ಕನ್ನಡಪ್ರಭ ವಾರ್ತೆ ವಿಜಯಪುರ ನಾನು ಕಳೆದ ೩೦ ವರ್ಷಗಳಿಂದ ನಿಮ್ಮ ಜೊತೆಯಲ್ಲಿದ್ದು, ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ. ಬಡವರಿಗೆ, ಹಿಂದುಳಿದವರಿಗೆ ಸರ್ಕಾರದ ಸೌಲಭ್ಯಗಳು ದೊರಕುವಂತೆ ಮಾಡಿದ್ದೇನೆ. ವೈಯಕ್ತಿಕವಾಗಿಯೂ ನನ್ನ ಕೈಲಾದಷ್ಟು ಜನರ ಸೇವೆ ಮಾಡಿದ್ದೇನೆ ಎಂದು ಮೇಯರ ಮಹೇಜನಬಿ ಹೋರ್ತಿ ಅವರ ಪತಿ ಅಬ್ದುಲರಜಾಕ ಹೋರ್ತಿ ಹೇಳಿದರು.
ನಗರದ ಶಾಸ್ತ್ರೀ ನಗರ ಸ್ಲಂ ಅಭಿವೃದ್ಧಿ ಸಮಿತಿ ವತಿಯಿಂದ ವಿಜಯಪುರ ನಗರದ ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಮೇಯರ ಹಾಗೂ ಉಪಮೇಯರ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನನ್ನ ಪತ್ನಿ ಮೇಯರ್ ಆಗಿ ಆಯ್ಕೆಯಾಗಿರುವುದರಿಂದ ಜನರ ಸೇವೆಯ ಹೆಚ್ಚಿನ ಜವಾಬ್ದಾರಿ ಸಿಕ್ಕಿದೆ. ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಯಾವುದೇ ಸಮಸ್ಯೆಗಳಿರಲಿ ಧೈರ್ಯವಾಗಿ ಬಂದು ನಮ್ಮ ಬಳಿಗೆ ಮಾಹಿತಿ ನೀಡಿ ತಕ್ಷಣ ಸ್ಪಂದಿಸುವೆ. ನಗರದಲ್ಲಿ ಬಾಕಿ ಉಳಿದಿರುವ ಮನೆಗಳ ಹಕ್ಕು ಪತ್ರ ವಿತರಣೆ ಹಾಗೂ ಹೊಸ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.ಉಪಮೇಯರ್ ಎಸ್. ದಿನೇಶ ಮಾತನಾಡಿ, ನಗರದಲ್ಲಿ ಬಾಕಿ ಉಳಿದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ನಿಮ್ಮೇಲ್ಲರ ಆಶೀರ್ವಾದದಿಂದ ಸೇವೆ ಮಾಡುವ ಭಾಗ್ಯ ದೊರೆತಿರುವುದು ನಮ್ಮ ಸೌಭಾಗ್ಯ. ನಾವು ಹಾಗೂ ಪಾಲಿಕೆ ಎಲ್ಲ ಸದಸ್ಯರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದರು.ಈ ವೇಳೆ ವಾರ್ಡ ನಂ.೩೩ ಸದಸ್ಯೆ ಆರತಿ ಶಹಾಪುರ, ವಾರ್ಡ ನಂ.೨೪ ಸದಸ್ಯ ಮಹ್ಮದ ರಫಿಕ ಕಾಣೆ, ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ ಟಿಯೋಲ ಮಚಾದು, ಸ್ಲಂ ಅಭಿವೃದ್ಧಿ ಸಮಿತಿ ಸಂಚಾಲಕ ಅಕ್ರಂ ಮಾಶ್ಯಾಳಕರ, ಒಕ್ಕೂಟದ ಅಧ್ಯಕ್ಷ ಡಾ.ಡಣಕಶಿರೂರ, ರೇಣುಕಾ ತೊರವಿ, ಡಾ.ರಾಜೇಶ್ವರಿ ಡಣಕಶಿರುರರಿಗೆ ಸತ್ಕರಿಸಲಾಯಿತು.ಸ್ಲಂ ಮುಖಂಡ ಅಂಬು ಖರಾತ, ದಸ್ತಗೀರ ಉಕ್ಕಲಿ, ಸುಜಾತಾ ಹುಣಶ್ಯಾಳ, ಮೌಲಾಲಿ ಮುಲ್ಲಾ, ಮೈಬುಬ ಕೊಡೆಕಲ್, ರಿಯಾಜ್ ತಾಸೆವಾಲೆ, ಮೈಬೂಬ ಶೇಖ, ಮೈರುನ ಕೊಡೆಕಲ್, ಕೌಸರ ಬಾನು ತೊರವಿ, ನಸಿಮಾ ಮುಲ್ಲಾ, ಬಿಬಿಜಾನ ವಾಲಿಕಾರ, ರೇವಮ್ಮಾ ಕೊಸ್ಠಿ, ಶಾರದಾ ಕರಜಗಿ, ರೂಕ್ಮೋದ್ದಿನ ತೂರವಿ, ದಸ್ತಗಿರ ಉಕ್ಕಲಿ, ಅಂಬಿಕಾ ಕಾಂಬಳೆ ಮುಂತಾದವರು ಇದ್ದರು.