ಹೊಸಹೊಳಲು ಕೃಷಿ ಸಹಕಾರ ಸಂಘ ಅಭಿವೃದ್ಧಿ ಪಥದತ್ತ ದಾಪುಗಾಲು

KannadaprabhaNewsNetwork |  
Published : Aug 12, 2025, 12:30 AM IST
11ಕೆಎಂಎನ್ ಡಿ14 | Kannada Prabha

ಸಾರಾಂಶ

ಸಹಕಾರ ಸಂಘವು ಜಿಲ್ಲೆಯಲ್ಲಿಯೆ ಮಾದರಿಯಾಗಿ ನಡೆದು ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ. ಈ ಸಂಘದ ಏಳ್ಗೆಗೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಕಾರಿ ಮುಖಂಡರು ಬಹಳ ಕಷ್ಟಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆ ಸಂಘದ ಅಧ್ಯಕ್ಷ ಹಾಗೂ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಿರ್ದೇಶಕರೊಂದಿಗೆ ಉದ್ಘಾಟಿಸಿ ಮಾತನಾಡಿದ ಎಚ್.ಕೆ.ಅಶೋಕ್, ಸಹಕಾರ ಸಂಘವು ಜಿಲ್ಲೆಯಲ್ಲಿಯೆ ಮಾದರಿಯಾಗಿ ನಡೆದು ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ. ಈ ಸಂಘದ ಏಳ್ಗೆಗೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಕಾರಿ ಮುಖಂಡರು ಬಹಳ ಕಷ್ಟಪಟ್ಟಿದ್ದಾರೆ ಎಂದರು.

ಈ ಹಿಂದೆ ಸಂಘದಲ್ಲಿ ಕೆಲಸ ಮಾಡಿರುವ ನೌಕರರ ಪ್ರಾಮಾಣಿಕ ಪ್ರಯತ್ನವಿದೆ. ಇದನ್ನು ಮುಂದುವರೆಸಿಕೊಂಡು ಹೋಗುವ ಅವಕಾಶ ನಮ್ಮಗಳ ಮೇಲಿದೆ. ಎಲ್ಲಿಯೂ ಚ್ಯುತಿಯಾಗದಂತೆ ಸಂಘವನ್ನು ಮುನ್ನಡೆಸಲಾಗುತ್ತಿದೆ ಎಂದರು.

ಇದೇ ವೇಳೆ ಸಂಘದ ಕಟ್ಟಡದಲ್ಲಿ ನೂತನವಾಗಿ ಆರಂಭವಾದ ನಮ್ಮ ಊರು ನಮ್ಮ ಕ್ಲಿನಿಕ್‌ನ್ನು ಕೂಡಾ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಯಿತು. ಇತ್ತೀಚೆಗೆ ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ವೈದ್ಯ ಡಾ.ಮಧುಸೂದನ್ ಅವರು ಈ ಹೊಸ ಕ್ಲಿನಿಕ್‌ಗೆ ನಿಯೋಜನೆಗೊಂಡಿದ್ದು ಅವರನ್ನು ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.

ಪುರಸಭಾ ಸದಸ್ಯ ಎಚ್.ಎನ್.ಪ್ರವೀಣ್ ಮಾತನಾಡಿ, ತಾಲೂಕಿನ ಹರಿಹರಪುರದ ಡಾ.ಮಧುಸೂದನ್ 30 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಡಾಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಸೇವೆಯು ನಮ್ಮ ಗ್ರಾಮಕ್ಕೆ ದೊರೆತಿರುವುದು ಸ್ವಾಗತಾರ್ಹ ಎಂದರು.

ಈ ವೇಳೆ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಮಾಜಿ ಅಧ್ಯಕ್ಷರಾದ ಚಿಕ್ಕೇಗೌಡ, ರಾಮೇಗೌಡ, ಎಚ್.ವಿ.ಕೃಷ್ಣೇಗೌಡ, ಪುಟ್ಟರಾಜು, ಎಚ್.ಜೆ.ಚಂದ್ರೇಗೌಡ, ಬಲರಾಮೇಗೌಡ, ಜಾನಕಮ್ಮ, ಸಚ್ಚಿನ್ ಬಾಬು, ನಾಗರಾಜು, ಬಲರಾಮ, ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಸಂಘದ ನಿರ್ದೇಶಕರಾದ ಎಚ್.ಎಸ್.ಪ್ರಕಾಶ್, ತೇಜಾವತಿ, ಯೋಗೇಶ್, ಎಚ್‌.ಎನ್. ಅಭಿಶೇಖರ್, ಕೃಷ್ಣೇಗೌಡ, ಶಶಿಧರ್, ಎಚ್.ಆರ್.ಶ್ರೀಧರ್, ಎಚ್.ಎನ್.ಪ್ರವೀಣ್, ಗೀತಾ, ಎಚ್.ಎಂ.ಕೃಷ್ಣ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಘು, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಮೋದ್.ಜಿ.ಎನ್, ಭರತ್ ಕುಮಾರ್, ಮೂರ್ತಿ, ಅನಿತಾ, ಶಕುಂತಲಾ, ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