ಹುಟ್ಟೂರಿನ ಗೌರವದಿಂದ ಮತ್ತಷ್ಟು ಸಾಧಕರ ಸೃಷ್ಠಿ ಸಾಧ್ಯ

KannadaprabhaNewsNetwork |  
Published : Jul 07, 2026, 01:30 AM IST
 6 ಟಿವಿಕೆ 1 – ತುರುವೇಕೆರೆ ತಾಲೂಕು ಕೆ.ಬೇವಿನಹಳ್ಳಿಯಲ್ಲಿ ಎರಡು ಚಿನ್ನದ ಪದಕ ಗಳಿಸಿದ ಡಾ.ಕವನರವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ತಮ್ಮ ಗ್ರಾಮದಲ್ಲಿ ಸಾಧನೆ ಮಾಡಿರುವರರನ್ನು ಬಹಳ ಆತ್ಮೀಯತೆಯಿಂದ ಗೌರವಿಸಿ ಅಭಿನಂದಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ಗ್ರಾಮದಿಂದ ಮತ್ತಷ್ಟು ಸಾಧಕರನ್ನು ಹೊರತರಲು ಸಹಕಾರಿಯಾಗುತ್ತದೆ ಎಂದು ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಮತ್ತು ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಮ್ಮ ಗ್ರಾಮದಲ್ಲಿ ಸಾಧನೆ ಮಾಡಿರುವರರನ್ನು ಬಹಳ ಆತ್ಮೀಯತೆಯಿಂದ ಗೌರವಿಸಿ ಅಭಿನಂದಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ಗ್ರಾಮದಿಂದ ಮತ್ತಷ್ಟು ಸಾಧಕರನ್ನು ಹೊರತರಲು ಸಹಕಾರಿಯಾಗುತ್ತದೆ ಎಂದು ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಮತ್ತು ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು.

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಲ್ಲಿ ಎರಡು ಚಿನ್ನದ ಪದಕಗಳನ್ನು ಸಂಪಾದಿಸಿದ್ದ ತಾಲೂಕಿನ ಕೆ. ಬೇವಿನಹಳ್ಳಿಯ ಡಾ.ಕವನಾರನ್ನು ಕೆ. ಬೇವಿನಹಳ್ಳಿ ಗ್ರಾಮದ ಜನತೆ ತಮ್ಮ ಗ್ರಾಮದೇವತೆ ದೇವಾಲಯದ ಬಳಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಗ್ರಾಮಾಂತರ ಪ್ರದೇಶದಿಂದ ಬಂದವರಾದರೂ ಸಹ ರಾಜ್ಯವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿರುವ ಡಾ. ಕವನಾ ರವರ ಬಗ್ಗೆ ತಾಲೂಕೆ ಹೆಮ್ಮೆ ಪಡುವಂತಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕವನಾ ಹುಸಿ ಮಾಡಿದ್ದಾರೆ. ಆರಂಭದಿಂದಲೇ ಪೋಷಕರು ಮತ್ತು ಶಿಕ್ಷಕರ ಬುದ್ದಿಮಾತನ್ನು ಕೇಳಿದರೆ ಯಾರೂ ದಾರಿ ತಪ್ಪುವುದಿಲ್ಲ. ಪುಟ್ಟ ಗ್ರಾಮದಲ್ಲಿ ಜನಿಸಿದ ಕವನ ಇಂದು ಡಾ.ಕವನಾರಾಗಿ ಹೊರ ಹೊಮ್ಮಿರುವುದು ಸಾಧನೆಯೇ ಸರಿ. ಇದರೊಂದಿಗೆ ಗ್ರಾಮಸ್ಥರು ಅವರನ್ನು ಅಭಿನಂದಿಸುತ್ತಿರುವ ಪರಿ ಇತರೆಯವರಿಗೆ ಮಾದರಿಯಾಗಿದೆ. ಈ ಅಭಿನಂದನಾ ಸಮಾರಂಭಕ್ಕೆ ಗ್ರಾಮದ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಹಾಜರಿರುವುದು ಇತರೆ ಮಕ್ಕಳಿಗೆ ಪ್ರೇರಣೆ ನೀಡದಂತಾಗುತ್ತದೆ ಎಂದ ಅವರು, ಕೈಗಡಿಯಾರವನ್ನು ಕೊಡುಗೆಯಾಗಿ ನೀಡಿ ಅಭಿನಂದಿಸಿದರು.

