ಸಾರ್ವಜನಿಕ ಪಾರ್ಕಿಂಗ್‌ ಸ್ಥಳವಾದ ಆಸ್ಪತ್ರೆ ಆವರಣ

KannadaprabhaNewsNetwork |  
Published : Aug 01, 2024, 12:30 AM ISTUpdated : Aug 01, 2024, 12:31 AM IST
ಶರ‍್ಷಿಕೆ-೩೧ಕೆ.ಎಂ.ಎಲ್.ಆರ್.೧-ಮಾಲೂರು ಪಟ್ಟಣ ರಸ್ತೆ ಅಥವಾ ಓಣಿ ಅಲ್ಲ.ಇದು ಸರ‍್ವಜನಿಕ ಆಸ್ವತ್ರೆಯ ಅವರಣದ ಚಿತ್ರಣ ವಾಗಿದ್ದು,ಅಕ್ರಮ ಪರ‍್ಕಿಂಗ್‌ ವ್ಯವಸ್ಥೆಯಿಂದ ರೋಗಿಗಳು ಆಸ್ವತ್ರೆ ಒಳಗೆ ಹೋಗಲು ಹರ ಸಾಹಸ ಪಡಬೇಕಾಗಿದೆ. | Kannada Prabha

ಸಾರಾಂಶ

ಬೆಂಗಳೂರು, ನರಸಾಪುರ ಸೇರಿದಂತೆ ಕಾರ್ಖಾನೆಗಳಿಗೆ ಬಸ್‌ನಲ್ಲಿ ತೆರಳಲೆಂದು ದ್ವಿಚಕ್ರ ವಾಹನಗಳಲ್ಲಿ ಆಗಮಿಸುತ್ತಾರೆ. ಆದರೆ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನ ನಿಲ್ಲಿಸಲು ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಅವರೆಲ್ಲ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿ ತೆರಳುತ್ತಾರೆ

ಕನ್ನಡಪ್ರಭ ವಾರ್ತೆ ಮಾಲೂರು

ಆಸ್ವತ್ರೆ ಸಮೀಪ ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ ಇದ್ದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೊಲವಾಗುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಈ ಎಲ್ಲ ಸೌಲಭ್ಯ ಹೊಂದಿರುವ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಬಸ್‌ ನಿಲ್ದಾಣವೇ ಶಾಪವಾಗಿ ಪರಿಣಿಮಿಸಿದೆ.

ಇಲ್ಲಿನ ನೂರು ಬೆಡ್‌ಗಳ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಿದ್ದು, ಜಿಲ್ಲೆಯ ಐದು ತಾಲೂಕು ಕೇಂದ್ರದಲ್ಲಿ ಅತಿಹೆಚ್ಚು ರೋಗಿಗಳ ಆಸ್ಪತ್ರೆಯಲ್ಲಿ ಚಿಕಿಕ್ಸೆಗೆಂದು ಆಗಮಿಸುತ್ತಾರೆ. ಆಸ್ಪತ್ರೆಗೆ ಎರಡು ಮುಖ್ಯದ್ವಾರಗಳಿದ್ದು, ಒಂದು ಹೊರರೋಗಿಗಳ ಪ್ರವೇಶಕ್ಕೆ ಇದ್ದರೆ ಇನ್ನೂಂದು ತುರ್ತು ಸೇವೆಯ ಪ್ರವೇಶ ದ್ವಾರ.

ವಾಹನಗಳದ್ದೇ ಸದ್ದು

ಶಾಂತ ವಾತವರಣದಲ್ಲಿ ಇರಬೇಕಾದ ಇಲ್ಲಿನ ಆಸ್ಪತ್ರೆ ಆವರಣವು ಸಾರ್ವಜನಿಕರ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿದ್ದು, ವಾಹನಗಳದ್ದೇ ಸದ್ದು. ರೋಗಿಗಳು ಆಸ್ಪತ್ರೆ ಒಳಹೋಗಲು ಹರಸಾಹಸ ಮಾಡುವಂತಾಗಿದೆ. ಬೆಂಗಳೂರು, ನರಸಾಪುರ ಸೇರಿದಂತೆ ಕಾರ್ಖಾನೆಗಳಿಗೆ ಬಸ್‌ನಲ್ಲಿ ತೆರಳಲೆಂದು ದ್ವಿಚಕ್ರ ವಾಹನಗಳಲ್ಲಿ ಆಗಮಿಸುತ್ತಾರೆ. ಆದರೆ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನ ನಿಲ್ಲಿಸಲು ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಅವರೆಲ್ಲ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿ ತೆರಳುತ್ತಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಇಲ್ಲಿರುವ ವಾಹನಗಳ ನಡುವೆ ದಾರಿ ಮಾಡಿಕೊಂಡು ಬರುವಂತಾಗಿದೆ.

