ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕಿತ್ತೂರು ಚನ್ನಮ್ಮಳ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿದ ಮದಭಾವಿಯ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಯತ್ನಾಳ, ಪುತ್ಥಳಿಗೆ ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ನೀಡಿದರು.
ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಪವನ್ ಕತ್ತಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡಲು ಸರ್ಕಾರಕ್ಕೆ ಒತ್ತಾಯಿಸಿದರು.ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿ, ಮೊದಲು ನಾವು ಕೂಡಲಸಂಗಮ ಪೀಠ ಸ್ಥಾಪಿಸಿದ್ದು, ತದನಂತರ ಸ್ವಯಂ ಘೋಷಿತವಾದ ಟ್ರಸ್ಟ್. ಆದ್ದರಿಂದ ಸ್ವಾಮೀಜಿಗಳನ್ನು ಟ್ರಸ್ಟ್ ನಿಂದ ಉಚ್ಚಾಟಿಸುವ ಅಧಿಕಾರ ಯಾರಿಗೂ ಇಲ್ಲ. ಕಾರಣ ನಾವು ಪ್ರಥಮ ಪೀಠಾಧ್ಯಕ್ಷರನ್ನು ನಿಮ್ಮೆಲ್ಲರ, ಸಮಾಜದ ಒಳಿತಿಗಾಗಿ ಮುಂದುವರಿಸುವ ಕಾರ್ಯ ಮಾಡೋಣ ಎಂದು ತಿಳಿಸಿದರು.
ಸಿದ್ಧಸಿರಿ ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಶೈಲ ಒಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ₹1 ಕೋಟಿ ದೇಣಿಗೆ ನೀಡುವ ವಾಗ್ದಾನ: ಚನ್ನಮ್ಮನ ಹೆಸರಿನಲ್ಲಿ ವಿದ್ಯಾಸಂಸ್ಥೆ ಮತ್ತು ವಸತಿಗೃಹ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡುವ ನಿರ್ಧಾರ ಮಾಡಿ, ತಲಾ ₹1ಕೋಟಿಯನ್ನು ಸಮಾಜದ ಶಾಸಕರು, ವಿವಿಧ ನಾಯಕರು ನೀಡುವ ವಾಗ್ದಾನ ಮಾಡಿದರು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ₹10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುಂಚೆ ಸಾರೋಟಿನಲ್ಲಿ ಚನ್ನಮ್ಮನ ಭಾವಿಚಿತ್ರವಿಟ್ಟು ಗ್ರಾಮದಲ್ಲಿ ಮೆರವಣಿಗೆ ನಡೆಯಿತು. ಶ್ರೀ ನಾಗಯ್ಯ ಮಠಪತಿ, ಶ್ರೀಶೈಲ ದಲಾಲ, ಮಹಾಂತೇಶ ಹಿಟ್ಟಿನಮಠ, ಅರ್ಜುನ ಹಲಗಿಗೌಡರ, ಮಹಾಂತೇಶ ಉರಬಿನ್ನವರ, ಮಹಾದೇವ ಮಾರಾಪುರ, ಸಿದ್ದುಗೌಡ ಪಾಟೀಲ, ಬಸವರಾಜ ನಾಗನೂರ, ನಿಂಗಪ್ಪ ಪಿರೋಜಿ, ಲಕ್ಕಪ್ಪ ಪಾಟೀಲ, ಚಂದ್ರಶೇಖರ ಆದಬಸಪ್ಪಗೋಳ, ಚನ್ನಪ್ಪ ಪಟ್ಟಣಶೆಟ್ಟಿ, ವಿನೋದ ಉಳ್ಳೇಗಡ್ಡಿ, ಶ್ರೀಶೈಲ ಅರಭಾವಿ, ಬಸವರಾಜ ಹಾದಿಮನಿ ಸೇರಿದಂತೆ ಕಿತ್ತೂರು ರಾಣಿ ಚನ್ನಮ್ಮ ಕಮಿಟಿ ಪದಾಧಿಕಾರಿಗಳು ಹಾಗೂ ಅತಿಥಿಗಳು, ಯುವ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು. ಸದಾಶಿವ ಪಟ್ಟಣಶೆಟ್ಟಿ ಸ್ವಾಗತಿಸಿ, ಗೌರಿ ಮಟ್ಟಿ ನಿರೂಪಿಸಿ, ಮಲ್ಲಪ್ಪ ಅರಭಾವಿ ವಂದಿಸಿದರು.