ಹಿರೇಕೆರೂರು ತಾಲೂಕಿನ ಬಾಳಂಬೀಡದಲ್ಲಿನ ಮಾಜಿ ಸಚಿವ ಬಿ.ಸಿ. ಪಾಟೀಲ ಗೃಹ ಕಚೇರಿಯಲ್ಲಿ ರಟ್ಟಿಹಳ್ಳಿ ತಾಲೂಕಿನ ಹೊಸಕಟ್ಟಿ ಗ್ರಾಮದ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ಹಿರೇಕೆರೂರು: ತಾಲೂಕಿನ ಬಾಳಂಬೀಡದಲ್ಲಿನ ಮಾಜಿ ಸಚಿವ ಬಿ.ಸಿ. ಪಾಟೀಲ ಗೃಹ ಕಚೇರಿಯಲ್ಲಿ ರಟ್ಟಿಹಳ್ಳಿ ತಾಲೂಕಿನ ಹೊಸಕಟ್ಟಿ ಗ್ರಾಮದ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಬಿಜೆಪಿ ತತ್ವ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡು ಹೊಸಕಟ್ಟಿಗ್ರಾಮದ ಅನೇಕ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದರು. ಪಕ್ಷಕ್ಕೆ ಸೇರ್ಪಡೆಗೊಂಡ ಅನೇಕರು ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಒಂದಾಗಿ ಗ್ರಾಮ ಮತ್ತು ಪಕ್ಷದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ವಾಗ್ದಾನ ಮಾಡಿದರು. ಗ್ರಾಮಸ್ಥರಾದ ರಂಗಪ್ಪ ಹೊನ್ನಾಳಿ, ರಂಗಪ್ಪ ಜಾಡರ್, ರಘು ಹೊನ್ನಾಳಿ, ಗಿರೀಶ ಜಾಡರ್, ಹನುಮಂತಪ್ಪ ಜಾಡರ್, ಸಂತೋಷ ಜಾಡರ್, ಪ್ರಶಾಂತ ಜಾಡರ್, ಜಯಪ್ಪ ಅಂಗರಗಟ್ಟಿ, ಶಿವಮೂರ್ತಪ್ಪ ಮಾವಿನತೋಪ, ರೇವಣೆಪ್ಪ ಜಾಡರ್, ಪರಶುರಾಮ ಜಾಡ, ಮಂಜಪ್ಪ ಜಾಡ, ಗುಡ್ಡಪ್ಪ ಚಲವಾದಿ, ಬಸವರಾಜ ಇಂಗಳಗೊಂದಿ, ಮಂಜು ತೋಟದ, ಮಲ್ಲೇಶಪ್ಪ ಜಾಡರ್, ರವಿ ಸುಣಗಾರ, ಚಂದ್ರು ಬಾರ್ಕಿ, ಸುದೀಪ ಜಾಡರ್, ಪರಶುರಾಮ ಮಾವಿನತೋಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.