ಹನಿಟ್ರ್ಯಾಪ್ ಕೇವಲ ಮಾಧ್ಯಮಗಳ ಸೃಷ್ಟಿ : ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

KannadaprabhaNewsNetwork | Updated : Mar 29 2025, 01:31 PM IST

ಸಾರಾಂಶ

ಹನಿಟ್ರ್ಯಾಪ್ ವಿಚಾರವಾಗಿ ಸಚಿವ ರಾಜಣ್ಣ ಕಂಪ್ಲೆಂಟ್ ಕೊಟ್ಟಿದ್ದಾರೆ. ವಿಚಾರಣೆ ಬಳಿಕ ಸತ್ಯ ಆಚೆ ಬರುತ್ತದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.‘

 ಚಿಕ್ಕಬಳ್ಳಾಪುರ : ಹನಿಟ್ರ್ಯಾಪ್‌ನಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಮುಜುಗರವಿಲ್ಲ. ಹನಿಟ್ರ್ಯಾಪ್ ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ, ಬಿಜೆಪಿಯವರಿಗೆ ಐಡಿಯಾಲಜಿಕಲ್ ಆಗಿ ಫೈಟ್ ಮಾಡೋಕೆ ಯೋಗ್ಯತೆ ಇಲ್ಲ. ಹನಿಟ್ರ್ಯಾಪ್ ವಿಚಾರವಾಗಿ ಸಚಿವ ರಾಜಣ್ಣ ಕಂಪ್ಲೆಂಟ್ ಕೊಟ್ಟಿದ್ದಾರೆ. ವಿಚಾರಣೆ ಬಳಿಕ ಸತ್ಯ ಆಚೆ ಬರುತ್ತದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.‘

ನಮ್ಮೂರಿಗೆ ನಮ್ಮ ಶಾಸಕ''  ಅಭಿಯಾನದ ಕಾರ್ಯಕ್ರಮದಡಿ ಶುಕ್ರವಾರ ತಾಲೂಕಿನ ಬೊಡಿನಾರೇನಹಳ್ಳಿ, ದಿನಹಳ್ಳಿ, ಮುದ್ದಲಹಳ್ಳಿ ಮಾದನಾಯಕನಹಳ್ಳಿ ಈ ಗ್ರಾಮಗಳಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸರ್ಕಾರಕ್ಕೆ ಮುಜುಗರ ಇಲ್ಲ

ಹನಿಟ್ರ್ಯಾಪ್ ವಿಚಾರದಲ್ಲಿ ಸರ್ಕಾರಕ್ಕೂ ಹಾಗೂ ಜನತೆಗೆ ಯಾವುದೇ ಮುಜುಗರ ಇಲ್ಲ. ಈ ವಿಚಾರ ಕೇವಲ ರಸ್ತೆಬದಿಯ ಟೀ ಅಂಗಡಿಗಳಲ್ಲಿ ಹಾಗು ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗುತ್ತಿದೆ ಎಂದರು.

ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ವಿಚಾರವಾಗಿ ಮಾತನಾಡಿ, ವಿಜಯೇಂದ್ರ ನನ್ನನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ ಅನಿಸುತ್ತೆ. ಈ ವಿಚಾರದ ವಿಜಯೇಂದ್ರ ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ನಾನೇ ಹೇಳ್ತೀನಿ ಆ ಪ್ಲೇಸ್‌ನಲ್ಲಿ ಇದ್ದಿದ್ರೆ ಹತ್ತು ನಿಮಿಷದಲ್ಲಿ ಯತ್ನಾಳ್‌ರನ್ನು ಕಿತ್ತಾಕ್ತಿದ್ದೆ. ಆದರೆ ವಿಜಯೇಂದ್ರ ಹತ್ತು ದಿನದಲ್ಲಿ ಕಿತ್ತಾಕಿದ್ದಾರೆ. ವಿಜಯೇಂದ್ರ ಅಣ್ಣ ನನಗೆ ಒಳ್ಳೆ ಫ್ರೆಂಡ್. ಒಳ್ಳೆಯದಾಗಲಿ ಅಣ್ಣಂಗೆ ಎಂದರು.

