ಮಹಾವೀರ ಕಾಲೇಜಿನಲ್ಲಿ ಸುಧಾಕರ್ ಕುಂದರ್ ಗೆ ಗೌರವ

KannadaprabhaNewsNetwork |  
Published : Jul 26, 2026, 03:00 AM IST
ಮಹಾವೀರ ಕಾಲೇಜಿನಲ್ಲಿ  ಸುಧಾಕರ್ ಕುಂದರ್ ಅವರಿಗೆ ಅಭಿನಂದನೆ  | Kannada Prabha

ಸಾರಾಂಶ

ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘವು ೨೦೨೫-೨೬ನೇ ಸಾಲಿನಲ್ಲಿ ೩.೧೯ ಕೋಟಿ ರು. ಮೊತ್ತದ ಜೇನು ವ್ಯವಹಾರ ನಡೆಸಿದ್ದು, ೧.೦೯ ಲಕ್ಷ ಕೆ.ಜಿ ಜೇನು ಮಾರಾಟಗೈದು ೧.೧೭ ಕೋಟಿ ರು. ಲಾಭ ಗಳಿಸಿದೆ. ಸಂಘವು ವಾರ್ಷಿಕವಾಗಿ ೩೭.೮೩ ಕೋಟಿ ರು. ವ್ಯವಹಾರ ಮಾಡಿದ್ದು, ೨೦.೯೨ ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ. ೨೨ ಡಿವಿಡೆಂಡ್‌ ಹಾಗೂ ಜೇನು ವ್ಯವಸಾಯಗಾರರಿಗೆ ಪ್ರತಿ ಕೆ.ಜಿಗೆ ೧೧ ರು. ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಘೋಷಣೆ ಮಾಡಿದರು.

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿ ಇಂಡಿಯನ್ ಎಕ್ಸ್ಪ್ರೆಸ್‌ ಕಾರ್ಗೋ ಕಂಪನಿಯ ಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಕುಂದರ್‌ ಅವರನ್ನು ವರ್ಲ್ಡ್ ಹೆಚ್‌ಆರ್‌ಡಿ ಕಾಂಗ್ರೆಸ್ ಸಮ್ಮೇಳನದಲ್ಲಿ ‘ನ್ಯಾಶನಲ್‌ ಅವಾರ್ಡ್ ಫಾರ್‌ಎಕ್ಸಲೆನ್ಸ್’ ಹೆಸರಿನಲ್ಲಿ ಲಾಜಿಸ್ಟಿಕ್ಸ್ ಅಂಡ್ ಸಪ್ಲೈಚೈನ್ ವಿಭಾಗದಲ್ಲಿ ಕೊಡ ಮಾಡುವ ‘ಮೋಸ್ಟ್ಇನ್ನೋವೇಟಿವ್‌ ಚೀಫ್ ಸಪ್ಲೈ ಚೈನ್ ಲೀಡರ್‌ ಆಫ್‌ ದ ಇಯರ್’ ಎಂಬ ವೈಯಕ್ತಿಕ ಪ್ರಶಸ್ತಿ ಮತ್ತು ‘ಫಾಸ್ಟೆಸ್ಟ್ಗ್ರೋಯಿಂಗ್‌ ಇಂಡಿಯನ್ ಕಂಪನಿ ಎಕ್ಸಲೆನ್ಸ್ಅವಾರ್ಡ್’ ಎಂಬ ಎರಡು ರಾಷ್ಟ್ರ ಪ್ರಶಸ್ತಿಗಳಿಂದ ಪುರಸ್ಕೃತರಾದ ಹಿನ್ನೆಲೆಯಲ್ಲಿ ಕಾಲೇಜಿನ ವತಿಯಿಂದ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್‌ ಸನ್ಮಾನ ನೆರವೇರಿಸಿ ಮಾತನಾಡಿ, ಸುಧಾಕರ ಕುಂದರ್‌ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ನಾಯಕತ್ವ ಗುಣಗಳಿಂದ ಮಾಡಿದ ಈ ಸಾಧನೆ ನಮ್ಮ ಕಾಲೇಜಿಗೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಯಶಸ್ಸು ಸಾಧಿಸುವಂತಾಗಲೆಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಕರ ಕುಂದರ್‌, ಮಹಾವೀರ ಕಾಲೇಜಿನ ತಮ್ಮ ಪದವಿ ದಿನಗಳ ವಿದ್ಯಾಭ್ಯಾಸ, ತಮ್ಮ 38 ವರ್ಷಗಳ ಕಠಿಣ ಪರಿಶ್ರಮ, ಶಿಸ್ತುಬದ್ಧ ಕಾರ್ಯಚಟುವಟಿಕೆ ಮತ್ತು ತಮ್ಮ ತಂಡದ ಕ್ರಿಯಾಶೀಲತೆಯ ಫಲವಾಗಿ ಈ ಪ್ರತಿಷ್ಠಿತ ಪ್ರಶಸ್ತಿಗಳು ತಮಗೆ ಲಭಿಸಿವೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅವರ ಪತ್ನಿ ಶಾಂತಾ ಸುಧಾಕರ್ ಹಾಗೂ ಮಗಳು ಅರ್ಚನಾ ಸುಧಾಕರ್ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಪದವಿಯಲ್ಲಿ ತಮ್ಮ ಸಹಪಾಠಿಯಾಗಿದ್ದ ಸುಧಾಕರ ಕುಂದರ್‌ ಅವರನ್ನು ಸ್ವಾಗತಿಸಿ, ಪರಿಚಯಿಸಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜು ವಿಶ್ವಸ್ತ ಮಂಡಳಿಯ ಸದಸ್ಯರಾದ ಅಬ್ದುಲ್‌ಗಫೂರ್, ರಾಮನಾಥ ಭಟ್, ಜೆ.ಜೆ. ಪಿಂಟೋ, ಕಾರ್ಯದರ್ಶಿ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಗರಾಜ್ ಬಿ.ಮತ್ತು ಕಾರ್ಯದರ್ಶಿ ಪ್ರೊ.ಎಂ.ರಮೇಶ್ ಭಟ್‌, ಪದವಿಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮೀ, ಎ. ಜೆ.ಸೋನ್ಸ್‌ , ಐಟಿಐನ ಪ್ರಾಂಶುಪಾಲ ಶ್ರೀಕಾಂತ್ ಹೊಳ್ಳ, ಎಂ.ಕೆ.ಅನಂತರಾಜ್‌, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಧನಂಜಯ ಶೆಟ್ಟಿ, ಎಸ್.ಎನ್.ಎಂ.ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಗುರುಪ್ರಸಾದ್ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಟ್ರಸ್ಟ್ಅಕೌಂಟೆಂಟ್‌ ರಾಜೇಶ್‌ಕುಮಾರ್, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿಶ್ವಸ್ತ ಮಂಡಳಿಯ ಕಾರ್ಯದರ್ಶಿ, ಪ್ರಾಂಶುಪಾಲ ಡಾ.ರಾಧಾಕೃಷ್ಣ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಜ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಲಿ: ಪ್ರಭಾಕರ ಪ್ರಭು
ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರತಿಭಟನೆಗೆ ಸಿಪಿಐಎಂ ಬೆಂಬಲ