ಕನ್ನಡಪ್ರಭ ವಾರ್ತೆ ಸುರಪುರ
ನಗರದಲ್ಲಿ ಗರುಡಾದ್ರಿ ಕಲಾಮಂದಿರದಲ್ಲಿ ಸೋಮವಾರ ದಿ. ನರೇಶಕುಮಾರ ಸೇವಾ ಸಂಸ್ಥೆ ವತಿಯಿಂದ ಪರಾಕ್ರಮ ದಿವಸ ಹಾಗೂ 27ನೇ ಕಾರ್ಗಿಲ್ ವಿಜಯೋತ್ಸವದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ವೀರ ಯೋಧರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತ, ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಸಮಾಜದ ಬಗ್ಗೆ ಕಾಳಜಿ ಹೊಂದಿ ಇಂತಹ ದೇಶಪ್ರೇಮದ ಕಾರ್ಯಕ್ರಮ ಆಯೋಜಿಸಿರುವ ಸಚಿನಕುಮಾರ ನಾಯಕ ಹಾಗೂ ಅವರ ತಂಡದ ಕಾರ್ಯ ಶ್ಲಾಘನೀಯ. ಗಡಿಗೆ ತೆರಳಿ ಯುದ್ಧ ಮಾಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. ಆದರೆ, ದೇಶಪ್ರೇಮ ಬೆಳೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಒಂದು ರೀತಿಯ ದೇಶಸೇವೆಯಾಗಿದೆ ಎಂದರು.ಮುಖ್ಯ ಭಾಷಣಕಾರ ಹುಬ್ಬಳಿಯ ಚಿಂತಕ ಕಿರಣರಾಮ ಅವರು ಕಾರ್ಗಿಲ್ ಯುದ್ಧ ಹಾಗೂ ಸೈನಿಕರ ತ್ಯಾಗದ ಕುರಿತು ಮಾತನಾಡಿದರು. ನಂತರ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಯೋಧ ರುಕ್ಮಾಪುರದ ಮಲ್ಲೇಶ, ರಾಜನಕೋಳೂರು ಬಸನಗೌಡ, ಗೋಗಿ ಹನಮಂತ್ರಾಯ, ರಂಗಂಪೇಟೆ ನಾಗರಾಜ, ಗುಂಡುರಾವ್ ರಾಠೋಡ್, ರಾಮೋಜಿ ಚವ್ಹಾಣ, ರಂಗನಗೌಡ ಪಾಟೀಲ್, ದಿವಳಗುಡ್ಡ ಎಸ್.ಕೆ.ಮೈನುದ್ದೀನ್, ಲಿಂಗಸೂರ ವಿಶ್ವನಾಥ ನಾಯಕ, ಅಮೋಘ, ಸಿದ್ದಪ್ಪ, ಹೆಮನೂರು ಹಣಮಂತ್ರಾಯ, ವಿಶ್ವನಾಥ, ದೇವರಾಜ, ರೇವಪ್ಪ, ಗುರಣ್ಣ, ನಾಗರಾಜ, ಮಹಾದೇವಪ್ಪ, ವಿಶ್ವನಾಥ ನಾಯಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶೋಭಾಯಾತ್ರೆ: ಪರಾಕ್ರಮ ದಿವಸ ಹಾಗೂ 27ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶೋಭಾಯಾತ್ರೆ ನಡೆಯಿತು. ಯೋಧರ ಗೌರವ, ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮ ಘೋಷಗಳೊಂದಿಗೆ ಸಾಗಿದ ಶೋಭಾಯಾತ್ರೆ ಸಾರ್ವಜನಿಕರ ಗಮನ ಸೆಳೆಯಿತು. ದಿ.ನರೇಶಕುಮಾರ ಸೇವಾ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯಕ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಶಹಾಪುರದ ಕರಣ ಸುಬೇದಾರ, ಹಿರಿಯ ವಕೀಲ ಅರವಿಂದಕುಮಾರ, ಹಣಮಂತ್ರಾಯ ಪಾಟೀಲ, ಹಿರಿಯ ಸಾಹಿತಿ ಶ್ರೀಹರಿರಾವ್ ಆದಾವಾನಿ, ಎಚ್.ಎಂ.ಪಾಟೀಲ್, ಬಸವರಾಜ ಜಮದ್ರಖಾನಿ, ಅರೆಸೈನಿಕ ಜಿಲ್ಲಾ ಅಧ್ಯಕ್ಷ ನಿಂಗಣ್ಣ ಪಾಟೀಲ, ಮಾಜಿ ಸೈನಿಕ ಭೀಮಣ್ಣ ನಾಯಕ್ ಲಕ್ಷ್ಮೀಪುರ, ಪ್ರದೀಪ್ ಅಣಬಿ, ಶ್ರವಣಕುಮಾರ ಡಿ. ನಾಯಕ ಉಪಸ್ಥಿತರಿದ್ದರು.