ಗುಜರಾತ್‌ನಲ್ಲಿ ಹಾಲಿನ ದರ ಎಷ್ಟು?

ನಂದಿನಿ ಹಾಲಿನ ದರ ಏರಿಕೆ ಹಿನ್ನೆಲೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಗುಜರಾತ್ ನಲ್ಲಿ ಒಂದು ಲೀಟರ್ ಹಾಲಿಗೆ ಎಷ್ಟು ಬೆಲೆ ಇದೀಯೋ ಹೇಳಿ ಅಷ್ಟೇ ಬೆಲೆ ನಾವು ಇಡ್ತೀವಿ‌, ಬಿಜೆಪಿಯವರಿಗೆ ಗುಜರಾತ್ ನಲ್ಲಿ ಹಾಲಿನ ದರ ಕಡಿಮೆ ಮಾಡೋದಕ್ಕೆ ಹೇಳಿ ನಾವು ಕಡಿಮೆ ಮಾಡ್ತೀವಿ. ಅಲ್ಲಿ ರೈತರಿಗೋಸ್ಕರ ಕೊಡಿ ಅಂತೀರಿ. ಇಲ್ಲಿ ನೋಡಿದರೆ ಏರಿಕೆ ಮಾಡಬೇಡಿ ಅಂತಾರೆ. ಬೆಲೆ ಏರಿಕೆ ದುಡ್ಡು ನಮಗೆ ಬರಲ್ಲ ರೈತರಿಗೆ ಹೋಗೋದು ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದಲಹಳ್ಳಿ, ದಿನ್ನಹಳ್ಳಿ ಹಾಗೂ ಮಾದನಾಯಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಸ್ಸಿನ ಸಾರಿಗೆ ವ್ಯವಸ್ಥೆ, ರಸ್ತೆ, ಚರಂಡಿ, ನೈರ್ಮಲ್ಯ, ನಿವೇಶನರಹಿತರಿಗೆ ನಿವೇಶನ,ವಸತಿ ರಹಿತರಿಗೆ ವಸತಿ, ಜಮೀನುಗಳ ಪೋಡಿ,ಸರ್ವೆ, ಸ್ಮಶಾನ,ವಿಧವಾ ವೇತನ,ಪಡಿತರ, ಸೇರಿದಂತೆ ವಿವಿಧ ಸಮಸ್ಯೆಗಳ ಈಡೇರಿಸಿ ಕೊಡುವ ಬಗ್ಗೆ ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಅವಲತ್ತುಕೊಂಡ ಸಮಸ್ಯೆಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಅವರು ಅಧಿಕಾರಿಗಳಿಗೆ ಈ ಬಗ್ಗೆ ನಿಗಾ ಇರಿಸಿ ಪರಿಹರಿಸುವಂತೆ ಸೂಚಿಸಿದರು.

ಗ್ರಾಮದ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸಲು ಶಾಸಕ ಪ್ರದೀಪ್ ಈಶ್ವರ್ ಗ್ರಾಮಗಳ ಹಲವರ ಮುಖಂಡರ ಸಲಹೆ ಸೂಚನೆಗಳನ್ನು ಪಡೆದರು. ಈ ವೇಳೆ ತಾಲೂಕು ತಹಶೀಲ್ದಾರ್ ಅನಿಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ,ಎಡಿಎಲ್ಆರ್ ವಿವೇಕ್ ಮಹದೇವ್, ಪಿಡಿಓ ಮದ್ದಿರೆಡ್ಡಿ, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಲಕ್ಷ್ಮೀಪತಿ, ಅರವಿಂದ್, ಮೋಹನ್ ರೆಡ್ಡಿ, ಎಸ್.ಪಿ.ಶ್ರೀನಿವಾಸ್,ಮಧು, ರಾಜಣ್ಣ, ಜಿ.ಉಮೇಶ್, ಶಂಕರ, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share this article