ಸೊರಬ: ತಮಿಳನಾಡಿನಲ್ಲಿ ನಡೆದ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ವತಿಯಿಂದ ಸಮಾಜಸೇವೆ ಮತ್ತು ಆಯುರ್ವೇದ ಔಷಧ ಸೇವೆಗಾಗಿ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಸೊರಬ ತಾಲೂಕಿನ ಯಲಿವಾಳ ಗ್ರಾಮದ ನಾಟಿ ವೈದ್ಯ ಸೋಮಶೇಖರಯ್ಯ ಸುತ್ತೂರು ಮಠ ಅವರಿಗೆ ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಚೆನ್ನೈನ ಹೊಸೂರು ಪಟ್ಟಣದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.