ಗ್ರಾಮಾಂತರಕ್ಕೆಮಕ್ಕಳನ್ನು ಓದಿಗೆ ಪ್ರೇರಣೆ ನೀಡುವ ಕೆಲಸ ಪೋಷಕ ವರ್ಗ ಮಾಡಿದಾಗ ಮಕ್ಕಳು ಶಿಕ್ಷಣದಲ್ಲಿ ಯಶಸ್ವಿಯಾಗಲು ಸಾಧ್ಯ

KannadaprabhaNewsNetwork |  
Published : Mar 27, 2026, 01:15 AM IST
66 | Kannada Prabha

ಸಾರಾಂಶ

ಯಾವುದೇ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಪಾಸು-ಪೇಲು ಲೆಕ್ಕಾಚಾರ ಹಾಕದೇ ಎದುರಿಸಲು ಮುಂದಾಗ ಬೇಕು ಇದರಿಂದ ಎಂತದ್ದೆ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಮಕ್ಕಳನ್ನು ಓದಿಗೆ ಪ್ರೇರಣೆ ನೀಡುವ ಕೆಲಸ ಪೋಷಕ ವರ್ಗ ಮಾಡಿದಾಗ ಮಕ್ಕಳು ಶಿಕ್ಷಣದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕೆ.ಆರ್. ನಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪತ್ತಿನ ಸಹಕಾರ ಸಂಘದ ಗೌರವ ಅಧ್ಯಕ್ಷ ಮಂಜೇಗೌಡ ಹೇಳಿದರುಸಾಲಿಗ್ರಾಮ ತಾಲೂಕಿನ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ 2025-26 ನೇ ಸಾಲಿನಲ್ಲಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು ಯಾವುದೇ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಪಾಸು-ಪೇಲು ಲೆಕ್ಕಾಚಾರ ಹಾಕದೇ ಎದುರಿಸಲು ಮುಂದಾಗ ಬೇಕು ಇದರಿಂದ ಎಂತದ್ದೆ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರುನವೋದಯ ಪರೀಕ್ಷೆಯಲ್ಲಿ ಉತ್ತಿರ್ಣವಾಗುವುದು ನಿಜಕ್ಕು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು ಅಗಲಿದ್ದು ಈ ಪರೀಕ್ಷೆಯಲ್ಲಿ ಉತ್ತಿರ್ಣರಾದ ಪುಣ್ಯಶ್ರೀ, ಲೋಕರಂಜನ್, ವಿ.ದಿಶಾ ಅವರ ಮುಂದಿನ ಭವಿಷ್ಯದ ಶಿಕ್ಷಣ ಯಶಸ್ವಿಯಾಗಲಿ ಗ್ರಾಮಕ್ಕೆ ಮತ್ತು ಪೋಷಕರಿಗೆ ಗೌರವ ತರುವಂತಾಗಲಿ ಎಂದು ಹಾರೈಸಿದ್ದರಲ್ಲದೆ, ಈ ಶಾಲೆಯಲ್ಲಿ ಎಲ್.ಕೆ.ಜೆ, ಯು.ಕೆ.ಜಿ ಮತ್ತು ಒಂದನೇ ತರಗತಿಯ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಶಿಕ್ಷಕರಾದ ಅನ್ನಪೂರ್ಣ, ಶ್ವೇತಾ, ಪೂಜಾ , ಅಭ್ರೀನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಸಿಬ್ಬಂದಿ ರತ್ನ ಇದ್ದರು.---------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರೇಟರ್‌ ಬೆಂಗಳೂರು ಪಾಲಿಕೆಯ ಐದೂ ನಗರ ಪಾಲಿಕೆಗಳ ಆಯವ್ಯಯ ಮಂಡನೆ
ರಸ್ತೆ, ಮೂಲಸೌಕರ್‍ಯಕ್ಕೆ ಭರ್ಜರಿ ಉತ್ತರ - ಪಶ್ಚಿಮ ಪಾಲಿಕೆಯದ್ದೇ ದೊಡ್ಡ ಮೊತ್ತದ ಬಜೆಟ್