ಹೊಸ ಬೆಳಕು ಆಶ್ರಮ ಕುಟೀರ ಲೋಕಾರ್ಪಣೆ

KannadaprabhaNewsNetwork |  
Published : Dec 10, 2025, 01:45 AM IST
09ಹೊಸಬೆಳಕು  ಹೊಸಬೆಳಕು ಆಶ್ರಮದಲ್ಲಿ ಮಣ್ಣಿನ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ | Kannada Prabha

ಸಾರಾಂಶ

ಹೊಸಬೆಳಕು ಸಂಸ್ಥೆಯ ಎರಡನೇ ಯೋಜನೆ ವಿನೂತನ ಕಟ್ಟಡ ಕುಟೀರ ಇದರ ಲೋಕಾರ್ಪಣೆಗೊಂಡಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಕಲಾವಿದ ವೆಂಕಿ ಪಲಿಮಾರ್ ಇವರ ಕೈಚಳಕದಲ್ಲಿ ಮೂಡಿಬಂದಿರುವ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಮಣ್ಣಿನ ಕಲಾಕೃತಿಗಳು ಗಮನ ಸಳೆಯುತ್ತಿವೆ.

ಉಡುಪಿ: ಇಲ್ಲಿನ ಹಿರಿಯರ ಆಶ್ರಯತಾಣ ಹೊಸಬೆಳಕು ಸಂಸ್ಥೆಯ ಎರಡನೇ ಯೋಜನೆ ವಿನೂತನ ಕಟ್ಟಡ ಕುಟೀರ ಇದರ ಲೋಕಾರ್ಪಣೆಗೊಂಡಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಕಲಾವಿದ ವೆಂಕಿ ಪಲಿಮಾರ್ ಇವರ ಕೈಚಳಕದಲ್ಲಿ ಮೂಡಿಬಂದಿರುವ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಮಣ್ಣಿನ ಕಲಾಕೃತಿಗಳು ಗಮನ ಸಳೆಯುತ್ತಿವೆ.

ಕುಟೀರವನ್ನು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅವರು ಉದ್ಘಾಟಿಸಿ, ಕುಟೀರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಮಕ್ಕಳಲ್ಲಿ ಸಾಮಾಜಿಕ ಹಾಗೂ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. ಸಮಾಜದಲ್ಲಿ ಒಂದು ಸಣ್ಣ ಬದಲಾವಣೆ ತರುವ ಸಂಸ್ಥೆಯ ಪ್ರಯತ್ನಕ್ಕೆ ಆಗಮಿಸಿದ್ದ ಎಲ್ಲಾ ಅತಿಥಿಗಳು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕಿ ತನುಲಾ ಅವರು ಸಂಸ್ಥೆಯು ಬೆಳೆದು ಬಂದ ಬಗ್ಗೆ ಹಾಗೂ ಕುಟೀರದ ವೈಶಿಷ್ಟ್ಯವನ್ನು ತಿಳಿಸಿಕೊಟ್ಟರು. ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕ್ರಿಯೇಟಿವ್ ಕಾಲೇಜಿನ ಸ್ಥಾಪಕ ಗಣಪತಿ ಭಟ್, ಮುಂಬೈ ಉದ್ಯಮಿ ವಿಕ್ರಮ್ ಹೆಗ್ಡೆ, ಪ್ರಮುಖರಾದ ಡಾ. ಶಶಿಕಿರಣ್ ಆಚಾರ್, ಜಗದೀಶ್ ತೆಂಡೂಲ್ಕರ್, ಬಲರಾಮ ಭಟ್, ಶ್ರೀನಾಥ್ ಮಣಿಪಾಲ, ಯತೀಶ್ ಉಚ್ಚಿಲ ಇನ್ನಿತರರು ಉಪಸ್ಥಿತರಿದ್ದರು. ಟ್ರಸ್ಟಿ ತನಿಕ ಕಾರ್ಯಕ್ರಮ ನಿರೂಪಿಸಿದರು, ಗೌರೀಶ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!