ಕನ್ನಡಪ್ರಭ ವಾರ್ತೆ ಮೂಡಲಗಿ
ಪರಪುರುಷ ಇರುವ ರೂಮ್‌ಗೆ ಹೋಗಿ ಅರೆನಗ್ನ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು, ಪುರಸಭೆ ಸದಸ್ಯನ ಬಳಿ ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆ ಪ್ರಕಾರ ಪುರಸಭೆ ಸದಸ್ಯ ₹9 ಲಕ್ಷ ಹಣ ನೀಡಿದ್ದು, ಮತ್ತೆ ₹1ಲಕ್ಷಕ್ಕೆ ನೀಡುವಂತೆ ಒತ್ತಾಯಿಸಿದ್ದಾಕ್ಕಾಗಿ ಮನನೊಂದು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಡಿ.7 ರಂದು ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ ವೇಳೆ ಹಣಕ್ಕಾಗಿ ಹನಿಟ್ರ್ಯಾಪ್ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಆಗಿದ್ದೇನು?: ಪಟ್ಟಣದ ಕೆಇಬಿ ಫ್ಲಾಟದ ರೇಷ್ಮಾ ಕಡಬಿಶಿವಾಪುರ ಎಂಬ ಮಹಿಳೆ ಜತೆಗೆ ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಮೊದಲೇ ಸಂಚು ರೂಪಿಸಿದ್ದರು. ಹಾಗೆ ಡಿ. 2ರಂದು ರೇಷ್ಮಾ ಹಾಗೂ ಪುರಸಭೆ ಸದಸ್ಯ ಹುಕ್ಕೇರಿ ಪಟ್ಟಣದ ಲಾಡ್ಜ್ ಒಂದರಲ್ಲಿ ಅರೆನಗ್ನ ಬೆತ್ತಲೆಯಾದ ಸಂದರ್ಭದಲ್ಲಿ ರೊಮ್ ಒಳಗೆ ನುಗ್ಗಿದ ಅಬ್ದುಲ್, ಸುಭಾನಿ ಎಂಬುವವರು ವಿಡಿಯೋ ಮಾಡಿಕೊಂಡಿದ್ದರು. ನಂತರ ಪುರಸಭೆ ಸದಸ್ಯನ ಬಳಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆ ಪ್ರಕಾರ ಪುರಸಭೆ ಸದಸ್ಯ ₹9 ಲಕ್ಷ ಹಣ ನೀಡಿದ್ದು, ಇನ್ನುಳಿದ ₹1 ಲಕ್ಷ ಕೊಡು ಇಲ್ಲವಾದರೇ ನಿನ್ನ ಖಾಸಗಿ ಕ್ಷಣದ ವಿಡಿಯೋ ಬಿಡುಗಡೆ ಮಾಡ್ತಿವಿ ಎಂದು ಬೆದರಿಕೆ ಹಾಕಿದರು ಎನ್ನಲಾಗಿದೆ. ಆ ಬೆದರಿಕೆಗೆ ಹೆದರಿ ಪುರಸಭೆ ಸದಸ್ಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಜರುಗಿದೆ.