ದಾಬಸ್‍ಪೇಟೆ: ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಏ.26ರಿಂದ ಏ.30ರವರೆಗೆ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಟಕೋತ್ಸವ, ಮಹದೇಶ್ವರನ ಪರಾವು, ಕರುಗಲ್ಲಮ್ಮ ದೇವಿಗೆ ಪೂಜೆ, ಬಸವೇಶ್ವರ, ಆಂಜನೇಯ ದೇವರಿಗೆ ವಿಶೇಷ ಪೂಜೆ ಆರತಿ ಏರ್ಪಡಿಸಲಾಗಿದೆ.
ಏ.28ರಂದು ಬೆಳಿಗ್ಗೆ 6 ಗಂಟೆಯಿಂದಲೇ ಬಸವೇಶ್ವರ ದೇವರಿಗೆ ಅಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಬಸವೇಶ್ವರ ದೇವರನ್ನು ಅಕ್ಕಿಪೂಜೆಯಿಂದ ಅಲಂಕರಿಸಿ ಬೆಳಿಗ್ಗೆ 9 ಗಂಟೆಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಮಧ್ಯಾಹ್ನ 1 ಗಂಟೆಗೆ ಮಹದೇಶ್ವರನ ಪರಾವು ನಡೆಯಲಿದೆ. ರಾತ್ರಿ 7 ಗಂಟೆಗೆ ಬಸವೇಶ್ವರ ಹಾಗೂ ಆಂಜನೇಯ ದೇವರಿಗೆ ಆರತಿ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.
ಏ.29ರಂದು ಬೆಳಿಗ್ಗೆ 10 ಗಂಟೆಗೆ ಕರುಗಲ್ಲಮ್ಮ ದೇವಿಗೆ ಪೂಜೆ ನಡೆಯಲಿದ್ದು, ಏ.30ರಂದು ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿ ಆಚರಿಸಲಾಗುತ್ತದೆ.