- 16 ಅಂಕ ಗಳಿಸಿದ ಹೊಸದುರ್ಗದ ಜಿಎಫ್‌ಸಿ ಕಾಲೇಜಿಗೆ ದ್ವಿತೀಯ ಸ್ಥಾನ
- - -ಹೊನ್ನಾಳಿ: ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟದಲ್ಲಿ ಹೊನ್ನಾಳಿಯ ಎಸ್‌ಎಂಎಸ್‌ಎಫ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಕಾರ್ಯದರ್ಶಿ ಪ್ರಕಾಶ್ ಎಲ್. ನರಗಟ್ಟಿ ಹೇಳಿದರು.
ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಹೊನ್ನಾಳಿಯ ಎಸ್‌ಎಂಎಸ್‌ಎಫ್ ಕಾಲೇಜು ಹೊನ್ನಾಳಿಯ ಎಸ್‌ಎಂಎಸ್‌ಎಫ್ ಕಾಲೇಜು ಕ್ರೀಡಾಕೂಟದಲ್ಲಿ ಒಟ್ಟು 29 ಅಂಕ ಪಡೆದು ಚಾಂಪಿಯನ್ ಪಟ್ಟ ಪಡೆದರೆ, ಹೊಸದುರ್ಗದ ಜಿಎಫ್‌ಸಿ ಕಾಲೇಜು 16 ಅಂಕ ಗಳಿಸಿ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದೆ ಎಂದರು.ವಿಜೇತರ ವಿವರ:
ಖೋ ಖೋ: ಜಿಎಫ್‌ಜಿಸಿ ಹೊಳಲ್ಕೆರೆ ಪ್ರಥಮ, ಹೊನ್ನಾಳಿ ದ್ವಿತೀಯ, ಎಸ್‌ಜಿಆರ್‌ಕೆ ಹರಿಹರ ತೃತೀಯ.ಬಾಲ್ ಬ್ಯಾಡ್ಮಿಂಟನ್: ಭರಮಸಾಗರದ ಜಿಎಫ್‌ಜಿಸಿ ಪ್ರಥಮ, ಎಸ್‌ಎಂಎಸ್‌ಎಫ್ ಕಾಲೇಜು ದ್ವಿತೀಯ ಹಾಗೂ ಹೊಸದುರ್ಗದ ಜಿಎಫ್‌ಜಿಸಿ ಕಾಲೇಜು ತೃತೀಯ.
ವಾಲಿಬಾಲ್: ಹೊಸದುರ್ಗದ ಜಿಎಫ್‌ಜಿಸಿ ಕಾಲೇಜು ಪ್ರಥಮ, ಜಿಎಫ್‌ಜಿಸಿ ಹರಿಹರ ದ್ವಿತೀಯ, ಜಿಎಫ್‌ಜಿಸಿ ಹೊಳಲ್ಕೆರೆ ತೃತೀಯ.ಕಬಡ್ಡಿ: ಚಿತ್ರದುರ್ಗದ ಜಿ.ಎಸ್. ಕಾಲೇಜು ಪ್ರಥಮ, ಹೊನ್ನಾಳಿ ಎಸ್‌ಎಂಎಸ್‌ಎಫ್ ಕಾಲೇಜು ದ್ವಿತೀಯ, ದಾವಣಗೆರೆ ತೃತೀಯ.
ಥ್ರೋಬಾಲ್: ಹೊಸದುರ್ಗದ ಜಿಎಫ್‌ಜಿಸಿ ಕಾಲೇಜು ಪ್ರಥಮ ಸ್ಥಾನ, ಜಿಎಫ್‌ಜಿಸಿ ದಾವಣಗೆರೆ ದ್ವಿತೀಯ, ಬಸವಾಪಟ್ಟಣದ ಕಾಲೇಜು ತೃತೀಯ.ಟೆನಿಕಾಯ್ಟ್- ಹೊನ್ನಾಳಿ ಎಸ್‌ಎಂಎಸ್‌ಎಫ್ ಕಾಲೇಜು ಪ್ರಥಮ, ಎಸ್‌ಬಿಸಿಡಬ್ಲ್ಯೂಸಿ ದಾವಣಗೆರೆ ದ್ವಿತೀಯ ಹಾಗೂ ಬಿಸಿಪಿಇ ದಾವಣಗೆರೆ ತೃತೀಯ ಸ್ಥಾನ ಪಡೆದುಕೊಂಡಿವೆ ಎಂದರು.
ಎಸ್‌ಎಂಎಸ್‌ಎಫ್ ಕಾಲೇಜಿನ ಪ್ರಾಚಾರ್ಯ ಪ್ರವೀಣ್ ದೊಡ್ಡಗೌಡ, ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ದಾವಣಗೆರೆ ವಿ.ವಿ.ಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಅಧ್ಯಕ್ಷ ಶಂಕ್ರಪ್ಪ, ಚಿತ್ರದುರ್ಗದ ರಾಘವೇಂದ್ರ, ದೈಹಿಕ ಶಿಕ್ಷಣ ನಿರ್ದೇಶಕರಾದ ರೇಖಾ, ನಾಗೇಶಪ್ಪ, ಸಿದ್ದೇಶ್ ರೆಡ್ಡಿ, ನಾಗೇಶಪ್ಪ, ಹೊಳಲ್ಕೆರೆಯ ಕರಿಸಿದ್ದಪ್ಪ ಒಡೆಯರ್, ಉಪನ್ಯಾಸಕ ಕೆ.ನಾಗೇಶ್ ಉಪಸ್ಥಿತರಿದ್ದರು.- - -
-15ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿಯಲ್ಲಿ ನಡೆದ ದಾವಣಗೆರೆ ವಿ.ವಿ.ಯ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟದಲ್ಲಿ ಹೊನ್ನಾಳಿ ಎಸ್‌ಎಂಎಸ್‌ಎಫ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ವಿಜೇತರಿಗೆ ಪ್ರಾಂಶುಪಾಲರು, ಉಪನ್ಯಾಸಕರು ಅಭಿನಂದಿಸಿದರು.