- ಡಾ.ಶ್ರೀನಿವಾಸ್ ಅಭಿಮತ । ಬಾಪೂಜಿ ಇನ್ಸ್ಟಿಟ್ಯೂಟ್‌ನಲ್ಲಿ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಸಮಾಜ ವೈದ್ಯರನ್ನು ದೇವರ ಸರಿಸಮಾನವಾಗಿ ಗೌರವಿಸುತ್ತದೆ. ಆ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡುವ ಮೂಲಕ ವೈದ್ಯರು ರೋಗಿಗಳ ಬಗ್ಗೆ ಬೇಧಭಾವಕ್ಕೆ ಆಸ್ಪವಿಲ್ಲದೆ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜದ ಗೌರವಕ್ಕೆ ಪ್ರಾಪ್ತರಾಗಲು ಸಾಧ್ಯ ಎಂದು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಬುಧವಾರ ಇಲ್ಲಿನ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನಡೆದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪಶ್ಚಿಮ ಬಂಗಾಳದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿದ್ದ ಡಾ.ಬಿ.ಸಿ.ರಾಯ್ ಜನ್ಮದಿನಾಚರಣೆ ಜ್ಞಾಪಕಾರ್ಥವಾಗಿ ವೈದ್ಯ ದಿನಾಚರಣೆ ಎಲ್ಲೆಡೆ ಆಚರಿಸಲಾಗುತ್ತದೆ ಎಂದ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಬಿ.ಸಿ.ರಾಯ್ ಎಂದಿಗೂ ಮುಖ್ಯಮಂತ್ರಿ ಎಂಬ ಅಹಂಕಾರವಿಲ್ಲದೆ ಬಿಡುವಿನ ಸಮಯದಲ್ಲಿ ರೋಗಿಗಳ ಆರೈಕೆ ಮೂಲಕ ಪ್ರತಿಷ್ಠಿತ ವೈದ್ಯ ವೃತ್ತಿಯ ಘನತೆ ಗೌರವ ಹೆಚ್ಚಿಸಿದ್ದಾರೆ. ಸಮಸ್ತ ವೈದ್ಯರಿಗೆ ಅವರ ವ್ಯಕ್ತಿತ್ವ ಮಾದರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಮಾತನಾಡಿ, ಪ್ರತಿ ವೈದ್ಯರಿಗೂ ಸಮರ್ಪಣೆ, ಪರಿಣಿತಿ ಹಾಗೂ ಸಹಾನುಭೂತಿಯ ಗುಣ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಬಿ.ಪಾಪಯ್ಯ ಮಾತನಾಡಿ, 2011-12 ರಲ್ಲಿ ಆರಂಭವಾದ ಸಂಸ್ಥೆ ಮೂಲಕ ಈಗಾಗಲೇ ಹಲವರು ಸಮಾಜಕ್ಕೆ ಕೊಡುಗೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಜೀವ ವ್ಯಕ್ತಿಗಳ ಜತೆ ವ್ಯವಹರಿಸುವ ವಿದ್ಯಾರ್ಥಿಗಳು ತಾಳ್ಮೆಯಿಂದ ರೋಗಿಗಳಿಗೆ ಧೈರ್ಯ ತುಂಬಿದಾಗ ಬಹುಪಾಲು ಕಾಯಿಲೆ ವಾಸಿಯಾಗಲಿದೆ ಎಂಬ ಸತ್ಯ ಅರಿತು ಸೇವೆ ಸಲ್ಲಿಸುವಂತೆ ಕಿವಿಮಾತು ಹೇಳಿದರು.
ಸೃಷ್ಟಿ ಸಂಗಡಿಗರು ಪ್ರಾರ್ಥಿಸಿ, ನೇಹಾ ಸ್ವಾಗತಿಸಿ, ತನ್ಸೀಲ ನಿರೂಪಿಸಿ, ನೀತು ವಂದಿಸಿದರು.
ಶಿವಮೊಗ್ಗ: ಆರೋಗ್ಯ ಸದೃಢವಾಗಿರುವಂತೆ ಮಾರ್ಗದರ್ಶನ ನೀಡುವ ಜತೆಯಲ್ಲಿ ಜೀವ ಉಳಿಸುವ ಶ್ರೇಷ್ಠ ಕಾರ್ಯ ನಡೆಸುವ ವೃತ್ತಿ ವೈದ್ಯರದ್ದಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಕೆ.ಸುಂದರ್ ರಾಮ್ ಹೇಳಿದರು.
2024-25ರಲ್ಲಿ ಹೆಚ್ಚಿನ ಸೇವಾ ಕಾರ್ಯ ನಡೆಸುವ ಉದ್ದೇಶವಿದೆ. ಪ್ರಪಂಚಾದ್ಯತ ರೋಟರಿ ಸೇವೆ ನಡೆಸುತ್ತಿದೆ. ಜನೋಪಯೋಗಿ ಕಾರ್ಯಗಳನ್ನು ನಡೆಸಲಾಗುವುದು ಎಂದರು.2024-25ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ ಮಾತನಾಡಿ, ರೋಟರಿಯ ಆಶಯದಂತೆ ಸರ್ವರಿಗೂ ಪ್ರಾಮಾಣಿಕ ಸೇವೆಯ ಪ್ರಯತ್ನವನ್ನು ಮಾಡುವ ಉದ್ದೇಶದಿಂದ ಪ್ರಾರಂಭಿಸಿ ಈವರೆಗೂ ನಡೆಸಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.ಸಂಸ್ಥೆಯ ಎಲ್ಲ ಸದಸ್ಯರು ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ನಗರದ ಖ್ಯಾತ ವೈದ್ಯ ಡಾ.ಚಂದುಶ್ರೀ ಅವರನ್ನು ರೋಟರಿ ಮಾಜಿ ಗವರ್ನರ್ ಎ.ಎಸ್.ಚಂದ್ರಶೇಖರ ಸನ್ಮಾನಿಸಿದರು. ಗೈನಾಕಾಲಜಿಸ್ಟ್ ಚಂದ್ರುಶ್ರೀ ಅವರು ಉಚಿತ ವೈದ್ಯಕೀಯ ತಪಾಸಣೆ ಸೇವಾಕಾರ್ಯಕ್ಕೆ ಚಾಲನೆ ನೀಡಿದರು.