ಉಡುಪಿ: ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ 2025 - 26ನೇ ಸಾಲಿನ ವಾರ್ಷಿಕ ಮಹಾಸಭೆ ಬುಧವಾರ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ತಲ್ಲೂರು ಅವರು, ಸಂಸ್ಥೆಯು ಯಶಸ್ವಿಯಾಗಿ ಇದೀಗ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘವು ಚಿನ್ನಾಭರಣ ಈಡಿನ ಸಾಲ, ವೈಯಕ್ತಿಕ ಸಾಲ, ವಾಹನ ಖರೀದಿ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಜಮೀನು ಅಡಮಾನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಅಲ್ಲದೆ ಉಳಿತಾಯ ಖಾತೆಯ ಜೊತೆಗೆ ವಿವಿಧ ಠೇವಣಿಗಳು, ಉತ್ತಮ ಆಕರ್ಷಕ ಬಡ್ಡಿ ದರದೊಂದಿಗೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೂ ಸರ್ಕಾರದ ನಿಯಮಾವಳಿಯಂತೆ ಅಧಿಕ ಬಡ್ಡಿ ದರ ನೀಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಹೋಟೆಲ್ ಉದ್ಯಮಿ, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಶ್ರೀಧರ್ ಶೇಣವ - ಜ್ಯೋತಿ ಶೇಣವ ದಂಪತಿಯನ್ನು ಸನ್ಮಾನಿಸಲಾಯಿತು. ಅಲ್ಲದೆ ಸಂಘದ ನಿರ್ದೇಶಕ ಎಂ.ವಿಠಲ ಪೈ ಹಾಗೂ ಉತ್ತಮ ಸೇವೆ ಸಲ್ಲಿಸಿದ ಸಂಘದ ಸಿಬ್ಬಂದಿ ರೇಷ್ಮಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ. ನಾಗೇಶ್ ಭಟ್, ನಿರ್ದೇಶಕರಾದ ಹರೀಶ್ ಹೆಗ್ಡೆ, ಬಿ .ಅಶೋಕ್ ಪೈ, ತಲ್ಲೂರು ಶಿವಪ್ರಸಾದ್ ಎಸ್. ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ ಹಾಗೂ ಗೋಪಾಲ ಸಿ. ಬಂಗೇರ ಉಪಸ್ಥಿತರಿದ್ದರು .