋಜನೆ ಮಾಡಿಕೊಂಡಿದ್ದೇನೆ. ₹2 ಸಾವಿರಕ್ಕೆ ಯಾರೂ ಮರುಳಾಗದೆ ಅಭಿವೃದ್ಧಿಗೆ ಒತ್ತು ನೀಡಿ. ಅರಣ್ಯ ಕಾಯ್ದೆಯಿಂದ ಅರಣ್ಯ ವಿಸ್ತರಣೆ ಆಗುತ್ತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಕಾಯ್ದೆ ತೀರ್ಪು, ಪ್ರತಿಗಳನ್ನು ತೋರಿಸಿ ತಲೆ ತಲಾಂತರದಿಂದ ಬದುಕುತ್ತಿರುವ ಕುಟುಂಬಗಳ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಅಂದು ಯಾವುದೇ ಸಮಸ್ಯೆಯಿಲ್ಲದೆ ಉತ್ತಮ ಅರಣ್ಯ ಪ್ರದೇಶವಿತ್ತು. ಆದರೆ ಇಂದು ಅಧಿಕಾರಿಗಳು ಕೇವಲ ಅರಣ್ಯದ ಲೆಕ್ಕ ವನ್ನಷ್ಟೇ ತೋರಿಸುತ್ತಿದ್ದಾರೆ. ಕೋಟ್ಯಂತರ ರು. ಖರ್ಚು ಮಾಡಿ ಗಿಡ ನೆಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಎಲ್ಲಿ ಹುಡುಕಿದರೂ ಸಹ ಒಂದೂ ಗಿಡಗಳು ಕಾಣುವುದಿಲ್ಲ ಎಂದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಬೇಲೂರು ಶಾಸಕ ಎಚ್.ಕೆ.ಸುರೇಶ್, ಕಾಫಿ ಮಂಡಳಿ ಸಿಇಒ ಕೂರ್ಮಾರಾವ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಸಿಸಿಆರ್‌ಐನ ಸಂಶೋಧನಾ ನಿರ್ದೇಶಕ ಡಾ.ಸೆಂಥಿಲ್‌ಕುಮಾರ್, ಉಗಾಂಡ ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಜೆಫ್ರಿ, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಅಲ್ನೂರಿ ಸೀತಾ ರಾಮ್ ಜಿಲ್ಲೆಯ ಜಿಲ್ಲಾಧಿಕಾರಿ ದಿನೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಕಾಫಿ ಮಂಡಳಿ ಸದಸ್ಯರಾದ ಭಾಸ್ಕರ್ ವೆನಿಲ್ಲಾ, ಎ.ಜಿ. ದಿವಿನ್‌ರಾಜ್, ಡಾ.ಮಹಾಬಲರಾವ್, ಡಾ.ಕೃಷ್ಣಾನಂದ ಮತ್ತಿತರರು ಹಾಜರಿದ್ದರು.-- (ಬಾಕ್ಸ್)--
5 ಕಂಪೆನಿಗಳಿಗೆ ಮ್ಯಾಗ್ನೆಟ್ ಉತ್ಪಾದನೆಗೆ ಅವಕಾಶ
ಕಲ್ಪವೃಕ್ಷವಾಗಲಿದೆ ಕಾಫಿ
ಪ್ಲೇವರ್ ಆಫ್ ಇಂಡಿಯಾ ಫೈನ್ ಕಪ್ ಪ್ರಶಸ್ತಿ ವಿತರಣೆಶತಮಾನೋತ್ಸವದಲ್ಲಿ ನೌ ಯುವರ್ ಕಾಫಿ- ಪ್ಲೇವರ್ ಆಫ್ ಇಂಡಿಯಾ ಫೈನ್ ಕಪ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದ್ದು, ವಿವಿಧ ವಿಭಾಗಗಳಲ್ಲಿ ತಮಿಳುನಾಡಿನ ರಜಾಕ್ ಸೈಟ್, ಚಿಕ್ಕಮಗಳೂರಿನ ಜಾಕಬ್ ಮಮ್ಮೆನ್, ತಮಿಳುನಾಡು ನೀಲಗಿರಿಸ್‌ನ ಸಂದೀಪ್ ಮ್ಯಾಥ್ಯೂ, ಕೊಡಗಿನ ಜಿ.ಜಿ.ಪದ್ಮಶ್ರೀ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅತ್ಯುತ್ತಮ ಮಳಿಗೆ ಪ್ರದರ್ಶಿಸಿದ ಹಟ್ಟಿ ಕಾಫಿ ಸಂಸ್ಥೆ (ಪ್ರಥಮ), ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ (ದ್ವಿತೀಯ), ಮಾರ್ಶಲ್ ಪಾವ್ಲರ್ ಎಂಜಿನಿಯ ರ‍್ಸ್ ಇಂಡಿಯಾ ಸಂಸ್ಥೆ (ತೃತೀಯ) ಬಹುಮಾನ ಪಡೆಯಿತು. ಸಿಸಿಆರ್‌ಐ ನೂರರ ನೆನಪಿನ ಕಾಫಿ ಕೃಷಿಕರ ಕಥನ ಕೈಪಿಡಿ ಬಿಡುಗಡೆ ಮಾಡಲಾಯಿತು.
ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಆಯೋಜಿಸಿದ್ದ ಶತಮಾನೋತ್ಸವ ಸಮಾರೋಪದಲ್ಲಿ ಸಿಸಿಆರ್‌ಐ ನೂರರ ನೆನಪಿನ ಕಾಫಿ ಕೃಷಿಕರ ಕಥನ ಕೈಪಿಡಿಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದರು. ೨೨ಬಿಹೆಚ್‌ಆರ್ ೩:
ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ನೌ ಯುವರ್ ಕಾಫಿ- ಪ್ಲೇವರ್ ಆಫ್ ಇಂಡಿಯಾ ಫೈನ್ ಕಪ್ ಪ್ರಶಸ್ತಿಗಳನ್ನು ವಿವಿಧ ಸಾಧಕರಿಗೆ ಪ್ರಧಾನ ಮಾಡಲಾಯಿತು. ೨೨ಬಿಹೆಚ್‌ಆರ್ ೫:
ಸಮಾರಂಭದ ಯಶಸ್ವಿಗೆ ಶ್ರಮಿಸಿದ ಕಾಫಿ ಮಂಡಳಿ ಸಿಇಓ ಕೂರ್ಮಾರಾವ್ ಅವರನ್ನು ಸಚಿವ ಕುಮಾರಸ್ವಾಮಿ ಗೌರವಿಸಿದರು.೨೨ಬಿಹೆಚ್‌ಆರ್ ೬:ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧೆಡೆಯ ಬೆಳೆಗಾರರು.