ಠಾಣೆಯಲ್ಲಿ ರೌಡಿಶೀಟರ್‌ಗಳಿಗೆ ಸನ್ಮಾನ: ವಿವಾದಕ್ಕೀಡಾದ ಕಾರ್ಯಕ್ರಮ

KannadaprabhaNewsNetwork |  
Published : Nov 27, 2024, 01:01 AM IST
26ಕೆಆರ್ ಎಂಎನ್ 5.ಜೆಪಿಜಿರಾಮನಗರ ಪುರ ಪೊಲೀಸ್ ಠಾಣೆಯಲ್ಲಿ  ಅಧಿಕಾರಿಗಳು ಮತ್ತು ಸಿಬ್ಬಂದಿ ರೌಡಿ ಶೀಟರ್ ಗಳನ್ನು ಸನ್ಮಾನ ಮಾಡಿರುವುದು. | Kannada Prabha

ಸಾರಾಂಶ

ರಾಮನಗರ: ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ನೆರವೇರಿದ ಆಯುಧ ಪೂಜಾ ಕಾರ್ಯಕ್ರಮಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರೌಡಿಶೀಟರ್‌ಗಳನ್ನು ಆಹ್ವಾನಿಸಿದ್ದಲ್ಲದೆ, ಅವರನ್ನು ಸನ್ಮಾನಿಸಿ ಸಿಹಿ ಹಂಚಿರುವುದು ವಿವಾದಕ್ಕೆ ಕಾರಣವಾಗಿದೆ. ಪುರ ಠಾಣೆಯ ರೌಡಿಶೀಟರ್‌ಗಳ ಪಟ್ಟಿಯಲ್ಲಿರುವ ಅಂಜದ್, ಅಜ್ಮತ್ ಸೇರಿದಂತೆ ಹಲ ರೌಡಿಶೀಟರ್‌ಗಳನ್ನು ಸನ್ಮಾನಿಸಿರುವುದು ಸಾರ್ವಜನಿಕ ಟೀಕೆಗೂ ಗುರಿಯಾಗಿದೆ.

ಈ ರೌಡಿ ಶೀಟರ್‌ಗಳು ಯಾರು:

ರೌಡಿ ಶೀಟರ್‌ಗಳಾದ ಅಜ್ಮತ್ ರಾಮನಗರ ನಗರಸಭೆ ಹಾಲಿ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದವರು. ಇನ್ನು ಅಂಜದ್ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡವರು. ಇವರಿಬ್ಬರ ಹೆಸರು ಅದೇ ಠಾಣೆಯ ರೌಡಿಶೀಟರ್‌ಗಳ ಪಟ್ಟಿಯಲ್ಲಿದೆ. ಇವರಿಗೆ ಸದರಿ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಆಕಾಶ್ ಶಾಲು, ಹಾರ, ಪೇಟಾ ಹಾಕಿ ಸನ್ಮಾನಿಸಿದ್ದಾರೆ.

ರಾಜ್ಯಪಾಲರು - ಗೃಹಸಚಿವರಿಗೆ ದೂರು ಸಲ್ಲಿಕೆ :

ಠಾಣೆಯ ಆರಕ್ಷಕ ಉಪ ನಿರೀಕ್ಷಕ ಆಕಾಶ್ ಹಾಗೂ ಮುಖ್ಯ ಪೇದೆ ಶರತ್, ಪೇದೆಗಳಾದ ರೋಶನ್, ಮುನಿರಾಜು ನಾಯಕ್, ಪರಶುರಾಮ್ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಒಕ್ಕೂಟ ರಾಜ್ಯಪಾಲರು ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಕಾನೂನಾತ್ಮಕ ಹೋರಾಟ ಮುಂದುವರಿಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ.

ಕೋಟ್ ..............

ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‌ಗಳನ್ನು ಸನ್ಮಾನ ಮಾಡಿರುವುದು ಗಮನಕ್ಕೆ ಬಂದಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಿ ವಿಚಾರಣೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

- ಕಾರ್ತಿಕ್ ರೆಡ್ಡಿ, ಎಸ್ಪಿ, ರಾಮನಗರ

26ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ಪುರ ಠಾಣೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ರೌಡಿ ಶೀಟರ್ ಗಳನ್ನು ಸನ್ಮಾನಿಸಿರುವುದು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