ನಿವೃತ್ತ ಉಪನ್ಯಾಸಕ ಎನ್.ಪಿ.ನಾಗರಾಜ್ ಮಾತನಾಡಿ, ಕವನ ಮಾಡಿರುವ ಸಾಧನೆಯನ್ನು ಗುರುತಿಸಿ ಗ್ರಾಮಸ್ಥರು ನೀಡಿರುವ ಅಭಿನಂದನೆ ಸ್ಮರಣೀಯ. ತಮಗೆ ದೇವರು ದಯಪಾಲಿಸಿರುವ ಆರೋಗ್ಯ ಕ್ಷೇತ್ರದ ಸಾಧನೆಗೆ ಬೆಲೆಕಟ್ಟಲಾಗದು. ಜನರ ನೋವು ನಲಿವುಗಳಿಗೆ ಸ್ಪಂದಿಸಿದರೆ ನೀವು ಓದಿದ್ದಕ್ಕೆ ಸಾರ್ಥಕವಾಗಲಿದೆ ಎಂದರು.

ಶರಣ ಸಾಹಿತ್ಯ ವೇದಿಕೆಯ ದಿಬ್ಬದಹಳ್ಳಿ ಶ್ಯಾಮಸುಂದರ್ ಮಾತನಾಡಿ, ಕದ್ದೊಯ್ಯಲು ಆಗದ್ದು ವಿದ್ಯೆ ಮಾತ್ರ. ಸಾಧನೆಗೆ ವೈಷಮ್ಯ ಇರಬಾರದು. ಜ್ಞಾನ ಸಂಪಾದನೆ ಕೇವಲ ದುಡಿಮೆಗೆ ಅಲ್ಲ. ಹೊಟ್ಟೆಪಾಡಿಗಾಗಿ ಅಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಜ್ಞಾನ ದಾಹಕ್ಕೆ ಮಿತಿಯೇ ಇಲ್ಲ. ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂದರು. ಡಾ.ಕವನ ಮಾತನಾಡಿ, ನಮ್ಮ ಗ್ರಾಮದ ಜನರು ನೀಡಿರುವ ಸನ್ಮಾನ ಮುಖ್ಯಮಂತ್ರಿಗಳು ನನಗೆ ಪ್ರಶಸ್ತಿ ಪ್ರದಾನ ಮಾಡಿದ ದಿನವನ್ನು ನೆನಪಿಗೆ ತರುತ್ತಿದೆ. ಈ ಸನ್ಮಾನ ಮುಖ್ಯಮಂತ್ರಿಗಳು ಮಾಡಿದ ಸನ್ಮಾನಕ್ಕೆ ಸರಿಸಮವಾಗಿದೆ. ಮಕ್ಕಳು ಆದಷ್ಟೂ ಮೊಬೈಲ್ ನಿಂದ ದೂರವಿದ್ದರೆ ಖಂಡಿತ ಸಾಧನೆ ಮಾಡಲು ಸಾಧ್ಯ. ಈಗ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣ ಎಂಬ ವೇದಿಕೆ ಬೇಕು, ಬೇಡಗಳ ಡಬ್ಬಿಯಾಗಿದೆ. ನಮಗೆ ಅಗತ್ಯವಿರುವ ಜ್ಞಾನ ತಿಳುವಳಿಕೆಗೆ ಬೇಕಾಗುವ ಮಾಹಿತಿಗಳನ್ನು ಮಾತ್ರ ಸ್ವೀಕರಿಸಬೇಕೆಂದರು. ಅಭಿನಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹಬುಕನಹಳ್ಳಿ ಶಿವಣ್ಣ, ಮಂಜುನಾಥ್, ಮೋಹನ್, ಗೋಪಾಲ್, ಬಿ.ಎನ್.ಕಾಂತರಾಜು, ಸುರೇಶ್, ಯೋಗೇಶ್, ಲೋಕೇಶ್ ಸೇರಿದಂತೆ ಹಲವರು ಇದ್ದರು. ಬಿ.ಕೆ. ಶಾನವಿ ಸ್ವಾಗತಿ, ನಿರೂಪಿಸಿದರು. ಸುರೇಶ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3000ಕ್ಕೂ ಅಧಿಕ ಪಿಂಚಣಿ ಕಾರ್ಡ್ ರದ್ದುಗೊಳಿಸಿ ವಂಚನೆ: ನವೀನ್
ರಾಷ್ಟ್ರದ ಹಿತದೃಷ್ಟಿಯಿಂದ ಎಸ್‌ಐಆರ್ ಅಭೂತಪೂರ್ವ ಕಾರ್ಯಕ್ರಮ