ವಚನಗಳ ಮೂಲಕ ಜ್ಞಾನದ ಪರಿಮಳ ಬೀರಿದ ಹೂಗಾರ ಮಾದಯ್ಯನವರು: ಡಾ.ಚಂದ್ರಶೇಖರ ಸ್ವಾಮೀಜಿ

KannadaprabhaNewsNetwork |  
Published : Oct 04, 2026, 03:15 AM IST
ಲೋಕಾಪುರ | Kannada Prabha

ಸಾರಾಂಶ

ಲೋಕಾಪುರ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹೂಗಾರ, ಜೀರ, ಗುರವ, ಪೂಜಾರ ಹಾಗೂ ಫುಲಾರಿ ಸಮಾಜ ಸೇವಾ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡ ೧೨ನೇ ಶತಮಾನದ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ–೨೦೨೬ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಲೋಕಾಪುರ: ಶಿವಶರಣ ಹೂಗಾರ ಮಾದಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜ್ಞಾನದ ಪರಿಮಳವನ್ನು ಬೀರಿದ್ದಾರೆ ಎಂದು ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹೂಗಾರ, ಜೀರ, ಗುರವ, ಪೂಜಾರ ಹಾಗೂ ಫುಲಾರಿ ಸಮಾಜ ಸೇವಾ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡ ೧೨ನೇ ಶತಮಾನದ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ–೨೦೨೬ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಶಿವಶರಣ ಹೂಗಾರ ಮಾದಯ್ಯನವರು ಹೂಗಾರ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು, ಹೂಗಾರ ಸಮಾಜದವರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೆಕೆಂದರು.

ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ ಭೀಮಪ್ಪ ಹೂಗಾರ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ಒಗ್ಗಟ್ಟಿನಿಂದ ಹೂಗಾರ ಸಮಾಜ ಸಂಘಟನೆಗೆ ಕೈ ಜೋಡಿಸಬೇಕು. ಯವಕರು ಸಮಾಜಮುಖಿಯಾಗಿ ಒಳ್ಳೆಯ ಕಾರ್ಯದಲ್ಲಿ ತೊಡಗಿ ಆದರ್ಶ ವ್ಯಕ್ತಿಗಳಾಗಬೇಕು. ಕಾಯಕ ತತ್ವದ ಮೂಲಕ ಬಸವಣ್ಣವರ ಮನಸ್ಸು ಗೆದ್ದ ಹೂಗಾರ ಮಾದಯ್ಯನವರ ಆದರ್ಶಗಳು ಯುವ ಜನತೆ, ಸಮಾಜವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಶ್ರೀಗಳಿಗೆ, ಗಣ್ಯರಿಗೆ, ಪತ್ರಕರ್ತರು, ಹಾಗೂ ದಾನಿಗಳಿಗೆ ಹೂಗಾರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಪತ್ರಕರ್ತ ಸಿದ್ದು ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾವಚಿತ್ರದ ಮರೆವಣಿಗೆ: ಇದಕ್ಕೂ ಮುನ್ನ ೧೨ನೇ ಶತಮಾನದ ಶಿವಶರಣ ಹೂಗಾರ ಮಾದಯ್ಯನವರ ಭಾವಚಿತ್ರ ಮರೆವಣಿಗೆ ವಿವಿಧ ವಾದ್ಯ ಮೇಳ, ಸುಮಂಗಲೆಯರ ಕುಭಮೇಳದೊಂದಿಗೆ ಪಟ್ಟಣದ ಹೂಗಾರ ಓಣಿಯಿಂದ ಆರಂಭಗೊಂಡು ದೇಸಾಯಿಯವರ ವಾಡೆ, ಬಸವೇಶ್ವರ ವೃತ್ತ, ಮೇನ್‌ ಬಜಾರ ಮಾರ್ಗವಾಗಿ ರಾಘವೇಂದ್ರ ಕಲ್ಯಾಣ ಮಂಟಪಕ್ಕೆ ತಲುಪಿತು.

ಈ ವೇಳೆ ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ, ಬೆಳಗಲಿಯ ಮಹಾಲಿಂಗ ಶಾಸ್ತ್ರಿಗಳು ನಿಂಗಯ್ಯ ಅಪ್ಪಯ್ಯನವರಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪಿಎಸ್‌ಐ ನಿಖಿಲ ಕಾಂಬಳೆ, ಹೂಗಾರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ ತಿಮ್ಮಣ್ಣ ಪೂಜಾರಿ, ಹೂಗಾರ ಸಮಾಜ ತಾಲೂಕಾಧ್ಯಕ್ಷ ಶ್ರೀಶೈಲ ಗುರವ , ಹೂಗಾರ ಸಮಾಜ ತಾಲೂಕು ಉಪಾಧ್ಯಕ್ಷ ಹನುಮಂತ ಗುರವ, ಸಮಾಜದ ಹಿರಿಯರು, ಮುಖಂಡರು, ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಸಮಾಜದವರು, ಹೂಗಾರ, ಜೀರ, ಗುರವ, ಪೂಜಾರ ಹಾಗೂ ಫುಲಾರಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಇದ್ದರು.

೧೨ ನೇ ಶತಮಾನದ ಶಿವಶರಣ ಶ್ರೀ ಹೂಗಾರ ಮಾದಯ್ಯನವರ ನೀಡಿದ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ಹೂಗಾರ ಸಮಾಜ ಬಲಪಡಿಸಲು ಯುವ ಸಮೂಹ ಒಗ್ಗಟ್ಟಿನಿಂದ ಕೈ ಜೊಡಿಸಬೇಕು.

-ಪ್ರವೀಣ ತಿಮ್ಮಣ್ಣ ಪೂಜಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೂಗಾರ ಸಮಾಜ ಬಾಗಲಕೋಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ: ಕಾಶಪ್ಪನವರ
ರಾಜ್ಯದ ಬರ ನಿರ್ವಹಣೆಗೆ ಸ್ಪಂದಿಸದ ಕೇಂದ್ರ: ಸಚಿವ ಕಾಶಪ್ಪನವರ