ಪಾಂಡವಪುರ: ತಾಲೂಕಿನ ಹಳೇಬೀಡು ಪ್ರಾಥಮಿಕ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹೊಸಕೋಟೆ ಅರವಿಂದ್ ಅವಿರೋಧವಾಗಿ ಆಯ್ಕೆಯಾದರು.
ಹೊಸಕೋಟೆ ಅರವಿಂದ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಹೊರಗಡೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಎಲ್ಲಾ ನಿರ್ದೇಶಕರು, ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ನಂತರ ಅರವಿಂದ್ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಸಂಘದ ಎಲ್ಲಾ ನಿರ್ದೇಶಕರು, ಮುಖಂಡರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಹಾಗೂ ಎಲ್ಲಾ ನಿರ್ದೇಶಕರ ಸಹಕಾರ ಪಡೆದು ಸಂಘದ ಮೂಲಕ ರೈತರಿಗೆ ರಸಗೊಬ್ಬರ, ಸಾಲ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ಉಪಾಧ್ಯಕ್ಷ ಗುರುಮೂರ್ತಿ, ನಿರ್ದೇಶಕರಾದ ಎಚ್.ಡಿ.ಪುಟ್ಟಸ್ವಾಮೀಗೌಡ(ಪುಟ್ಟಣ್ಣ), ಎಚ್.ಕೆ.ಕುಳ್ಳೇಗೌಡ, ರಮೇಶ್, ಪುಟ್ಟರಾಮಯ್ಯ, ನಾಗಮ್ಮ, ಪುಟ್ಟಲಕ್ಷ್ಮಮ್ಮ, ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷರಾದ ಧನಂಜಯ, ಎಚ್.ಸಿ.ಚನ್ನೇಗೌಡ, ಪುಟ್ಟೇಗೌಡ, ಧರ್ಮೇಶ್, ಎಚ್.ಸಿ.ಜವರಯ್ಯ, ಪುಟ್ಟಸ್ವಾಮೀಗೌಡ, ಯೋಗೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಲುವೇಗೌಡ(ಬಕೋಡಿ), ವಿ.ಎಸ್.ಎಸ್.ಎನ್.ಬಿ.ಮಾಜಿ ಅಧ್ಯಕ್ಷ ಜೆ.ಶಿವಶಂಕರ್, ಶ್ರೇಯಸ್, ಕಾರ್ಯದರ್ಶಿ ಭವಾನಿ, ಎಚ್.ಟಿ.ನಾಗೇಶ್, ರವಿಕುಮಾರ್, ಸೇರಿದಂತೆ ಹಳೇಬೀಡು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.