ಈ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಸಂತ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ದಶಕದಿಂದ ಇದೇ ವ್ಯವಸ್ಥೆ ಮುಂದುವರಿದಿದೆ. ತಾವು ಅಧಿಕಾರಿವಹಿಸಿಕೊಂಡ ಕಾಲದಿಂದ ಸಂಬಂಧ ಪಟ್ಟ ಇಲಾಖೆಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ನಮ್ಮ ಇಲಾಖೆಯ ಮೇಲಧಿಕಾರಿಗಳಿಗೂ ತಿಳಿಸಿದ್ದೇನೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ ಸರ‍್ಪೂಣ ಯಶಸ್ಸು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆ ಸಿಬ್ಬಂದಿಗೆ ಬೆದರಿಕೆ

ಬಸ್‌ ನಿಲ್ದಾಣಕ್ಕೆ ಬರುವವರು ತಮ್ಮ ದ್ವಿಚಕ್ರ ವಾಹನಗಳನ್ನು ಆಸ್ಪತ್ರೆ ಅವರಣದಲ್ಲಿ ನಿಲ್ಲಿಸುತ್ತಿದ್ದಾರೆ. ಈ ಬಗ್ಗೆ ನಮ್ಮ ಸಿಬ್ಬಂದಿ ತಿಳಿಹೇಳಲು ಹೋದರೆ ನಮ್ಮ ಸಿಬ್ಬಂದಿಯನ್ನೇ ಬೆದರಿಸುತ್ತಾರೆ. ಇದಲ್ಲದೇ ಬಸ್‌ ನಿಲ್ದಾಣದ ಪ್ರಯಾಣಿಕರು ಹಾಗೂ ಸುತ್ತಮುತ್ತ ಪಾದಾಚಾರಿ ಅಂಗಡಿಯವರು ನೇರವಾಗಿ ಬಂದು ಆಸ್ಪತ್ರೆಯ ಶೌಚಾಲಯ ಉಪಯೋಗಿಸುತ್ತಾರೆ. ಇದನ್ನೆಲ್ಲ ತಡೆಗಟ್ಟುವುದು ಕಷ್ಟವಾಗಿದೆ. ಪೊಲೀಸ್‌ ಇಲಾಖೆಗೆ ದೂರು ನೀಡಿದರೆ ದೂರು ನೀಡಿದಾಗ ಎರಡು ದಿನ ಪಾರ್ಕಿಂಗ್‌ ನಿರ್ಬಂಧಿಸಿದ್ದರು. ನಂತರ ಯಥಾಸ್ಥಿತಿ ಮುಂದುವರಿದಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಪುರಸಭೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಿ

ಈ ಬಗ್ಗೆ ಪೊಲೀಸ್‌ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪಟ್ಟಣದ ಮುಖ್ಯ ಕೇಂದ್ರವಾಗಿರುವ ಬಸ್‌ ನಿಲ್ದಾಣ ಹಾಗೂ ಸುತ್ತಮುತ್ತ ಪುರಸಭೆಯವರು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ವಾಹನ ಸವಾರರು ಆಸ್ಪತ್ರೆ ಆವರಣ ಬಳಸುತ್ತಿದ್ದಾರೆ. ಈ ಬಗ್ಗೆ ಪುರಸಭೆಯವರು ಗಮನಹರಸಿ ಬಸ್‌ ನಿಲ್ದಾಣ ಬಳಿ ಪಾರ್ತಿಂಗ್‌ ವ್ಯವಸ್ಥೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