ಕನ್ನಡಪ್ರಭ ವಾರ್ತೆ ಬಾದಾಮಿ
ತಾಲೂಕಿನ ಮುತ್ತಲಗೇರಿ ಗ್ರಾಮದಲ್ಲಿ ಶ್ರೀ ನಾಯಕಪ್ಪಜ್ಜನವರ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣವು ಪ್ರತಿಯೊಬ್ಬರಿಗೂ ಬದುಕು ನೀಡುವ ಒಂದು ಚೌಕಟ್ಟು ನಿರ್ಮಿಸುವ ಸಾಧನವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ವಿದ್ಯಾರ್ಜನೆ ಮಾಡಬೇಕು. ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಸಲ್ಲಿಸುವ ವ್ಯಕ್ತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಊರಿನ ಗುರು ಹಿರಿಯರು ಹಾಗೂ ಗಣ್ಯಮಾನ್ಯರು ಭಾಗವಹಿಸಿ ಸನ್ಮಾನಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಕಳಸನ್ನವರ, ಮುದಿಯಪ್ಪ ಹೊಟ್ಟಿ, ಸಿದ್ದಯ್ಯ ಹಿರೇಮಠ, ಬೀರಪ್ಪ ಗೌಡರ, ಈಶ್ವರ ತೆಗ್ಗಿನಮನಿ, ಮಾಗುಂಡಪ್ಪ ಲಚಮನಾಯಕರ, ಫಕೀರಪ್ಪ ಪೂಜಾರ, ಕರಿಯಪ್ಪ ದುರ್ಗನವರ, ಈರಯ್ಯ ಕುರುವಿನಕೊಪ್ಪ. ಪ್ರವೀಣ ನಾಯ್ಕರ, ಈಶ್ವರ್ ಪೂಜಾರ, ಮಂಜುನಾಥ ಮುಸಾಗುದ್ದಿ, ಯಲ್ಲಪ್ಪ ಹಲಕೂರ್ಕಿ ಸೇರಿದಂತೆ ವಿದ್ಯಾರ್ಥಿಗಳು, ಹಾಗೂ ಎಲ್ಲಾ ಸಮಾಜಗಳ ಗುರುಹಿರಿಯರು ಇದ್ದರು. ಕಾರ್ಯಕ್ರಮ ಸಿದ್ದಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.