ನವಲಗುಂದ:
ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದಕ್ಕೆ ಏಳು ತಿಂಗಳು ಗರ್ಭಿಣಿಯಾಗಿದ್ದ ಮಾನ್ಯಾ ಪಾಟೀಲಳನ್ನು ಆಕೆಯ ತಂದೆಯೇ ಹತ್ಯೆ ಮಾಡಿದ್ದಾರೆ. ಈ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ತ್ವರಿತ ನ್ಯಾಯ ಒದಗಿಸಲು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು. ಉದಾಸೀನ ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ದ್ಯಾಮಣ್ಣ ಒನಕುದರಿ, ಕುಮಾರ ಮಾದರ, ಶಿವು ಪೂಜಾರ, ಪುಂಡಲಿಕ ಛಲವಾದಿ, ರಾಜು ದೊಡಮನಿ, ಫಕೀರಪ್ಪ ಜಕ್ಕಪ್ಪನವರ, ಹಣಮಂತಪ್ಪ ಹುಳಕನ್ನವರ, ರವಿ ಬೆಂಡಿಗೇರಿ, ಯಲ್ಲಪ್ಪ ದುಂದೂರ, ಮೈಲಾರಪ್ಪ ವೈದ್ಯ, ಮಲ್ಲಿಕಾರ್ಜುನ ಮುಂದಿನಮನಿ, ನಿಂಗಪ್ಪ ಕೆಳಗೇರಿ, ಕೃಷ್ಣ ಮಾದರ, ಶಿವಾನಂದ ಛಲವಾದಿ, ಸಂಗಮೇಶ ದೊಡಮನಿ, ಈರಣ್ಣ ಸಿಡಗಂಟಿ, ಮಂಜುಳಾ ಹೊಸಮನಿ, ಶಿವಗಂಗಾ ಭೋವಿ, ದಿಲೀಪ ರತ್ನಾಕರ, ಉಮೇಶ ನವಲಗುಂದ ಸೇರಿ ನೂರಾರು ಪ್ರತಿಭಟನಾಕಾರರು ಇದ್ದರು.